Home News ಎಳನೀರ್ ಎಳನೀರ್…..ಇದೀಗ ಲಂಡನ್ ನಲ್ಲಿ ಪಕ್ಕ ದೇಸಿ ಶೈಲಿಯ ವ್ಯಾಪಾರ

ಎಳನೀರ್ ಎಳನೀರ್…..ಇದೀಗ ಲಂಡನ್ ನಲ್ಲಿ ಪಕ್ಕ ದೇಸಿ ಶೈಲಿಯ ವ್ಯಾಪಾರ

Hindu neighbor gifts plot of land

Hindu neighbour gifts land to Muslim journalist

London: ಎಳ್‌ನೀರ್, ಎಳ್‌ನೀರ್..ಬರಿ 50 ರೂಪಾಯಿ ಈ ಡೈಲಾಗ್ ಈಗ ಲಂಡನ್ ನಲ್ಲಿ ಕೇಳಿಬರುತ್ತಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿದೆ. ಭಾರತದ ಮಾರುಕಟ್ಟೆಗಳ ಮಾರಾಟ ಶೈಲಿಯು ವಿಭಿನ್ನವಾಗಿದ್ದು, ಜನರನ್ನು ಆಕರ್ಷಣೆ ಮಾಡುವ ತಾಕತ್ತು ಭಾರತೀಯ ಮಾರುಕಟ್ಟೆ ಹಾಗೂ ಮಾರಾಟಗಾರರಿಗೆ ಒಲಿದು ಬಂದಿರುವ ಕಲೆ. ಮಾರ್ಕೆಟ್ ನಲ್ಲಿ ಮಾರಾಟಗಾರರು ಕೂಗಿ ಕರೆಯುತ್ತಿದ್ದರೆ ಕೇಳಿಸಿಕೊಂಡವರು ವಸ್ತುಗಳನ್ನು ಪರ್ಚೆಸ್ ಮಾಡಿಬಿಟ್ಟರು ಎಂದೇ ಅರ್ಥ. ಹೌದು ಇದೀಗ ಈ ಶೈಲಿ ಲಂಡನ್‌ನ ಪ್ರತಿಷ್ಠಿತ ಬೀದಿ ಬದಿಯಲ್ಲಿ ಕಾಣಿಸಿಗುತ್ತಿರುವುದು ಅಚ್ಚರಿಯ ವಿಷಯವಾಗಿದೆ.

ಎಳನೀರ್ ಎಳನೀರ್ ಅನ್ನೋ ಬ್ರಿಟಿಷ್ ವ್ಯಾಪಾರಿ ಕೂಗು ಲಂಡನ್‌ನಲ್ಲಿ ಲಂಡನ್ ನಲ್ಲಿ ಕೇಳಿಬರುತ್ತಿದ್ದು, ಈ ವಿಡಿಯೋ ಇದೀಗ ಬಹಳಷ್ಟು ವೈರಲ್ ಆಗಿದೆ. ಲಂಡನ್ ಬೀದಿಯಲ್ಲಿ ಬ್ರಿಟಿಷ್ ಏಳನೀರು ವ್ಯಾಪಾರಿ ಹಿಂದಿಯಲ್ಲಿ ಕೂಗಿ ಕೂಗಿ ನಾರಿಯಲ್ ಪಾನಿ, ನಾರಿಯಲ್ ಪಾನಿ ಪಿಲೋ(ಏಳನೀರು ಕುಡಿಯಿರಿ) ಎಂದು ಕೂಗಿ ಕೂಗಿ ಹೇಳುತ್ತಿದ್ದು, ಬಳಿಕ ತಳ್ಳೋ ಗಾಡಿಯಲ್ಲಿ ಏಳನೀರು ಇಟ್ಟುಕೊಂಡು ಬೇಕಾದವರಿಗೆ ಕೊಚ್ಚಿ ಕೊಚ್ಚಿ ಕೊಡುತ್ತಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದ್ದು, ನೋಡುಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಲಂಡನ್ ನಲ್ಲಿ ಎಳನೀರು ಹೊಸದಲ್ಲ, ಆದರೆ ಭಾರತದ ರೀತಿಯ ಮಾರಾಟ ಹೊಸದಾಗಿದ್ದು, ಲಂಡನ್ ನಲ್ಲಿ ಭಾರತೀಯರು ಉದ್ಯೋಗ ನಿಮಿತ್ತ ಹೆಚ್ಚಾಗಿ ನೆಲೆಸಿರುವುದರಿಂದ ಈತ ಭಾರತೀಯರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿ ನಾರಿಯಲ್ ಪಾನಿ ಮಾರಾಟ ಮಾಡುತ್ತಿದ್ದಾನೆ.  ಭಾರತೀಯ ಸಮುದಾಯದಿಂದ ಒಂದಷ್ಟು ಹಿಂದಿ ಪದಗಳನ್ನು, ವಾಕ್ಯಗಳನ್ನು ಈ ಬ್ರಿಟಿಷ್ ವ್ಯಾಪಾರಿ ಕಲಿತುಕೊಂಡಿದ್ದು ಇದೇ ತಂತ್ರವನ್ನು ಉಪಯೋಗಿಸಿ ಭಾರತೀಯ ಸಮುದಾಯವನ್ನೇ ಟಾರ್ಗೆಟ್ ಮಾಡಿಕೊಂಡು ಉತ್ತಮ ವ್ಯಾಪಾರ ಮಾಡುತ್ತಿದ್ದಾನೆ.