Home News Congress Highcomand: ಸಿಎಂ ಬದಲಾವಣೆ, ಹೆಚ್ಚುವರಿ ಡಿಸಿಎಂ ಸೃಷ್ಟಿ ವಿಚಾರ- ಮಹತ್ವದ ಆದೇಶ...

Congress Highcomand: ಸಿಎಂ ಬದಲಾವಣೆ, ಹೆಚ್ಚುವರಿ ಡಿಸಿಎಂ ಸೃಷ್ಟಿ ವಿಚಾರ- ಮಹತ್ವದ ಆದೇಶ ಹೊರಡಿಸಿದ ಕಾಂಗ್ರೆಸ್ ಹೈಕಮಾಂಡ್ !!

Hindu neighbor gifts plot of land

Hindu neighbour gifts land to Muslim journalist

 

Congress Highcomand : ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ, ಡಿಸಿಎಂ ಹುದ್ದೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಶಾಸಕರು, ನಾಯಕರು ಈ ಬಗ್ಗೆ ಮಾತುನಾಡುವುದರೊಂದಿಗೆ ಇದೀಗ ಮಠಾದೀಶರು, ಸ್ವಾಮೀಜಿಗಳು ಇದಕ್ಕೆ ತಲೆಹಾಕುತ್ತಿದ್ದಾರೆ. ಆದರೀಗ ಇದೆಲ್ಲದರ ನಡುವೆ ಕಾಂಗ್ರೆಸ್ ಹೈಕಮಾಂಡ್ ಸಿಎಂ(CM) ಬದಲಾವಣೆ ಹಾಗೂ ಡಿಸಿಎಂ(DCM) ಹುದ್ದಿ ಸೃಷ್ಟಿ ಬಗ್ಗೆ ರಾಜ್ಯ ನಾಯಕರಿಗೆ ಖಡಕ್ ಸಂದೇಶ ಹೊರಡಿಸಿದೆ.

 

ಹೌದು, ರಾಜ್ಯದ ಚರ್ಚೆಗಳಿಗೆ ತಣ್ಣನೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌‍ ಹೈಕಮಾಂಡ್‌ ಸದ್ಯದ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಎಲ್ಲವೂ ಯಥಾರೀತಿಯಲ್ಲಿ ಮುಂದುವರೆಯುತ್ತವೆ ಎಂಬ ಸಂದೇಶ ರವಾನಿಸಿದೆ. ಅಲ್ಲದೆ ಯಾರೂ ಈ ಬಗ್ಗೆ ಮಾತನಾಡವಂತವರಿಗೆ, ಗೊಂದಲ ಹೇಳಿಕೆ ನೀಡುತ್ತಿದ್ದವರಿಗೆ ಇನ್ನು ಮುಂದೆ ಬಾಯಿಮುಚ್ಚಿಕೊಂಡಿರುವಂತೆ ಎಚ್ಚರಿಕೆ ನೀಡಿದೆ. ಇದರಿದ ಬೊಬ್ಬರಿಯುತ್ತಿದ್ದವರಿಗೆ ಮುಖಭಂಗವಾದಂತಾಗಿದೆ.

 

ಲೋಕಸಭಾ ಚುನಾವಣೆ ವೇಳೆಯಲ್ಲೂ ಪಕ್ಷಕ್ಕೆ ಮುಜುಗರವಾಗುವ ಹೇಳಿಕೆ ನೀಡಿ ಅವಾಂತರ ಸೃಷ್ಟಿಸಿದ್ದರು.

ಈಗ ಪಂಚಾಯತ್‌ರಾಜ್‌, ಬಿಬಿಎಂಪಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಸಂದರ್ಭದಲ್ಲಿ ಮತ್ತೆ ಗೊಂದಲಗಳನ್ನು ಸೃಷ್ಟಿ ಮಾಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್‌(DK Shivkumar) ಹೈಕಮಾಂಡ್‌ಗೆ ದೂರು ನೀಡಿದ್ದಾರು.

 

ಇದೀಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ(Ranadeepsingh Surjevala) ರಾಜ್ಯದಲ್ಲಿ ವಿವಾದಿತ ಹೇಳಿಕೆ ನೀಡುವ ಕೆಲ ನಾಯಕರುಗಳಿಗೆ ದೂರವಾಣಿ ಕರೆ ಮಾಡಿದ್ದು, ತಮಗೆ ನಿರಂತರವಾಗಿ ಪ್ರಚಾರದಲ್ಲಿರುವ ಆಸಕ್ತಿ ಇದ್ದರೆ, ತಾವು ಪಕ್ಷದಿಂದ ಪಡೆದಿರುವ ಸಾಂವಿಧಾನಿಕ ಸ್ಥಾನಮಾನಗಳಿಗೆ ರಾಜೀನಾಮೆ ನೀಡಿ, ಅನಂತರ ತಮಗಿಷ್ಟ ಬಂದಂತೆ ಹೇಳಿಕೆ ನೀಡಿ ಎಂದು ಖಾರವಾಗಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.