Home News CM Siddaramaiah : ವ್ಹೀಲ್ ಚೇರ್‌ನಲ್ಲಿ ಸಮಾವೇಶಕ್ಕೆ ಆಗಮಿಸಿದ ಸಿದ್ದರಾಮಯ್ಯ!! ಅರೆ.. ಕರ್ನಾಟಕ ಸಿಎಂ...

CM Siddaramaiah : ವ್ಹೀಲ್ ಚೇರ್‌ನಲ್ಲಿ ಸಮಾವೇಶಕ್ಕೆ ಆಗಮಿಸಿದ ಸಿದ್ದರಾಮಯ್ಯ!! ಅರೆ.. ಕರ್ನಾಟಕ ಸಿಎಂ ಗೆ ಏನಾಯ್ತು?

Hindu neighbor gifts plot of land

Hindu neighbour gifts land to Muslim journalist

CM Siddaramaiah : ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು (ಫೆಬ್ರವರಿ 11) ಇನ್ವೆಸ್ಟ್ ಕರ್ನಾಟಕ 2025ರ ಸಮ್ಮಿಟ್ (Invest Karnataka Summit) ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಅಚ್ಚರಿ ಏನಂದರೆ ಈ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯನವರು (CM Siddaramaiah) ವ್ಹೀಲ್ ಚೇರ್‌ನಲ್ಲಿ ಆಗಮಿಸುವ ಮೂಲಕ ಆತಂಕ ಮೂಡಿಸಿದ್ದಾರೆ.

ಹೌದು, ಸಮಾವೇಶಕ್ಕೆ ವ್ಹೀಲ್​ ಚೇರ್​ನಲ್ಲಿ ಬಂದ ಸಿದ್ದರಾಮಯ್ಯ ಅವರು ಎಲ್ಲರ ಗಮನಸೆಳೆದರು. ಮಂಡಿ ನೋವಿನಿಂದ ಬಳಲುತ್ತಿರುವ ಸಿದ್ದರಾಮಯ್ಯನವರು ಇತ್ತೀಚೆಗಷ್ಟೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರು. ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಇದೀಗ ಇನ್ವೆಸ್ಟ್ ಕರ್ನಾಟಕ ಸಮಾವೇಶದ ವೇದಿಕೆಗೆ ವ್ಹೀಲ್ ಚೇರ್​ನಲ್ಲೇ ಬಂದು ಆಶ್ಚರ್ಯ ಉಂಟು ಮಾಡಿದ್ದಾರೆ.

ಇನ್ನೂ ಕಾಲುನೋವಿನಿಂದ ಸಿದ್ದರಾಮಯ್ಯ ಬಜೆಟ್​ ಪೂರ್ವ ಸಿದ್ಧತೆ ಸಭೆಗಳನ್ನು ಕಾವೇರಿ ನಿವಾಸದಲ್ಲೇ ಮಾಡಿದ್ದಾರೆ. ಕೆಲವು ಸಚಿವರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಲಹೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.