Home News ದೇಶದಲ್ಲಿ ಮತ್ತೆ ಅಬ್ಬರಿಸುತ್ತಿದೆ ಕೊರೋನಾ | ಒಂದೇ ವಾರದಲ್ಲಿ ಶೇ. 35 ರಷ್ಟು ಕೋವಿಡ್ ಕೇಸ್...

ದೇಶದಲ್ಲಿ ಮತ್ತೆ ಅಬ್ಬರಿಸುತ್ತಿದೆ ಕೊರೋನಾ | ಒಂದೇ ವಾರದಲ್ಲಿ ಶೇ. 35 ರಷ್ಟು ಕೋವಿಡ್ ಕೇಸ್ ಹೆಚ್ಚಳ !!

Hindu neighbor gifts plot of land

Hindu neighbour gifts land to Muslim journalist

ದೇಶದಲ್ಲಿ ಕೊರೋನಾ ಅಲೆ ಮತ್ತೆ ಆರ್ಭಟಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದು , ಕಳೆದ ಒಂದು ವಾರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ 35% ಹೆಚ್ಚಳ ಕಂಡು ಬಂದಿದೆ.
ಜನವರಿಯಿಂದ ಇದೇ ಮೊದಲ ಬಾರಿಗೆ ಕೋವಿಡ್ ಕೇಸ್ ನಲ್ಲಿ ಇಷ್ಟು ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಆದರೂ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ ಕಡಿಮೆ.

ದೆಹಲಿ ಮತ್ತು ಅದರ ಪಕ್ಕದ ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಕಳೆದ ಏಳು ದಿನಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಶೇ.35ರಷ್ಟು ಏರಿಕೆಯಾಗಿದೆ. ದೇಶದ ಉಳಿದ ಭಾಗಗಳಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಮೂರು ರಾಜ್ಯಗಳಲ್ಲಿ ಅಂದರೆ ದೆಹಲಿ, ಹರಿಯಾಣ ಮತ್ತು ಉತ್ತರಪ್ರದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಕಳೆದ ವಾರ ಭಾರತದಲ್ಲಿ ಸುಮಾರು 6,610 ಹೊಸ ಪ್ರಕರಣಗಳು ವರದಿಯಾಗಿದೆ. ಅಂದರೆ ಕಳೆದ ಏಳು ದಿನಗಳಲ್ಲಿ 4,900 ರಷ್ಟು ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ. ಇದಕ್ಕೂ ಮುನ್ನ ಸುಮಾರು 7,010 ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ಬಾರಿ ಕೇರಳದ ಅಂಕಿ ಅಂಶಗಳನ್ನು ಸೇರಿಸಿಲ್ಲ. ಏಕೆಂದರೆ ಪ್ರಸ್ತುತ ವಾರದಿಂದ ರಾಜ್ಯವು ಕೋವಿಡ್ ಡೇಟಾವನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿದೆ. ಕಳೆದ ವಾರ (ಏಪ್ರಿಲ್ 4-10) ಕೇರಳದಲ್ಲಿ 2,185 ಪ್ರಕರಣಗಳು ದಾಖಲಾಗಿದ್ದವು.

ಭಾನುವಾರ ದೆಹಲಿಯಲ್ಲಿ 517 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಈಗ ದೆಹಲಿಯಲ್ಲಿ ಸಕ್ರಿಯ ಕೊರೋನಾ ಸೋಂಕಿತ ರೋಗಿಗಳ ಸಂಖ್ಯೆ 1518 ಕ್ಕೆ ಏರಿದೆ. ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ 261 ಕೊರೋನಾ ಸೋಂಕಿತರು ಸೋಂಕು ಮುಕ್ತರಾಗಿದ್ದಾರೆ. ಆದರೆ ಕಳೆದ 24 ಗಂಟೆಗಳಲ್ಲಿ ಕೊರೋನಾದಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ ಎನ್ನುವುದು ಸಮಾಧಾನಕರ ಸಂಗತಿ.