Home News Belagavi: ASP ಗೆ ವೇದಿಕೆಯಲ್ಲೇ ಹೊಡೆಯಲು ಹೋದ ಸಿಎಂ ಸಿದ್ದರಾಮಯ್ಯ !!

Belagavi: ASP ಗೆ ವೇದಿಕೆಯಲ್ಲೇ ಹೊಡೆಯಲು ಹೋದ ಸಿಎಂ ಸಿದ್ದರಾಮಯ್ಯ !!

Hindu neighbor gifts plot of land

Hindu neighbour gifts land to Muslim journalist

Belagavi : ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯ ಸಮಯದಲ್ಲಿ ಪೋಲಿಸ್ ಅಧಿಕಾರಿಯೊಬ್ಬರ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆಗಿರುವ ಘಟನೆ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕೇಂದ್ರ ಸರ್ಕಾರದ ನಿರಂತರ ಬೆಲೆ ಏರಿಕೆಯನ್ನು ಖಂಡಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷವು ಭಾರೀ ಪ್ರತಿಭಟನೆ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಆಗಮಿಸಿದ್ದರು. ವೇದಿಕೆಯಲ್ಲಿ ಅವರ ಭಾಷಣದ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುದ್ದ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಎಎಸ್‌ಪಿ ನಾರಾಯಣ ಭರಮನಿ ವೇದಿಕೆಗೆ ಹತ್ತಿ, ಸಿಎಂಗೆ ಮಾಹಿತಿ ನೀಡಲು ಮುಂದಾದರು. ಅವರು, ‘ಬಿಜೆಪಿ ಕಾರ್ಯಕರ್ತರು ವೇದಿಕೆಗೆ ನುಗ್ಗಲು ಯತ್ನಿಸುತ್ತಿದ್ದಾರೆ,’ ಎಂಬ ಮಾಹಿತಿ ನೀಡಿದರು. ಮಧ್ಯ ಪ್ರವೇಶಿಸಿದ್ದರಿಂದ ಸಿದ್ದರಾಮಯ್ಯನವರ ಕೋಪಕ್ಕೆ ಕಾರಣವಾಗಿದೆ. ವೇದಿಕೆಯತ್ತ ನುಗ್ಗುವವರನ್ನು ತಡೆದಿಲ್ಲ ಎಂಬ ಕಾರಣಕ್ಕೆ, ಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಇಷ್ಟು ಹೊತ್ತು ನೀವು ಏನು ಮಾಡುತ್ತಿದ್ದೀರಿ? ಈಗಾಗಲೇ ಪರಿಸ್ಥಿತಿ ಹದಗೆಟ್ಟ ಮೇಲೆ ಮಾಹಿತಿ ನೀಡುತ್ತಿದ್ದೀರಾ?’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಿಎಂ ಕೈ ಎತ್ತಿ ಅಧಿಕಾರಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಜನರ ಗಮನ ಸೆಳೆಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವರು ಈ ವಿಡಿಯೋವನ್ನು ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದ್ದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ