Home News CM Siddaramaiah: ಬಿಜೆಪಿ ಎಂದೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕವೇ...

CM Siddaramaiah: ಬಿಜೆಪಿ ಎಂದೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕವೇ ಅಧಿಕಾರ – ಸಿಎಂ

Hindu neighbor gifts plot of land

Hindu neighbour gifts land to Muslim journalist

CM Siddaramaiah: ಬಿಜೆಪಿ(BJP) ಯಾವಗಲೂ ಸಂಪೂರ್ಣ ಬಹಮತದಿಂದ ಅಧಿಕಾರಕ್ಕೆ ಬಂದಿಲ್ಲ. ಅವರು ಹಿಂಬಾಗಿಲು ಮೂಲಕವೇ ಅಧಿಕಾರಕ್ಕೆ ಬಂದಿದ್ದಾರೆ. ಹೀಗಾಗಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಮತ್ತೆ ಆಪರೇಷನ್(Operation Kamala) ಮಾಡೋ ಪ್ರಯತ್ನಗಳನ್ನು ನಡೆಸಿದ್ದಾರೆ. ಈ ಬಗ್ಗೆ ಶಾಸಕ ರವಿ ಗಣಿಗ ನನ್ನ ಮುಂದೆ ಕೂಡಾ ಹೇಳಿದ್ದಾರೆ. ಶಾಸಕರಿಗೆ 100 ಕೋಟಿ ಆಫರ್ ಮಾಡಿರುವ ಬಗ್ಗೆ ಹೇಳಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ(CM Siddaramaiha) ಇಂದು ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

ಸಿದ್ದರಾಮಯ್ಯನವರ ಮೇಲೆ ಮಾತ್ರ ಇಂತಹ ಪಿತೂರಿ ನಡೆಯುತ್ತಿರುವ ಕಾರಣವೇನು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಬಿಜೆಪಿ ಹಾಗೂ ಜೆಡಿಎಸ್(JDS) ಪಕ್ಷಗಳೆರಡೂ ಸೇರಿ , ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನ(Congress) ಶಾಸಕರು ದುಡ್ಡಿನ ಆಸೆಗೆ ಬಲಿಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದರು.

ಮುಡಾ ಪ್ರಕರಣದಲ್ಲಿ(MUDA Scam) ಸಿಎಂ ಅವರು ರಾಜಿನಾಮೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ವಿಜಯೇಂದ್ರ ತಿಳಿಸಿದರು ಎಂದು ರಾಜಿನಾಮೆ ನೀಡಲು ಸಾಧ್ಯವೇ ? ನಾಳೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಆದೇಶವನ್ನು ನಿರೀಕ್ಷಿಸಲಾಗಿದೆ. ನಾಳೆ ಸರ್ಕಾರದ ಎಲ್ಲ ಸಚಿವರು, ಎಂ ಎಲ್ ಎಗಳು, ಎಂಎಲ್ ಸಿ ಗಳು ರಾಜ್ಯಪಾಲರನ್ನು ಭೇಟಿ ಮಾಡಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ,ಜನಾರ್ಧನ ರೆಡ್ಡಿ ನಿರಾಣಿ ಮೇಲಿನ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ರಾಜ್ಯಪಾಲರನ್ನು ಒತ್ತಾಯಿಸಲಿದ್ದಾರೆ. ಇವರೆಲ್ಲರ ಪ್ರಕರಣಗಳಲ್ಲಿ ವಿಚಾರಣೆಯಾಗಿ ಚಾರ್ಜುಶೀಟ್ ಹಾಕುವ ಪ್ರಕ್ರಿಯೆ ಮಾತ್ರ ಬಾಕಿ ಇದ್ದು, ಅನುಮತಿ ಬಾಕಿ ಇದೆ ಎಂದು ತಿಳಿಸಿದರು.

ಅನುದಾನ ಹಂಚಿಕೆ ವಿಚಾರವಾಗಿ 16 ಹಣಕಾಸು ಆಯೋಗಕ್ಕೆ ಪತ್ರ ವಿಚಾರ
15 ಹಣಕಾಸು ಆಯೋಗದಲ್ಲಿ ನಮಗೆ ಬರಬೇಕಿದ್ದ 80 ಸಾವಿರ ಕೋಟಿ ಬಂದಿಲ್ಲ. ಅನುದಾನಕ್ಕಾಗಿ ನಾವು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಹೀಗಾಗಿ ಅನ್ಯಾಯ ಸರಿಪಡಿಸುವಂತೆ 16 ನೇ ಹಣಕಾಸು ಆಯೋಗಕ್ಕೆ ಮನವಿ ಮಾಡಿದ್ದೇವೆ. ಅಯೋಗ ನಮಗೆ ಸ್ಪಂಧಿಸುವ ಭರವಸೆಯಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ಪರಿಸರ ತೀರುವಳಿ ಬಂದ ತಕ್ಷಣ ಮಹಾದಾಯಿಗೆ ಚಾಲನೆ
ಮಹಾದಾಯಿ ಯೋಜನೆಗೆ ಚಾಲನೆ ನೀಡಲು ಸರ್ಕಾರ ಸಿದ್ದವಿದೆ.ಆದರೆ ಕೇಂದ್ರದಿಂದ ಪರಿಸರ ತೀರುವಳಿ ನೀಡುವುದು ಬಾಕಿ ಇದ್ದು, ತೀರುವಳಿ ನೀಡಿದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ನಟ ದರ್ಶನ್ ಪ್ರಕರಣ: ತಪ್ಪೆಸೆಗಿರುವ ಅಧಿಕಾರಿಗಳ ಅಮಾನತು
ನಟ ದರ್ಶನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಿರುವ ಪ್ರಕರಣ ಸರ್ಕಾರಕ್ಕೆ ಮುಜುಗರ ತಂದಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ನಿಟ್ಟಿನಲ್ಲಿ ಕರ್ತವ್ಯ ಲೋಪ ಎಸಗಿದ್ದ 9 ಜನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವ ಜೊತೆಗೆ ಉಳಿದ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಕಳಿಸಲಾಗಿದ್ದು, ಇಂತಹ ತಪ್ಪು ನಡೆದ ಜೈಲಿನ ಡಿಜಿಪಿಗೆ ನೋಟೀಸನ್ನೂ ನೀಡಲಾಗಿದೆ ಎಂದರು.