Home News Bigg Boss: ಬಿಗ್ ಬಾಸ್ ನಿಂದ ಚೈತ್ರಾ ಕುಂದಾಪುರ ಸೀದಾ ಜೈಲಿಗೆ !!

Bigg Boss: ಬಿಗ್ ಬಾಸ್ ನಿಂದ ಚೈತ್ರಾ ಕುಂದಾಪುರ ಸೀದಾ ಜೈಲಿಗೆ !!

Hindu neighbor gifts plot of land

Hindu neighbour gifts land to Muslim journalist

Bigg Boss: ಕನ್ನಡ ಬಿಗ್ ಬಾಸ್ ಫೈಯರ್ ಬ್ರಾಂಡ್ ಚೈತ್ರ ಕುಂದಾಪುರ (ಚೈತ್ರಾ Kundapura ) ಅವರು ಇದೀಗ ಜೈಲು ಪಾಲಾಗಿದ್ದಾರೆ. ಮೊನ್ನೆ ತಾನೆ ಜಾಮೀನು ಅರ್ಜಿ ವಿಚಾರಣೆ ಇದ್ದ ಹಿನ್ನಲೆಯಲ್ಲಿ ಬಿಗ್ ಬಾಸ್ ಮನೆಯಿಂದಲೇ ಅವರು ಕೋರ್ಟ್ ಗೂ ಹೋಗಿದ್ದರು. ಈ ಬೆನ್ನಲ್ಲೇ ಅವರು ಜೈಲು ಪಾಲಾಗಿದ್ದಾರೆ. ಜೈಲೆಂದರೇ ನಿಜವಾದ ಜೈಲಲ್ಲ ಕಂಡ್ರಿ.. ಬಿಗ್ ಬಾಸ್ ಮನೆ ಒಳಗೆ ಕಳಪೆ ಪಟ್ಟಕೊಟ್ಟು ಕಳುಹಿಸುವ ಜೈಲಿಗೆ ಹೋಗಿದ್ದಾರೆ.

ಎಸ್.. ವಾರಾಂತ್ಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಯಾರು ಉತ್ತಮ ಪ್ರದರ್ಶನ ನೀಡುವುದಿಲ್ಲವೋ ಆಸ್ಪರ್ಧಿಗೆ ಕಳಪೆ ಪಟ್ಟವನ್ನು ನೀಡಿ ಜೈಲು ಪಾಲು ಮಾಡುವುದು ವಾಡಿಕೆ. ಅಂತೆಯೇ ಈ ವಾರ ಕಳಪೆಪಟ್ಟ ಹೊತ್ತು ಚೈತ್ರ ಅವರು ಬಿಗ್ ಬಾಸ್ನ ಜೈಲಿಗೆ ಹೋಗಿದ್ದಾರೆ.

ಅಂದಹಾಗೆ ಬಿಗ್ ಬಾಸ್(Bigg Boss) ಮನೆಯಲ್ಲಿ ಬಿಗ್‌ಬಾಸ್‌ ಬಿಟ್ಟರೆ ಜೋರಾಗಿ ಮಾತನಾಡುವವರು ಅಂದರೆ ಅದು ಚೈತ್ರಾ ಕುಂದಾಪುರ. ತಮ್ಮ ಖಡಕ್ ಮಾತು, ಜೋರು ಧ್ವನಿಗೆ ಚೈತ್ರಾ ಬಿಗ್‌ಬಾಸ್‌ ಮನೆಯಲ್ಲಿ ಭಾರೀ ಫೇಮಸ್ ಆಗಿದ್ದಾರೆ. ಇತ್ತೀಚಿಗೆ ಚೈತ್ರಾ ಮನೆಯ ಎಲ್ಲಾ ಸದಸ್ಯರೊಂದಿಗೆ ಜಗಳವಾಡುತ್ತಾ ಟಾರ್ಗೇಟ್ ಆಗಿದ್ದಾರೆ. ಸಣ್ಣಪುಟ್ಟ ವಿಚಾರಕ್ಕೂ ಏರು ಧ್ವನಿಯಲ್ಲಿ ಕೂಗಾಡಿ ಮನೆಯ ಇತರ ಸದಸ್ಯರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದ ಚೈತ್ರಾ ಸದ್ಯ ಜೈಲಿಗೆ ಹೋಗಿದ್ದಾರೆ.