Home News Chennai: ದಳಪತಿ ವಿಜಯ್‌ ರ್ಯಾಲಿ ವೇಳೆ ಕಾಲ್ತುಳಿತ: 39 ಜನ ಸಾವು, ನ್ಯಾಯಾಂಗ ತನಿಖೆಗೆ...

Chennai: ದಳಪತಿ ವಿಜಯ್‌ ರ್ಯಾಲಿ ವೇಳೆ ಕಾಲ್ತುಳಿತ: 39 ಜನ ಸಾವು, ನ್ಯಾಯಾಂಗ ತನಿಖೆಗೆ ಆದೇಶ, ಮಾಹಿತಿ ಕೇಳಿದ ಗೃಹ ಸಚಿವಾಲಯ,

Hindu neighbor gifts plot of land

Hindu neighbour gifts land to Muslim journalist

Chennai: ಶನಿವಾರ ತಮಿಳುನಾಡಿನ ಕರೂರ್‌ ಜಿಲ್ಲೆಯಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ನಟ ವಿಜಯ್‌ ಅವರ ರ್ಯಾಲಿಯಲ್ಲಿ ನಡೆದ ದುರಂತದಲ್ಲಿ 10 ಮಕ್ಕಳು ಮತ್ತು 17 ಮಹಿಳೆಯರು ಸೇರಿ 39 ಜನರು ಕಾಲ್ತುಳಿತದಲ್ಲಿ ಸಾವಿಗೀಡಾಗಿದ್ದು, ಈಗಾಗಲೇ 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ತಮಿಳುನಾಡು ಸರಕಾರವು ಈಗ ಈ ಘಟನೆಯ ತನಿಖೆಗಾಗಿ ನ್ಯಾಯಮೂರ್ತಿ ಅರುಣಾ ಜಗದೀಶನ್‌ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದೆ. ಪ್ರತ್ಯೇಕವಾಗಿ ಗೃಹ ಸಚಿವಾಲಯವು ರಾಜ್ಯ ಸರಕಾರಕ್ಕೆ ಕರೂರ್‌ ಕಾಲ್ತುಳಿತ ಕಾರಣದ ಕುರಿತು ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ತಮಿಳುನಾಡು ರಾಜ್ಯಪಾಲ ಆರ್‌ ಎನ್‌ ರವಿ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರ ಜೊತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಾತನಾಡಿದ್ದು, ಪರಿಸ್ಥಿತಿ ಕುರಿತು ಕೇಳಿದ್ದಾರೆ.

ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್‌ ಅವರು ತಡರಾತ್ರಿಯೇ ಕರೂರ್‌ಗೆ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದ್ದು, ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ, ಮೃತರ ಕುಟುಂಬದವರಿಗೆ ಮುಖ್ಯಮಂತ್ರಿಗಳ ಪರಿಹಾರ ಧನದಿಂದ ಹತ್ತು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಈ ಘಟನೆಯ ಕುರಿತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ತಿರುಮತಿ ಅರುಣಾ ಜಗದೀಶನ್‌ ಅವರ ನೇತೃತ್ವದಲ್ಲಿ ವಿಚಾರಣೆ ಆಯೋಗವನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.