Home News Bengaluru: ಗ್ರಾಹಕರೇ ಎಚ್ಚರ! ಕೊಳೆತ ಹಣ್ಣು ಹೊಲಸು ನೀರಿನಿಂದ ಜ್ಯಾಮ್, ಬೂಸ್ಟು ಹಿಡಿದ ಬೆಳ್ಳುಳ್ಳಿಯಿಂದ...

Bengaluru: ಗ್ರಾಹಕರೇ ಎಚ್ಚರ! ಕೊಳೆತ ಹಣ್ಣು ಹೊಲಸು ನೀರಿನಿಂದ ಜ್ಯಾಮ್, ಬೂಸ್ಟು ಹಿಡಿದ ಬೆಳ್ಳುಳ್ಳಿಯಿಂದ ಪೇಸ್ಟು!

Hindu neighbor gifts plot of land

Hindu neighbour gifts land to Muslim journalist

Bengaluru: ಇತ್ತೀಚಿಗೆ ಅಲ್ಲಲ್ಲಿ ಕಲಬೆರೆಕೆ ಪ್ರಕರಣಗಳು ಪತ್ತೆಯಾಗುವುದು ಸಾಮಾನ್ಯ. ಇದೇ ವೇಳೆ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್‌ ಅಧ್ಯಕ್ಷ ರವಿಶೆಟ್ಟಿ ಬೈಂದೂರು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಅದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಕೊಳೆತ ಹಣ್ಣಿನಿಂದ ಜ್ಯಾಮ್, ಹಾಗೂ ಕೊಳೆತ ಮತ್ತು ಬಳಸಿ ಬಿಸಾಡಿದ ಬೆಳ್ಳುಳ್ಳಿ ಮತ್ತು ಟೊಮ್ಯಾಟೋನಿಂದ ಉಪ್ಪಿನಕಾಯಿ ತಯಾರಿಸುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲದೇ ಈ ಬೂಸ್ಟು ಹಿಡಿದ ಹಣ್ಣು ತರಕಾರಿಗಳ ವಾಸನೆಯನ್ನು ತೆಗೆಯಲು ವಿಷಯುಕ್ತ ರಾಸಾಯನಿಕ ಪದಾರ್ಥಗಳನ್ನೂ ಸಹ ಬಳಸಲಾಗುತ್ತಿದೆ. ಈ ಪದಾರ್ಥಗಳ ತಯಾರಿಕೆಗೆ ಹೊಲಸು ಕೊಚ್ಚೆ ನೀರು ಬಳಕೆಯಾಗುತ್ತಿದ್ದು ಸಾರ್ವಜನಿಕರ ಆರೋಗ್ಯದ ಬಗ್ಗೆ ಬೃಹತ್ ಪ್ರಶ್ನೆ ಎದ್ದಿದೆ.