Home News CM Siddaramiah : RSS ಕಾರ್ಯಕರ್ತನಿಗೆ ಮಹತ್ವದ ಹುದ್ದೆ ನೀಡಿ ಸಿಎಂ ಸಿದ್ದರಾಮಯ್ಯ ಆದೇಶ !!...

CM Siddaramiah : RSS ಕಾರ್ಯಕರ್ತನಿಗೆ ಮಹತ್ವದ ಹುದ್ದೆ ನೀಡಿ ಸಿಎಂ ಸಿದ್ದರಾಮಯ್ಯ ಆದೇಶ !! ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಆಕ್ರೋಶ

Hindu neighbor gifts plot of land

Hindu neighbour gifts land to Muslim journalist

CM Siddaramiah : ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯನ್ನು (RSS) ಬ್ಯಾನ್ ಮಾಡಬೇಕೆಂಬ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಕಾಂಗ್ರೆಸ್ ಸಚಿವರೇ ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಆರ್ ಎಸ್ ಎಸ್ ಕಾರ್ಯಕರ್ತನಿಗೆ ಮಹತ್ವದ ಹುದ್ದೆಯಿಂದನ್ನು ನೀಡಿ ಆದೇಶ ಹೊರಡಿಸಿದೆ.

ಹೌದು, ಸರ್ಕಾರ ಆರ್​ಎಸ್​ಎಸ್ ಸೇರಿದಂತೆ ಇತರೆ ಸಂಘ, ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜನೆಗೆ ಬ್ರೇಕ್ ಹಾಕಿದೆ. ಇದರ ನಡುವೆ ಆರ್​​ಎಸ್​ಎಸ್​ ಕಾರ್ಯಕರ್ತರೊಬ್ಬರನ್ನ ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್​​​ಗೆ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಸಧ್ಯ ಇದೀಗ ಈ ವಿಚಾರ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಅಂದಹಾಗೆ ಕೆಎನ್ ರಾಜಣ್ಣ ರಾಜೀನಾಮೆ ಬಳಿಕ ಸಹಕಾರ ಇಲಾಖೆ ಸಿಎಂ ಸಿದ್ದರಾಮಯ್ಯ ಬಳಿಯೇ ಇದೆ. ತಿಪಟೂರಿನ RSS ಸದಸ್ಯ ಡಾ.ಶ್ರೀಧರ್ ಕುಮಾರ್‌ ಅವರನ್ನು ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಸದಸ್ಯರನ್ನಾಗಿ ಸರ್ಕಾರ ನೇಮಕ ಮಾಡಿದೆ. ಇದನ್ನು ಮುಖ್ಯಮಂತ್ರಿಗಳೇ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಟ್ರಸ್ಟ್​​ನ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಶ್ರೀಧರ್ ಅವರ ಟ್ರಸ್ಟ್ ಸದಸ್ಯತ್ವ ವಾಪಸ್ ಪಡೆಯುಂತೆ ಆಗ್ರಹಿಸಿದ್ದಾರೆ.