Home News ಯಾವ ಮನುಷ್ಯನಿಗೂ ಕಮ್ಮಿಯಿಲ್ಲದಂತೆ ಬಟ್ಟೆ ಒಗೆಯುತ್ತಿದೆ ಈ ಚಿಂಪಾಂಜಿ !! | ತನ್ನ ಮನೆ...

ಯಾವ ಮನುಷ್ಯನಿಗೂ ಕಮ್ಮಿಯಿಲ್ಲದಂತೆ ಬಟ್ಟೆ ಒಗೆಯುತ್ತಿದೆ ಈ ಚಿಂಪಾಂಜಿ !! | ತನ್ನ ಮನೆ ಕೆಲಸಕ್ಕೆ ಜನ ಆಯಿತೆಂದು ನಿಟ್ಟಿಗರಿಂದ ಕಾಮೆಂಟ್

Hindu neighbor gifts plot of land

Hindu neighbour gifts land to Muslim journalist

ಚಿಂಪಾಂಜಿ ಮನುಷ್ಯನ ಹಲವಾರು ಗುಣಗಳನ್ನು ಹೊಂದಿದೆ. ಮನುಷ್ಯನಂತೆ ಬುದ್ಧಿಯೂ ಇದಕ್ಕಿದೆ.
ತುಂಬ ಸರಳವಾಗಿ ಮತ್ತು ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಚಿಂಪಾಂಜಿ ನಮ್ಮ ದಾಯಾದಿ (ಕಸಿನ್)! ಹಾಗಾಗಿ ಧರೆಯ ಇಡೀ ಪ್ರಾಣಿ ಸಾಮ್ರಾಜ್ಯದಲ್ಲಿ ಚಿಂಪಾಂಜಿಯೇ ಜೈವಿಕವಾಗಿ ನಮ್ಮ ಅತ್ಯಂತ ನಿಕಟ ಸಂಬಂಧಿ. ಎಷ್ಟೆಂದರೆ, ಮನುಷ್ಯರ ಮತ್ತು ಚಿಂಪಾಂಜಿಗಳ ವಂಶವಾಹಿಗಳ (ಜೀನ್ಸ್) ನಡುವೆ ಶೇಕಡ 98ರಷ್ಟು ಸಾಮ್ಯತೆ ಇದೆಯಂತೆ !!

ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ವಿಡಿಯೋ. ಈಗ ಇಲ್ಲೊಂದು ಚಿಂಪಾಂಜಿ ಮನುಷ್ಯನಂತೆ ಬಟ್ಟೆ ಒಗೆಯುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿ ನೆಟ್ಟಿಗರು ಫುಲ್ ಫ್ಲಾಟ್ ಆಗಿದ್ದಾರೆ.

ಚಿಂಪಾಂಜಿಗಳು ಮಾನವರೊಂದಿಗಿನ ಹೋಲಿಕೆಯನ್ನು ಹೊರತುಪಡಿಸಿ, ಮನುಷ್ಯನ ನಡವಳಿಕೆಯನ್ನು ಅನುಕರಿಸುವುದರಲ್ಲಿಯೂ ಹೆಸರುವಾಸಿಯಾಗಿದೆ. ಅದೇ ರೀತಿ ಈಗ ಚಿಂಪಾಂಜಿ ಬಟ್ಟೆ ಒಗೆಯುವುದನ್ನು ಹೇಳಿಕೊಡುತ್ತಿರುವ ವೀಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ಬಳಕೆದಾರ ಸಚಿನ್ ಶರ್ಮಾ ಹಂಚಿಕೊಂಡಿದ್ದು, ಹಲವಾರು ಮಂದಿ ಈ ವೀಡಿಯೋವನ್ನು ಶೇರ್ ಮಾಡಿದ್ದಾರೆ.

ಇನ್ನೂ ಈ ವೀಡಿಯೋವನ್ನು ಮೃಗಾಲಯದಲ್ಲಿ ಶೂಟ್ ಮಾಡಲಾಗಿದ್ದು, ಚಿಂಪಾಂಜಿ ಬಟ್ಟೆ ಒಗೆಯುವ ಪರಿ ನೋಡುಗರಿಗಂತು ವಿಶಿಷ್ಟವಾಗಿದೆ. ಪಕ್ಕ ‘ದೇಸಿ ಶೈಲಿಯಲ್ಲಿ’ ಈ ಚಿಂಪಾಂಜಿ ಬಟ್ಟೆ ಒಗೆಯುತ್ತಿದ್ದು, ನೆಟ್ಟಿಗರು ಫುಲ್ ಎಂಜಾಯ್ ಮಾಡಿದ್ದಾರೆ. ಚಿಂಪಾಂಜಿಯು ಹಳದಿ ಬಣ್ಣದ ಟೀ-ಶರ್ಟ್ ಮೇಲೆ ಸೋಪನ್ನು ಹಚ್ಚಿ ತನ್ನ ಕೈಯಿಂದ ಉಜ್ಜುತ್ತದೆ. ನಂತರ ಅದನ್ನು ಒಂದು ಬ್ರಷ್ ತೆಗೆದುಕೊಂಡು ಬಟ್ಟೆಯ ಮೇಲೆ ಬಲವಾಗಿ ಉಜ್ಜಿ ಕೊಳೆಯನ್ನು ತೆಗೆಯಲು ಪ್ರಯತ್ನಿಸುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

https://www.instagram.com/reel/CUrLbF2j8Sr/?utm_medium=copy_link

ವೀಡಿಯೋವನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿದಿಲ್ಲ. ಆದರೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು 2 ದಿನಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ವೀಡಿಯೋಗೆ 3 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನಗು ಮತ್ತು ಹಾಟ್ ಎಮೋಜಿಗಳಿಂದ ಕಾಮೆಂಟ್ ತುಂಬಿ ಹೋಗಿದೆ. ಇನ್ನೊಬ್ಬರು ನಾನು ನನ್ನ ಹೊಸ ಮನೆಗೆಲಸಗಾರನನ್ನು ಕಂಡುಕೊಂಡೆ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಹಲವಾರು ಕಾಮೆಂಟ್ಸ್ ಗಳು ಈ ವಿಡಿಯೋಗೆ ಬಂದಿವೆ.