Home News 8.65% ತಲುಪಿದ ಕೋವಿಡ್ ಪಾಸಿಟಿವಿಟಿ ದರ, 100ರ ಗಡಿಯಲ್ಲಿ ಸೋಂಕಿತರ ಸಂಖ್ಯೆ

8.65% ತಲುಪಿದ ಕೋವಿಡ್ ಪಾಸಿಟಿವಿಟಿ ದರ, 100ರ ಗಡಿಯಲ್ಲಿ ಸೋಂಕಿತರ ಸಂಖ್ಯೆ

Covid-19 Guidelines

Hindu neighbor gifts plot of land

Hindu neighbour gifts land to Muslim journalist

Bengaluru: ಭಾನುವಾರ ಕರ್ನಾಟಕದಲ್ಲಿ ಒಟ್ಟು 9 ಕೋವಿಡ್ 19 ಕೇಸ್‌ಗಳು ವರದಿಯಾಗಿದ್ದು, ಇದೀಗ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 100ರ ಗಾಡಿ ತಲುಪಿದೆ. ಕಳೆದ 24 ಗಂಟೆ ಅವಧಿಯಲ್ಲಿ ಯಾವುದೇ ಸಾವು ಸಂಭವಿಸಿಲ್ಲವಾದರೂ, ಪಾಸಿಟಿವಿಟಿ ದರ ಗಾಬರಿ ಮೂಡಿಸುತ್ತಿದೆ. ಇದೀಗ ಕೋವಿಡ್ 8.65%ಕ್ಕೆ ಏರಿದೆ ಎಂದು ಮೂಲಗಳು ತಿಳಿಸಿವೆ.
ಏರುತ್ತಿರುವ ಕೊರೋನಾ ರಾಜ್ಯದ ಒಟ್ಟು10 ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಲು ಸೂಚಿಸಿದ್ದು, ಈಗಾಗಲೇ 5,000 ಟೆಸ್ಟ್ ಕಿಟ್ ಖರೀದಿಗೆ ಕ್ರಮ ಜರುಗಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದೃಢೀಕರಿಸಿದ್ದಾರೆ.

ಒಂದೇ ದಿನ 100ಕ್ಕೂ ಹೆಚ್ಚು ಟೆಸ್ಟ್, 47 ಸಕ್ರಿಯ ಕೇಸ್

ನಿನ್ನೆಗೆ ರಾಜ್ಯದಲ್ಲಿ 47 ಸಕ್ರಿಯ ಕೇಸ್‌ಗಳಿದ್ದು, 46 ಸೋಂಕಿತರನ್ನು ಮನೆಯಲ್ಲೇ ಐಸೋಲೇಟ್ ಆಗಿ ಇರುವಂತೆ ಸೂಚಿಸಲಾಗಿದೆ. ಒಬ್ಬರನ್ನು ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 104 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಇದರಲ್ಲಿ ಆರ್‌ಟಿ-ಪಿಸಿಆ‌ರ್ ಮತ್ತು ರಾಪಿಡ್ ಆಂಟಿಜನ್ ಟೆಸ್ಟ್ ಕೂಡ ಒಳಗೊಂಡಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೋವಿಡ್ ಟೆಕ್ನಿಕಲ್ ಅಡ್ಡೆಸರಿ ಕಮಿಟಿ ಹಲವು ಸೂಚನೆ ನೀಡಿದ್ದು, ಆ ಸೂಚನೆ ಮೇರೆಗೆ ರಾಜ್ಯದಲ್ಲಿ ಕೊರೊನಾ ಮೇಲೆ ನಿಗಾ ಇರಿಸಲಾಗಿದ್ದು, ಆರ್‌ಟಿ-ಪಿಸಿಆರ್ ಟೆಸ್ಟ್’ನ್ನು ರಾಜ್ಯದಲ್ಲಿ 150 ರಿಂದ 200ಕ್ಕೆ ಏರಿಸಲು ಕ್ರಮ ಜರುಗಿಸಲಾಗಿದೆ ಎಂಬ ಮಾಹಿತಿಯಿದೆ.
ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜು, NIV ಕೇಂದ್ರ ಸೇರಿದಂತೆ ರಾಜ್ಯದ 10 ಕಡೆಗಳಲ್ಲಿ ಟೆಸ್ಟಿಂಗ್ ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಮಾರು ಒಂದು ತಿಂಗಳಿಗಾಗುವಷ್ಟು ಅಂದರೆ 500 ರಷ್ಟು ಆರ್‌ಟಿ-ಪಿಸಿಆ‌ರ್ ಟೆಸ್ಟಿಂಗ್ ಕಿಟ್ ಖರೀದಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ರಾವ್ ತಿಳಿಸಿದ್ದಾರೆ.