Home News Chikkamagaluru: ಚಿಕ್ಕಮಗಳೂರು ಬಂದ್ : 20 ಮಂದಿ ಕಾರ್ಯಕರ್ತರು ಅರೆಸ್ಟ್!

Chikkamagaluru: ಚಿಕ್ಕಮಗಳೂರು ಬಂದ್ : 20 ಮಂದಿ ಕಾರ್ಯಕರ್ತರು ಅರೆಸ್ಟ್!

Hindu neighbor gifts plot of land

Hindu neighbour gifts land to Muslim journalist

Chikkamagaluru: ಕಾಫಿನಾಡು ಚಿಕ್ಕಮಗಳೂರಲ್ಲಿ ಹಿಂದೂಪರ ಸಂಘಟನೆಗಳು ಕರೆ ನೀಡಿರೋ ಬಂದ್‌ ಬಹುತೇಕ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಪಹಲ್ಗಮ್ ಉಗ್ರರ ದಾಳಿ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಖಂಡಿಸಿ ಜಿಲ್ಲಾಡಳಿತದ ವಿರೋಧದ ನಡುವೆ ವಿ.ಎಚ್‌.ಪಿ. ಹಾಗೂ ಬಜರಂಗದಳ ಕಾರ್ಯಕರ್ತರು ಪ್ರೊಟೆಸ್ಟ್ ನಡೆಸಲು ಮುಂದಾದರು. ಈ ವೇಳೆ ಮೆರವಣಿಗೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಂದ್ ಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲವಾಗಿದ್ದು ಈ ನಡುವೆ ಜಿಲ್ಲಾಡಳಿತದ ವಿರೋಧದ ನಡುವೆ ಓಂಕಾರೇಶ್ವರ ದೇವಸ್ಥಾನದಿಂದ ಹನುಮಂತಪ್ಪ ವೃತ್ತದವರೆಗೂ ಹಿಂದೂ ಕಾರ್ಯಕರ್ತರು ಮೆರವಣಿಗೆ ನಡೆಸಿದ್ದು ಈ ವೇಳೆ ಸುಮಾರು 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈಗಾಗಲೇ ನಗರದ ಪ್ರಮುಖ ಕಡೆ ಪೊಲೀಸ್ ನಾಕಾಬಂಧಿ ಹಾಕಲಾಗಿದೆ.