Home News D K Shivkumar : ಸಿಎಂ ಬದಲಾವಣೆ ವಿಚಾರ – ಅಂದು BSY ಭೇಟಿ ಕೊಟ್ಟು...

D K Shivkumar : ಸಿಎಂ ಬದಲಾವಣೆ ವಿಚಾರ – ಅಂದು BSY ಭೇಟಿ ಕೊಟ್ಟು CM ಆಗಿದ್ದ ದೇವಾಲಯಕ್ಕೆ ಇಂದು ರಹಸ್ಯವಾಗಿ ತೆರಳಿ ಪೂಜೆ ಸಲ್ಲಿಸಿದ ಡಿಕೆಶಿ!!

Hindu neighbor gifts plot of land

Hindu neighbour gifts land to Muslim journalist

D K Shivkumar : ಸಿಎಂ ಬದಲಾವಣೆ ಚರ್ಚೆ ನಡುವೆ ಡಿಕೆಶಿ ಭೇಟಿ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಈ ನಡುವೆ ಈ ಹಿಂದೆ ಬಿಎಸ್ ಯಡಿಯೂರಪ್ಪ ಸಹ ಸಿಎಂ ಆಗುವ ಮುನ್ನ ಭೇಟಿ ನೀಡಿದ್ದ ದೇವಾಲಯಕ್ಕೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಖಾಸಗಿ ಭೇಟಿ ನೀಡಿದ್ದಾರೆ.

ಆಷಾಢ ಶುಕ್ರವಾರದ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದ ಡಿಸಿಎಂ ಡಿಕೆ ಶಿವಕುಮಾರ್, ಪ್ರಯತ್ನಗಳಿಗಿಂತ ಪ್ರಾರ್ಥನೆಯಲ್ಲಿ ನಂಬಿಕೆ ಇಟ್ಟಿರೋದಾಗಿ ಹೇಳಿದ್ದರು. ಇದರ ನಡುವೆ ಇಂದು ಖಾಸಗಿಯಾಗಿ ಹಾಸನ ಜಿಲ್ಲೆಯ ನಾಗರ ನವಿಲೆ ದೇಗುಲಕ್ಕೆ (Nagara Navile Temple) ಗುಟ್ಟಾಗಿ ತೆರಳಿ ಡಿಕೆ ಶಿವಕುಮಾರ್ ಅವರು ಪೂಜೆ ಸಲ್ಲಿಸಿದ್ದಾರೆ.

ಅಂದಹಾಗೆ ಏಕಾಂಗಿಯಾಗಿ ದೇವರ ದರ್ಶನ ಪಡೆದಿದ್ದಾರೆ. ಅರ್ಚನೆ, ಪೂಜೆ ಮಾಡಿಸಿ ಗಿರಿಸಿದ್ದೇಶ್ವರ ದೇವರಿಗೆ ಅಭಿಷೇಕ ಸಲ್ಲಿಸಿದ್ದಾರೆ. ಲೋಕ ಕಲ್ಯಾಣಕ್ಕಾಗಿ ಸರ್ವರಿಗೂ ಒಳಿತಾಗಲಿ ಎಂದು ಪೂಜೆ ಮಾಡಲು ಅರ್ಚಕರಿಗೆ ಹೇಳಿದ್ದಾರೆ. ಅದಾ ನಂತರ ಸಂಕಲ್ಪವೊಂದನ್ನು ಮಾಡಿ ಪೂಜೆ ಸಲ್ಲಿಸಿ ಮರಳಿದ್ದಾರೆ.

ಇನ್ನು ಈ ಹಿಂದೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಪಟ್ಟಕ್ಕೇರುವ ಮುನ್ನ ಈ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಈ ದೇವಸ್ಥಾನಕ್ಕೆ ಯಾವುದೇ ಭದ್ರತೆ ಇಲ್ಲದೇ ಆಗಮಿಸಿದ್ದ ಡಿಕೆ ಶಿವಕುಮಾರ್ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ: KGF Babu: ಬಚ್ಚನ್‌ ಬಳಿ ಖರೀದಿಸಿದ್ದ ಕಾರಿಗೆ ಕೊನೆಗೂ ಟ್ಯಾಕ್ಸ್ ಕಟ್ಟಿದ ಬಾಬು !! ಅಬ್ಬಬ್ಬಾ.. ಎಷ್ಟು ಗೊತ್ತಾ?