Home News CM Siddaramaiah: ನಾನು ರಾಮ ಭಕ್ತ, ಅಯೋಧ್ಯೆಗೆ ತೆರಳಿ ರಾಮನ ದರ್ಶನ ಪಡೆದೇ ತೀರುತ್ತೇನೆ –...

CM Siddaramaiah: ನಾನು ರಾಮ ಭಕ್ತ, ಅಯೋಧ್ಯೆಗೆ ತೆರಳಿ ರಾಮನ ದರ್ಶನ ಪಡೆದೇ ತೀರುತ್ತೇನೆ – ಸಿಎಂ ಸಿದ್ದರಾಮಯ್ಯ !!

Hindu neighbor gifts plot of land

Hindu neighbour gifts land to Muslim journalist

 

C M Siddaramaiah: ನಾನು ಅಯೋಧ್ಯೆಗೆ ತೆರಳುತ್ತೇನೆ, ಅಯೋಧ್ಯೆಗೆ ಹೋಗಿ ರಾಮನ ದರ್ಶನ ಪಡೆಯುತ್ತೇನೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah)ಅವರು ಹೇಳಿದ್ದಾರೆ.

ಹೌದು, ಅಯೋಧ್ಯೆಯ ರಾಮ ಮಂದಿರ(Ayodhya rama mandir) ಟ್ರಸ್ಟ್ ಮಂದಿರದ ಉದ್ಘಾಟನೆಗೆ ಬರುವಂತೆ ಕಾಂಗ್ರೆಸ್ ಗೆ ಆಮಂತ್ರಣ ನೀಡಿದ್ದರೂ ಕಾಂಗ್ರೆಸ್ ತಾನು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ, ಇದು ಬಿಜೆಪಿ ಮತ್ತು RSS ಕಾರ್ಯಕ್ರಮ ಎಂದು ಕುಹಕವಾಡಿತ್ತು. ಇದನ್ನು ಅನೇಕ ಕಾಂಗ್ರೆಸ್ ನಾಯಕರು ಸಮರ್ಥಿಸಿದರೆ, ಕೆಲವರು ವಿರೋಧಿಸಿದ್ದರು. ಆದರೀಗ ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯನವರು ನಾನು ಜನವರಿ 22ರ ನಂತರ ಅಯೋಧ್ಯೆಗೆ ಹೋಗುತ್ಯೇನೆ, ಶ್ರೀರಾಮನ(Shree rama) ದರ್ಶನ ಪಡೆಯುತ್ತೇನೆ ಎಂದು ಹೇಳಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಶ್ರೀರಾಮನಚಂದ್ರನ ವಿರೋಧಿಗಳಲ್ಲ. ನಾವು ಬಿಜೆಪಿ (BJP) ರಾಜಕಾರಣಕ್ಕೆ ಮಾತ್ರ ವಿರೋಧ. ನಾವು ಕೂಡ ಶ್ರೀರಾಮನ ಭಕ್ತರು. ಜನವರಿ 22 ನಂತರ ನಾನು ಕೂಡ ಅಯೋಧ್ಯೆಗೆ (Ayodhya Ram Mandir) ಹೋಗುತ್ತೇನೆ. ನಮ್ಮ ಕಾರ್ಯಕರ್ತರು ಕೂಡ ದೇವಸ್ಥಾನಕ್ಕೆ ಹೋಗ್ತಾರೆ. ಬಿಜೆಪಿ ಅವರು ಶ್ರೀರಾಮನನ್ನು ರಾಜಕೀಯ ಮಾಡಲು ಹೋಗುತ್ತಿದ್ದಾರೆ. ಅದರ ವಿರುದ್ಧವೇ ಹೊರತು ಶ್ರೀರಾಮನ ವಿರೋಧ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.