Home News ಆಟೋಮ್ಯಾಟಿಕ್ ಕಾರು ಖರೀದಿಯ ಯೋಚನೆಯಲ್ಲಿದ್ದೀರಾ ? ಇಲ್ಲಿದೆ 4 ಲಕ್ಷದೊಳಗಿನ ಕಾರು | ಖರೀದಿಗೆ ಇರುವುದು...

ಆಟೋಮ್ಯಾಟಿಕ್ ಕಾರು ಖರೀದಿಯ ಯೋಚನೆಯಲ್ಲಿದ್ದೀರಾ ? ಇಲ್ಲಿದೆ 4 ಲಕ್ಷದೊಳಗಿನ ಕಾರು | ಖರೀದಿಗೆ ಇರುವುದು ಕೆಲವೇ ಸಮಯಾವಕಾಶ

Hindu neighbor gifts plot of land

Hindu neighbour gifts land to Muslim journalist

ಕಾಲ ಸರಿಯುತ್ತಿದ್ದಂತೆ ಹೊಸ ವಾಹನ ಖರೀದಿ ಮಾಡಲು ನಿಮಗೆ ಸಾಕಷ್ಟು ಆಯ್ಕೆಗಳಿವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮಗೆ ಬೇಕು ಬೇಕಾದ ಆಯ್ಕೆಗಳು ಹಲವಾರು ರೀತಿಯಲ್ಲಿ, ಅನುಕೂಲ ದರದಲ್ಲಿ ಲಭ್ಯ ಇದೆ. ಅಲ್ಲದೆ ಜನರ ಬೇಡಿಕೆಗಳು ಸಹ ಬದಲಾಗುತ್ತಲೇ ಇರುತ್ತವೆ ಮತ್ತು ಹೆಚ್ಚುತ್ತಲೇ ಇರುತ್ತವೆ. ಸದ್ಯ ನೀವು ನಾಲ್ಕು ಲಕ್ಷ ರೂಪಾಯಿಗಿಂತಲೂ ಕಡಿಮೆ ಬೆಲೆಗೆ ಈ ಕಾರುಗಳನ್ನು ಖರೀದಿಸಬಹುದು.

ಸದ್ಯ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರನ್ನು ಖರೀದಿಸುವ ಯೋಚನೆಯಿದ್ದರೆ, ಅಂತಹ ಕೆಲವು ವಾಹನಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ. ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್‌ನಲ್ಲಿ ಕೆಲವು ಅಗ್ಗದ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರುಗಳನ್ನು ಲಿಸ್ಟ್ ಮಾಡಲಾಗಿದೆ. ಈ ಕಾರುಗಳ ಬೆಲೆ ನಾಲ್ಕು ಲಕ್ಷ ರೂಪಾಯಿಗಿಂತಲೂ ಕಡಿಮೆಯಾಗಿದೆ. ಕಾರು ಖರೀದಿಗೆ ನೀವು ನಿಗದಿ ಮಾಡಿರುವ ಬಜೆಟ್ 4 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ಈ ಕಾರುಗಳನ್ನು ಖರೀದಿಸುವ ಬಗ್ಗೆ ಯೋಚನೆ ಮಾಡಬಹುದು.

  • ಮಾರುತಿ ಆಲ್ಟೊ K10 VXI :
    ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಹೊಂದಿರುವ ಮಾರುತಿ ಆಲ್ಟೊ K10 VXI ಇಲ್ಲಿ ಲಿಸ್ಟ್ ಮಾಡಿರುವ ಕಾರಿನಲ್ಲಿ ಒಂದು. ಇದು 2019 ರ ಮಾಡೆಲ್ ಆಗಿದ್ದು, ಇದುವರೆಗೆ 16446 ಕಿಮೀ ಕ್ರಮಿಸಿದೆ. ಪೆಟ್ರೋಲ್ ಇಂಜಿನ್ ಚಾಲಿತ ಕಾರು ಇದಾಗಿದೆ. ಅಲ್ಲದೆ, ಇದು ಫಸ್ಟ್ ಓನರ್ ಕಾರು. ಈ ಕಾರಿನ ಮೇಲೆ ಒಂದು ವರ್ಷದ ವಾರಂಟಿ ಮತ್ತು ಮೂರು ಸರ್ವಿಸ್ ನೀಡಲಾಗುತ್ತಿದೆ. ಈ ಕಾರಿಗೆ ಇಲ್ಲಿ ನಿಗದಿ ಮಾಡಿಸಿರುವ ಬೆಲೆ 360,000 ರೂಪಾಯಿ.
  • ಮಾರುತಿ ಆಲ್ಟೊ K10 VXI :
    ಈ ಕಾರಿಗೆ ಮೇಲಿನ ಕಾರಿಗಿಂತ 10,000 ರೂ. ಜಾಸ್ತಿ ಪಾವತಿಸಬೇಕಾಗುತ್ತದೆ. ಅಂದರೆ ಈ ಕಾರನ್ನು 3,70,000 ರೂ.ಗಳಿಗೆ ಮಾರಾಟಕ್ಕೆ ಇಡಲಾಗಿದೆ. 2018 ರ ಮಾದರಿಯ ಫಸ್ಟ್ ಓನರ್ ಕಾರು ಇದಾಗಿದ್ದು, ಇಲ್ಲಿಯವರೆಗೆ 41421 ಕಿಮೀ ಓಡಿದೆ. ಇದು ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಇದರ ಮೇಲೆ ಆರು ತಿಂಗಳ ವಾರಂಟಿ ಮತ್ತು ಮೂರು ಫ್ರೀ ನೀಡಲಾಗುತ್ತಿದೆ.
  • ವ್ಯಾಗನ್ R VXI AMT :
    ಈ ಕಾರಿಗೆ ನಿಗದಿ ಪಡಿಸಿರುವ ಬೆಲೆ 360,000 ರೂಪಾಯಿ. 2017 ರ ಮಾದರಿಯ ಫಸ್ಟ್ ಓನರ್ ಕಾರು ಇದಾಗಿದ್ದು, 70851 ಕಿಮೀ ಓಡಿದೆ. ಇದು ಕೂಡಾ ಪೆಟ್ರೋಲ್ ಎಂಜಿನ್ ಹೊಂದಿದೆ. ಅದಲ್ಲದೆ ಈ ಕಾರಿನ ಮೇಲೆ ಆರು ತಿಂಗಳ ವಾರಂಟಿ ಮತ್ತು ಮೂರು ಫ್ರೀ ಸರ್ವಿಸ್ ನೀಡಲಾಗುತ್ತದೆ.
  • ಮಾರುತಿ ಸೆಲೆರಿಯೊ ZXI :
    ಈ ಕಾರನ್ನು 3,60,000 ರೂಪಾಯಿಗಳಿಗೆ ಮಾರಾಟಕ್ಕೆ ಇಡಲಾಗಿದೆ. ಈ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಕಾರು, 2017ರ ಮಾಡೆಲ್ ಆಗಿದ್ದು, 196858 ಕಿ.ಮೀ. ವರೆಗೆ ಕ್ರಮಿಸಿದೆ.

ಈ ಮೇಲೆ ಪಟ್ಟಿ ಮಾಡಲಾದ ಎಲ್ಲಾ ಕಾರುಗಳು ಕ್ರಮವಾಗಿ ಲಕ್ನೋ, ಜೈಪುರ, ರಾಂಚಿ ಮತ್ತು ಗೋವಾದಲ್ಲಿ ಮಾರಾಟಕ್ಕೆ ಲಭ್ಯವಿದೆ. ಅಲ್ಲದೆ ಈ ಎಲ್ಲಾ ಕಾರುಗಳು 4ಲಕ್ಷಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.