Home News ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಹೋಗಿ ಮಹಾನ್ ಕಳ್ಳನಾದ ತಂದೆ !! | ಮಕ್ಕಳ ಐಷಾರಾಮಿ ಜೀವನಕ್ಕೆ...

ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಹೋಗಿ ಮಹಾನ್ ಕಳ್ಳನಾದ ತಂದೆ !! | ಮಕ್ಕಳ ಐಷಾರಾಮಿ ಜೀವನಕ್ಕೆ ಮನೆಗಳ್ಳತನ ಮಾಡುತ್ತಿದ್ದಾತ ಕೊನೆಗೂ ಪೊಲೀಸ್ ಬಲೆಗೆ

Hindu neighbor gifts plot of land

Hindu neighbour gifts land to Muslim journalist

ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಸಾಕಲು ತಂದೆ ಹಗಲಿರುಳು ದುಡಿಯುತ್ತಾನೆ. ‌ ಹೀಗಿರಲು ಇಲ್ಲೊಬ್ಬ ತಂದೆ ಮಕ್ಕಳಿಗೆ ಶ್ರೀಮಂತಿಕೆ ತೋರಿಸಲು ಹೋಗಿ ತಂದೆಯೊಬ್ಬ ದೊಡ್ಡ ಕಳ್ಳನಾಗಿದ್ದಾನೆ. ತನ್ನ ಮಕ್ಕಳಿಗೆ ಬಡತನದ ಅರಿವಾಗದಂತೆ ನೋಡಿಕೊಳ್ಳಲು ಹೋಗಿ ಕೋಲಾರ ಮೂಲದ ಸಂತೋಷ್ ಕಳ್ಳತನಕ್ಕೆ ಕೈಹಾಕಿ ಸಿಕ್ಕಿಬಿದ್ದಿದ್ದಾನೆ.

ಸಂತೋಷ್ ಗೆ ಇಬ್ಬರು ಮಕ್ಕಳಿದ್ದಾರೆ. ಈ ಮಕ್ಕಳ ಐಷಾರಾಮಿ ಜೀವನಕ್ಕೆ ಸಂತೋಷ್ ಮನೆಗಳ್ಳತನವನ್ನೇ ತನ್ನ ವೃತ್ತಿ ಮಾಡಿಕೊಂಡಿದ್ದ. ರಾತ್ರಿ ಊಟ ಮುಗಿಸಿಕೊಂಡು ಏರಿಯಾದಲ್ಲಿ ಆರೋಪಿ ಬೀಟ್ ಹಾಕಿ ಕಳ್ಳತನಕ್ಕೆ ಮಾಸ್ಟರ್ ಪ್ಲಾನ್ ಮಾಡುತ್ತಿದ್ದ. ರಾತ್ರಿ 9 ಗಂಟೆಗೆ ಯಾವ ಮನೆಯಲ್ಲಿ ಲೈಟ್ ಆಫ್ ಆಗಿದೆ ಎಂದು ಆರೋಪಿ ಪರಿಶೀಲಿಸುತ್ತಿದ್ದ. ಬಳಿಕ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಸಂತೋಷ್ ಸಕಲ ಸಿದ್ಧತೆ ಮಾಡಿಕೊಂಡೇ ರೋಡಿಗಿಳಿಯುತ್ತಿದ್ದ.

ಬೆಳಗಿನ ಜಾವ ಪೊಲೀಸ್ ಬೀಟ್ ಮುಗಿಯೋದನ್ನೇ ಆರೋಪಿ ಕಾಯುತಿದ್ದ. ಖಾಕಿಪಡೆಯ ಬೀಟ್ ಮುಗಿದ ಬಳಿಕ ಮನೆಯಲ್ಲಿ ಕಳ್ಳತನ ಮಾಡಿರುವ ಚಿನ್ನ-ಬೆಳ್ಳಿ, ಹಣ ಸೇರಿದಂತೆ ಬೆಲೆ ಬಾಳುವ ವಸ್ತುಗಳೊಂದಿಗೆ ಆರೋಪಿ ಎಸ್ಕೇಪ್ ಆಗುತ್ತಿದ್ದ.

ಆರೋಪಿ ಸಂತೋಷ ಕದ್ದ ಮಾಲುಗಳನ್ನು ಮೋಹನ್ ಹಾಗೂ ಸಾವಿತ್ರಿ ಎಂಬುವರ ಮೂಲಕ ಮಾರಾಟ ಮಾಡಿಸುತ್ತಿದ್ದ. ಬಳಿಕ ಬಂದ ಹಣದಲ್ಲಿ ಮಕ್ಕಳಿಗೆ ಐಷಾರಾಮಿ ಜೀವನದ ಬದುಕು ತೋರಿಸುತ್ತಿದ್ದ. ಮಕ್ಕಳಿಗೆ ಏನೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದ ಸಂತೋಷ್ ತಾನು ಕಳ್ಳತನ ಮಾಡಿ ಬಂದ ಹಣದಿಂದ ಕೇಳಿದ ಪ್ರತಿಯೊಂದನ್ನು ಅವರಿಗೆ ಕೊಡಿಸುತ್ತಿದ್ದ ಎಂದು ತಿಳಿದುಬಂದಿದೆ. ಇಷ್ಟುದಿನ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗುತ್ತಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ಈತನ ಬಂಧನದಿಂದ ಅನೇಕ ಪ್ರಕರಣಗಳು ಇದೀಗ ಬೆಳಕಿಗೆ ಬಂದಿವೆ.