Home News Hajj: 2025ರಲ್ಲಿ ಹಜ್‌ ಯಾತ್ರೆಗೆ ಮಕ್ಕಳು ನಿಷೇಧ! ಕಾರಣವೇನು?

Hajj: 2025ರಲ್ಲಿ ಹಜ್‌ ಯಾತ್ರೆಗೆ ಮಕ್ಕಳು ನಿಷೇಧ! ಕಾರಣವೇನು?

Hindu neighbor gifts plot of land

Hindu neighbour gifts land to Muslim journalist

Hajj: 2025ರ ಜೂನ್‌ನಲ್ಲಿ ಪ್ರಾರಂಭವಾಗುವ ಹಜ್‌ ಯಾತ್ರೆಗೆ ನೋಂದಣಿ ಆರಂಭವಾಗಿದೆ. ಆದರೆ 2025ರಲ್ಲಿ ಹಜ್‌ (Hajj) ಯಾತ್ರೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ (Saudi Arabia) ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಈಗಾಗಲೇ ವೀಸಾಗೆ ಸಂಬಂಧಿಸಿದಂತೆ ಹಲವು ಮಹತ್ವದ ಕ್ರಮಗಳನ್ನು ಕೂಡ ಸೌದಿ ಅರೇಬಿಯಾ ಸರ್ಕಾರ ಕೈಗೊಂಡಿದೆ. ಅದಲ್ಲದೆ ಈ ಬಾರಿ ಹಜ್‌ ಯಾತ್ರೆಗೆ ಮಕ್ಕಳನ್ನು ನಿಷೇಧಿಸಲಾಗಿದೆ ಎಂದು ಅಲ್ಲಿನ ಸರ್ಕಾರ ಘೋಷಿಸಿದೆ.

ಸದ್ಯ ಈ ಬಾರಿ ಹಜ್‌ ಯಾತ್ರೆಗೆ ಮಕ್ಕಳ ಮೇಲೆ ನಿಷೇಧವೇಕೆ? ವೀಸಾಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ತೆಗೆದುಕೊಂಡಿರುವ ಕ್ರಮಗಳೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

ಹಜ್‌ ಯಾತ್ರೆಯಲ್ಲಿ ಮಕ್ಕಳಿಗೆ ನಿಷೇಧವೇಕೆ?
ಈ ವಾರ್ಷಿಕ ಯಾತ್ರೆಯ ಸಂದರ್ಭದಲ್ಲಿ ಜನಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಜ್‌ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ. ಮಕ್ಕಳನ್ನು ಜನದಟ್ಟಣೆಯ ಅಪಾಯದಿಂದ ರಕ್ಷಿಸಲು ಹಾಗೂ ಯಾತ್ರೆಯ ಅನುಭವವನ್ನು ಮತ್ತಷ್ಟು ಸೀಮಾತೀತಗೊಳಿಸಲು ಹಜ್ ಯಾತ್ರೆಗೆ ಮಕ್ಕಳನ್ನು ನಿಷೇಧಿಸಲಾಗಿದೆ. ಅಪಾಯಕಾರಿ ಸನ್ನಿವೇಶಗಳಲ್ಲಿ ಭಾರಿ ಜನಜಂಗುಳಿಯನ್ನು ನಿಯಂತ್ರಿಸಬೇಕಾಗುವುದರಿಂದ ಹಜ್ ಸಂದರ್ಭದಲ್ಲಿ ಸಣ್ಣ ಮಕ್ಕಳು ಗಂಭೀರ ಅಪಾಯಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಸಚಿವಾಲಯ ಒತ್ತಿ ಹೇಳಿದೆ.

ಇದರೊಂದಿಗೆ, 2025ರ ಹಜ್ ಯಾತ್ರೆ ಕೈಗೊಳ್ಳಲು ಮೊದಲ ಬಾರಿಯ ಯಾತ್ರಾರ್ಥಿಗಳಿಗೆ ಆದ್ಯತೆ ನೀಡಲಾಗಿದೆ. ಎಷ್ಟು ಸಾಧ್ಯವೊ ಅಷ್ಟು ಮುಸ್ಲಿಮರಿಗೆ ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ಈ ಪವಿತ್ರ ಯಾತ್ರೆಯ ಅವಕಾಶ ಮಾಡಿಕೊಡಲು ಸೌದಿ ಅರೇಬಿಯಾ ಈ ಕ್ರಮಕ್ಕೆ ಮುಂದಾಗಿದೆ.