Home News ಮಕ್ಕಳಿಗೆ ಶಿಸ್ತುಬದ್ಧ ಜೀವನದ ದಾರಿ ತೋರಿಸಬೇಕಾದ ಗುರುಗಳೇ ತಪ್ಪು ಹಾದಿಯಲ್ಲಿ ?!!| ಸಿನಿಮಾ ಹಾಡಿಗೆ ತರಗತಿಯಲ್ಲೇ...

ಮಕ್ಕಳಿಗೆ ಶಿಸ್ತುಬದ್ಧ ಜೀವನದ ದಾರಿ ತೋರಿಸಬೇಕಾದ ಗುರುಗಳೇ ತಪ್ಪು ಹಾದಿಯಲ್ಲಿ ?!!| ಸಿನಿಮಾ ಹಾಡಿಗೆ ತರಗತಿಯಲ್ಲೇ ಕುಣಿದು ಕುಪ್ಪಳಿಸಿದ ಶಿಕ್ಷಕಿಯರು

Hindu neighbor gifts plot of land

Hindu neighbour gifts land to Muslim journalist

ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಗೆಳೆಯುವುದೇ ಶಿಕ್ಷಣದ ಸಾರ ಸರ್ವಸ್ವ’ ಎಂದು ಮಹಾತ್ಮಾ ಗಾಂಧೀಜಿಯವರು ಹೇಳಿದಂತೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಬೇಕಾದದ್ದು ಶಿಕ್ಷಕರ ಪರಮ ಕರ್ತವ್ಯ. ಇದಕ್ಕೆ ಬದ್ಧರಾಗಿದ್ದಾರೆ ಅದೆಷ್ಟೋ ಶಿಕ್ಷಕರು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಶಿಕ್ಷಕರ ದುರ್ನಡತೆಗಳು ಶಿಕ್ಷಕ ಸಮುದಾಯಕ್ಕೆ ಕಪ್ಪುಚುಕ್ಕೆಯಂತಿದೆ.

ಇದಕ್ಕೆ ತಾಜಾ ಉದಾಹರಣೆ ಎಂದಿದೆ ಈ ಘಟನೆ. ಆಗ್ರಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಖಾಲಿ ಕ್ಲಾಸ್ ರೂಂನಲ್ಲಿ ಸಿನಿಮಾ ಹಾಡಿಗೆ ನೃತ್ಯ ಮಾಡಿದ 5 ಶಿಕ್ಷಕಿಯರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗುತ್ತಿದ್ದು, ಶಿಕ್ಷಕಿಯರನ್ನು ಅಮಾನತು ಮಾಡಲಾಗಿದೆ.

ವೈರಲ್ ಆಗುತ್ತಿರುವ ವೀಡಿಯೋದಲ್ಲಿರುವ ಶಿಕ್ಷಕಿಯರನ್ನು ರಶ್ಮಿ ಸಿಸೋಡಿಯಾ, ಜೀವಿಕಾ ಕುಮಾರಿ, ಅಂಜಲಿ ಯಾದವ್, ಸುಮನ್ ಕುಮಾರಿ ಮತ್ತು ಸುಧಾ ರಾಣಿ ಎಂದು ಗುರುತಿಸಲಾಗಿದ್ದು, ಜನಪ್ರಿಯ ‘ಮೈನು ಲೆಹೆಂಗಾ ಲೆಡೆ ಮೆಹಂಗಾ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಈ ವೀಡಿಯೋವನ್ನು ಬಹಳ ಹಿಂದೆಯೇ ಸೆರೆ ಹಿಡಿಯಲಾಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ನಂತರ ಈ ಕುರಿತಂತೆ ಶಿಕ್ಷಣ ಇಲಾಖೆ ತನಿಖೆ ನಡೆಸಿದೆ.

ಈ ಬಗ್ಗೆ ಮಾತನಾಡಿದ ಮೂಲ ಶಿಕ್ಷಣಾಧಿಕಾರಿ(ಬಿಎಸ್‍ಎ) ಬ್ರಜರಾಜ್ ಸಿಂಗ್ ಅವರು, ಶಿಕ್ಷಕಿಯರು ನೃತ್ಯ ಮಾಡಿರುವ ಹಾಡು ಅನಕ್ಷರತೆಯನ್ನು ತೋರಿಸುತ್ತದೆ. ತರಗತಿಯಲ್ಲಿ ಶಿಕ್ಷಕಿಯರು ನೃತ್ಯ ಮಾಡುವ ಮೂಲಕ ನಿಯಮವನ್ನು ಉಲ್ಲಂಘಿಸಿದ್ದಾರೆ ಮತ್ತು ಶಿಕ್ಷಣ ಇಲಾಖೆಯ ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ. ಜೊತೆಗೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಹೀಗಾಗಿ ಐವರು ಶಿಕ್ಷಕಿಯರನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಖ್ನೇರಾ ಬ್ಲಾಕ್‍ನ ಸಾಧನ್‍ನಲ್ಲಿರುವ ಐವರು ಸಹಾಯಕ ಶಿಕ್ಷಕಿಯರು ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕಿಯರು ಈ ವಿಚಾರವಾಗಿ ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಶಿಕ್ಷಕಿಯರು ನೀಡಿದ ಸ್ಪಷ್ಟೀಕರಣ ತೃಪ್ತಿದಾಯಕದಲ್ಲ ಎಂದು ಎನಿಸಿತು. ನಂತರ ಅವರನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ ಎಂದಿದ್ದಾರೆ.