Home News ಸಿಎಂ, ಡಿಸಿಎಂ ಇಂದು ಮಂಗಳೂರಿನಲ್ಲಿ ನಡೆಯುವ ಪ್ರವಾಸೋದ್ಯಮ ಸಮಾವೇಶದಲ್ಲಿ ಭಾಗಿ; ವಾಹನ ಸಂಚಾರದಲ್ಲಿ ಬದಲಾವಣೆ

ಸಿಎಂ, ಡಿಸಿಎಂ ಇಂದು ಮಂಗಳೂರಿನಲ್ಲಿ ನಡೆಯುವ ಪ್ರವಾಸೋದ್ಯಮ ಸಮಾವೇಶದಲ್ಲಿ ಭಾಗಿ; ವಾಹನ ಸಂಚಾರದಲ್ಲಿ ಬದಲಾವಣೆ

CM Post

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಜ.10 ರಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಅವರು ಮಂಗಳೂರು ಅತ್ತಾವರದಲ್ಲಿರುವ ಹೋಟೆಲ್‌ ಅವಾತಾರ್‌ ನಡೆಯಲಿರುವ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ, ಪಿಲಿಕುಲದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭ, ನರಿಂಗಾನ ಹಾಗೂ ಅಂಬ್ಲಮೊಗರುಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಕಾರಣ ಸಾರ್ವಜನಿಕ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಸಾರ್ವಜನಿಕರು ಸುಗಮ ಸಂಚಾರ ದೃಷ್ಟಿಯಿಂದ ತುರ್ತು ಸಂದರ್ಭದಲ್ಲಿ ಹೊರತುಪಡಿಸಿ ಕೆಳಕಂಡ ಮಾರ್ಗ ಉಪಯೋಗಿಸದೆ, ಬದಲಿ ಮಾರ್ಗ ಉಪಯೋಗಿಸಲು ಕೋರಿದೆ.

ಸಂಚಾರ ದಟ್ಟಣೆಯಾಗುವ ಮಾರ್ಗ:
ಕೆಂಜಾರು ಜಂಕ್ಷನ್‌-ಮರವೂರು-ಕಾವೂರು-ಬೋಂದೆಲ್‌-ಪದವಿನಂಗಡಿ-ಮೇರಿಹಿಲ್‌-ಯೆಯ್ಯಾಡಿ-ಕೆಪಿಟಿವೃತ್ತ-ಬಟ್ಟಗುಡ್ಡ-ಕದ್ರಿಕಂಬಳ-ಭಾರತ್‌ ಬೀಡಿ ಜಂಕ್ಷನ್‌-ಬಂಟ್ಸ್‌ ಹಾಸ್ಟೆಲ್‌-ಪಿವಿಎಸ್-ನವಭಾರತ್‌ ವೃತ್ತ-ಡಾ ಅಂಬೇಡ್ಕರ್‌ ಜಂಕ್ಷನ್‌-ಹಂಪನ್‌ಕಟ್ಟೆ-ಕೈರಾಲಿ ಜಂಕ್ಷನ್‌-ಅತ್ತಾವರ ಕಟ್ಟೆ-ಅವತಾರ್‌ ಹೋಟೆಲ್‌ ಎದುರಿನ ರಸ್ತೆ

ಪದವು ಜಂಕ್ಷನ್‌-ನಂತೂರು ವೃತ್ತ-ಪಂಪುವೆಲ್‌-ಎಕ್ಕೂರು-ಜಪ್ಪಿನಮೊಗರು-ಕಲ್ಲಾಪು-ತೊಕ್ಕೊಟ್ಟು-ಕುತ್ತಾರ್‌ಪದವು-ದೇರಳಕಟ್ಟೆ-ನಾಟೆಕಲ್‌-ಮಂಗಳಾಂತಿ-ಕಲ್ಕಟ-ಮಂಜನಾಡಿ-ನರಿಂಗಾನ

ಕುತ್ತಾರ್‌ಪದವು-ಕೊರಗಜ್ಜನಕಟ್ಟೆ-ಉಳಿಯ-ಅಂಬ್ಲಮೊಗರು-ಮದಕ ಜಂಕ್ಷನ್‌

ಕೆಪಿಟಿ ಜಂಕ್ಷನ್‌-ಕೊಟ್ಟಾರಚೌಕಿ-ಕೊಡಿಕಲ್‌ ಕ್ರಾಸ್‌-ಕೂಳೂರು-ಕೆಐಓಸಿಎಲ್‌ ಜಂಕ್ಷನ್‌-ತಣ್ಣೀರುಬಾವಿ-ಬ್ಲೂಪ್ಲ್ಯಾಗ್‌ ಬೀಚ್‌
ಮೇಲೆ ತಿಳಿಸಿರುವ ಮಾರ್ಗದಲ್ಲಿ ಸದರಿ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡಬಾರದು ಎಂದು ಪೊಲೀಸ್‌ ಇಲಾಖೆ ಸೂಚನೆ ನೀಡಿದೆ.