Home News ಬೆಳಾಲು ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟದ ವತಿಯಿಂದ ಕೂಡಲ್ ಕೆರೆ ಮುಖ್ಯ ರಸ್ತೆ ಇಕ್ಕೆಲದಲ್ಲಿ...

ಬೆಳಾಲು ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಒಕ್ಕೂಟದ ವತಿಯಿಂದ ಕೂಡಲ್ ಕೆರೆ ಮುಖ್ಯ ರಸ್ತೆ ಇಕ್ಕೆಲದಲ್ಲಿ ಸ್ವಚ್ಛತಾ ಕಾರ್ಯಕ್ರಮ

Hindu neighbor gifts plot of land

Hindu neighbour gifts land to Muslim journalist

ಬೆಳಾಲು: ಜ 28 ಗ್ರಾಮ ಪಂಚಾಯತ್ ಬೆಳಾಲು ಹಾಗೂ ಸಂಜೀವಿನಿ ಒಕ್ಕೂಟ ಬೆಳಾಲು ಇದರ ಸಹಯೋಗದಲ್ಲಿ ಬೆಳಾಲು ಗ್ರಾಮದ ಕೂಡಲ್ ಕೆರೆ ಎಂಬಲ್ಲಿನ ಮುಖ್ಯರಸ್ತೆಯ ಇಕ್ಕೆಲದಲ್ಲಿದ್ದ ಕಸ ಕಡ್ಡಿಗಳನ್ನು ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ, ಪಂಚಾಯತ್ ಸಿಬ್ಬಂದಿಗಳಾದ ಪೂರ್ಣಿಮಾ,ಡೀಕಯ್ಯ,ಭುವನೇಶ್,ಶ್ರೇಷ್ಠ, ನಾಗಾಂಬಿಕಾ ಸಂಜೀವಿನಿ ಮಹಿಳಾ ಒಕ್ಕೂಟ ರಿ. ಬೆಳಾಲು ಇದರ ಅಧ್ಯಕ್ಷರು ಶಾರದಾ ಕಾರ್ಯದರ್ಶಿ ಉಮಾದೇವಿ ಪದಾಧಿಕಾರಿಗಳು ಪ್ರೇಮ, ಎಂ.ಬಿ.ಕೆ ಶ್ರೀಮತಿ ಹರಿಣಾಕ್ಷಿ, ಎಲ್. ಸಿ. ಆರ್. ಪಿ ಸರಸ್ವತಿ, ಕೃಷಿ ಸಖಿ ಸ್ವಾತಿ ಹಾಗೂ ಸ್ವಚ್ಛ ಘಟಕ ದ ಸಿಬ್ಬಂದಿಗಳಾದ ಸುಂದರಿ ಮಾಯಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ಕೆ ನಾಗರಿಕರಿoದ ಪ್ರಶಂಸೆ ವ್ಯಕ್ತವಾಯಿತು… ನಾಗರಿಕರು ರಸ್ತೆ ಬದಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಕಡ್ಡಿ ಬಿಸಾಡದೆ ಸ್ವಚ್ಛತೆಯ ಬಗ್ಗೆ ಜಾಗೃತರಾಗಿರಬೇಕೆನ್ನುವ ಸಂದೇಶವನ್ನು ನಾಗರಿಕರಲ್ಲಿ ಅರಿವು ಮೂಡಿಸಲಾಯಿತು.