Home News LA olympics : 2028ರ ಒಲಿಂಪಿಕ್ಸ್ ಗೆ ಕ್ರಿಕೆಟ್ ಸೇರ್ಪಡೆ -ವೇಳಾಪಟ್ಟಿ ಪ್ರಕಟ !!

LA olympics : 2028ರ ಒಲಿಂಪಿಕ್ಸ್ ಗೆ ಕ್ರಿಕೆಟ್ ಸೇರ್ಪಡೆ -ವೇಳಾಪಟ್ಟಿ ಪ್ರಕಟ !!

Hindu neighbor gifts plot of land

Hindu neighbour gifts land to Muslim journalist

LA olympics : 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಪುನರಾಗಮನ ಮಾಡಲಿರುವ ಕ್ರಿಕೆಟ್‌ ಕ್ರೀಡೆಯ ವೇಳಾಪಟ್ಟಿ ಪ್ರಕಟಿಸಲಾಗಿದ್ದು ಜುಲೈ 12ರಿಂದ ಜುಲೈ 29ರತನಕ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ.‌

ಹೌದು, 2028ರ ಒಲಿಂಪಿಕ್ಸ್‌ (LA olympics 2028) ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸಲಾಗಿದೆ. ಅದರಂತೆ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028 ರ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಪಂದ್ಯಾಟಗಳು ಇರಲಿದೆ. ಈ ಪಂದ್ಯಾವಳಿಯು ಜುಲೈ 12 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಜುಲೈ 29 ರಂದು ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

ಪಂದ್ಯಗಳು 2028ರ ಜುಲೈ 12ರಿಂದ ಜುಲೈ 29ರ ತನಕ ಸಾಗಲಿವೆ. ಪದಕ ಸ್ಪರ್ಧೆಗಳು ಜು. 20 ಮತ್ತು ಜು. 29ರಂದು ನಡೆಯುತ್ತವೆ. ವೇಳಾಪಟ್ಟಿಯಂತೆ, ಎಲ್ಲವೂ “ಡಬಲ್‌ ಹೆಡರ್‌’ ಪಂದ್ಯಗಳಾಗಿವೆ. ಜು. 14 ಮತ್ತು 21ರಂದು ಯಾವುದೇ ಪಂದ್ಯಗಳಿರುವುದಿಲ್ಲ. ಪುರುಷರ ಹಾಗೂ ವನಿತೆಯರ ತಲಾ 6 ತಂಡಗಳು ಟಿ20 ಮಾದರಿಯಲ್ಲಿ ಪಂದ್ಯಗಳನ್ನು ಆಡಲಿವೆ.

128 ವರ್ಷಗಳ ಬಳಿಕ ಮರಳಿದ ಕ್ರಿಕೆಟ್

ಈ ಘೋಷಣೆಯು ಕ್ರಿಕೆಟ್ ಕ್ರೀಡೆಗೆ ಮತ್ತೊಂದು ಹೆಗ್ಗುರುತಿನ ಕ್ಷಣವಾಗಿದ್ದು, ಇತಿಹಾಸದಲ್ಲಿ ಕ್ರಿಕೆಟ್ ಎರಡನೇ ಬಾರಿಗೆ ಒಲಿಂಪಿಕ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಹಿಂದೆ 1900 ರಲ್ಲಿ ಪ್ಯಾರಿಸ್‌ನಲ್ಲಿ ಪಾದಾರ್ಪಣೆ ಮಾಡಿದ್ದ ಕ್ರಿಕೆಟ್ ಕ್ರೀಡೆಯನ್ನು ಬಳಿಕ ಕೈಬಿಡಲಾಗಿತ್ತು. ಅಂದಿನ ಚೊಚ್ಚಲ ಟೂರ್ನಿಯಲ್ಲಿ ಫ್ರಾನ್ಸ್ ವಿರುದ್ಧದ ಏಕೈಕ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಗೆದ್ದು ಚಿನ್ನ ಪದಕಕ್ಕೆ ಭಾಜನವಾಗಿತ್ತು. ಇದಾದ 128 ವರ್ಷಗಳ ನಂತರ, ನಂತರ ಮತ್ತೆ ಕ್ರಿಕೆಟ್ ಒಲಿಂಪಿಕ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದೆ.

ಇದನ್ನೂ ಓದಿ: Kerala: ಗೋಡೆ ಮೇಲಿದ್ದ 12 ಗ್ರಾಂ ‘ಚಿನ್ನದ ಬಳೆ’ ಏಗರಿಸಿದ ಕಾಗೆ – ಮರಳಿ ಸಿಕ್ತು 3 ತಿಂಗಳ ಬಳಿಕ ಒಡತಿಯ ಕೈಗೆ !! ಹೇಗೆ ಅಂತೀರಾ?