Home News Supreme Court: ಮುಂಬೈ ಹೈಕೋರ್ಟ್ ನ್ಯಾಯಾಮೂರ್ತಿಯಾಗಿ BJP ವಕ್ತಾರೆ ನೇಮಿಸಿದ ಕೊಲಿಜಿಯಂ – ವಿಪಕ್ಷಗಳಿಂದ ಆಕ್ರೋಶ

Supreme Court: ಮುಂಬೈ ಹೈಕೋರ್ಟ್ ನ್ಯಾಯಾಮೂರ್ತಿಯಾಗಿ BJP ವಕ್ತಾರೆ ನೇಮಿಸಿದ ಕೊಲಿಜಿಯಂ – ವಿಪಕ್ಷಗಳಿಂದ ಆಕ್ರೋಶ

Hindu neighbor gifts plot of land

Hindu neighbour gifts land to Muslim journalist

Supreme Court: ಮುಂಬೈ ಹೈಕೋರ್ಟ್‌ನ ನ್ಯಾಯಾಧೀಶರ ಹುದ್ದೆಗೆ ಸುಪ್ರೀಂ ಕೋರ್ಟ್ ನ ಕೊಲಿಜಿಯಂ ಮೂವರು ವಕೀಲರ ಹೆಸರುಗಳನ್ನು ಶಿಫಾರಸು ಮಾಡಿದ್ದು, ಅವರಲ್ಲಿ ವಕೀಲರಾದ ಅಜಿತ್ ಭಗವಾನ್‌ರಾವ್ ಕಡೆತಂಕರ್, ಆರತಿ ಅರುಣ್ ಸಾಥೆ ಮತ್ತು ಸುಶೀಲ್ ಮನೋಹರ್ ಘೋಡೇಶ್ವರ್ ಸೇರಿದ್ದಾರೆ. ಇರವಲ್ಲಿ ಆರತಿ ಸಾಥೆ ಅವರು BJP ವಕ್ತಾರೆ ಆಗಿದ್ದು, ಅವರನ್ನು ನ್ಯಾಯಾಧೀಶೆ ಹುದ್ದೆಗೆ ಶಿಫಾರಸು ಮಾಡಿರುವುದಕ್ಕೆ ಎನ್ ಸಿಪಿ ಮತ್ತು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಈ ಬೆಳವಣಿಗೆ ಕುರಿತು ಎನ್‌ಸಿಪಿ ಪ್ರಧಾನ ಕಾರ್ಯದರ್ಶಿ, ಶಾಸಕ ರೋಹಿತ್ ಪವಾರ್ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆರತಿ ಸಾಥೆ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಆಗಿನ ಬಿಜೆಪಿ ರಾಜ್ಯ ಅಧ್ಯಕ್ಷ ಚಂದ್ರಶೇಖರ್ ಬವಾಂಕುಲೆ ಬಿಡುಗಡೆ ಮಾಡಿದ ರಾಜ್ಯ ವಕ್ತಾರರ ಪಟ್ಟಿ ಗೋಚರಿಸುತ್ತದೆ. ಆರತಿ ಸಾಥೆ ಅವರು ಬಿಜೆಪಿ ಮಹಾರಾಷ್ಟ್ರ ವಕ್ತಾರೆಯಾಗಿ ನೇಮಕಗೊಂಡಿದ್ದಾರೆ. ಸಾರ್ವಜನಿಕ ವೇದಿಕೆಯಿಂದ ಆಡಳಿತ ಪಕ್ಷವನ್ನು ಬೆಂಬಲಿಸಿದ ವ್ಯಕ್ತಿಯನ್ನು ನ್ಯಾಯಾಧೀಶರನ್ನಾಗಿ ನೇಮಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತ ಎಂದು ರೋಹಿತ್ ಪವಾರ್ ಹೇಳಿದ್ದಾರೆ. ಇದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ನಿಷ್ಪಕ್ಷಪಾತತೆಗೆ ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ ಎಂದು ಹೇಳಿದ್ದಾರೆ.