Home Karnataka State Politics Updates Execution by Hanging: ಮರಣ ದಂಡನೆಗೆ ನೇಣಿಗಿಂತ ಕಡಿಮೆ ನೋವಿನ ವಿಧಾನಕ್ಕೆ ಕೇಂದ್ರ ಸರ್ಕಾರದಿಂದ ಸಮಿತಿ...

Execution by Hanging: ಮರಣ ದಂಡನೆಗೆ ನೇಣಿಗಿಂತ ಕಡಿಮೆ ನೋವಿನ ವಿಧಾನಕ್ಕೆ ಕೇಂದ್ರ ಸರ್ಕಾರದಿಂದ ಸಮಿತಿ ರಚನೆ!

Execution by Hanging
Image source: Telegraph india

Hindu neighbor gifts plot of land

Hindu neighbour gifts land to Muslim journalist

Execution by Hanging: ಈ ಹಿಂದೆ ಸುಪ್ರೀಂ ಕೋರ್ಟ್‌ (supreme court), ನೇಣುಬಿಗಿದು ಮರಣದಂಡನೆ (Execution by Hanging) ವಿಧಿಸುವ ಕುರಿತು ಹೇಳಿಕೆ ನೀಡಿದ್ದು, ‘ಮಾನವ ಘನತೆಗೆ ಹೆಚ್ಚು ಆದ್ಯತೆʼ ನೀಡುವಂತಹ, ಕಡಿಮೆ ನೋವು ಕೊಡುವಂತಹ ವಿಭಿನ್ನ ವೈಜ್ಞಾನಿಕ ಮರಣದಂಡನೆ ವಿಧಾನಗಳು ಇದ್ದರೆ, ನೇಣುಬಿಗಿದು ಮರಣದಂಡನೆ ವಿಧಿಸುವುದು ಅಸಾಂವಿಧಾನಿಕ ಎಂದು ಘೋಷಿಸಬಹುದು ಎಂದು ಹೇಳಿತ್ತು.

ಮಾರ್ಚ್ 21 ರಂದು ಸರ್ವೋನ್ನತ ನ್ಯಾಯಾಲಯವು, ಕಡಿಮೆ ನೋವಿನಿಂದ ಕೂಡಿದ, ಹೆಚ್ಚು ಮಾನವ ಘನತೆಯಿಂದ ಕೂಡಿದ, ವೈಜ್ಞಾನಿಕವಾದ ಮಾದರಿಯನ್ನು ಅನುಸರಿಸಲು ಸಾಧ್ಯವಾದರೆ, ಕುತ್ತಿಗೆಗೆ ವೇಣು ಹಾಕಿ ಮರಣದಂಡನೆ ವಿಧಿಸುವುದನ್ನು ರದ್ದುಪಡಿಸಬಹುದಾಗಿದೆ ಎಂದು ಹೇಳಿದ್ದು, ಹಾಗೆಯೇ ಈ ಬಗ್ಗೆ ಚರ್ಚಿಸಲು, ಕಳೆದ ನಾಲ್ಕು ದಶಕಗಳಲ್ಲಿ ಜಾರಿಗೊಳಿಸಲಾದ ಮರಣದಂಡನೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ (supreme court) ಸೂಚನೆ ನೀಡಿತ್ತು.

ಇದೀಗ ಕೇಂದ್ರ ಸರ್ಕಾರವು (central government), ಮರಣದಂಡನೆ ಶಿಕ್ಷೆಯಲ್ಲಿ ಕುತ್ತಿಗೆಗೆ ನೇಣು ಹಾಕುವುದಕ್ಕಿಂತ (execution by hanging) ಕಡಿಮೆ ನೋವಿನ ಮತ್ತು ಹೆಚ್ಚು ಮಾನವೀಯ ವಿಧಾನವನ್ನು ಪರಿಗಣಿಸಲು ಸಮಿತಿಯನ್ನು ರಚಿಸಲಾಗುತ್ತದೆ ಎಂದು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಹಾಜರಾದ ಆಟಾರ್ನಿ ಜನರಲ್ (ಎಐ) ಆರ್. ವೆಂಕಟರಮಣ ಅವರು, “ಕಡಿಮೆ ನೋವಿನ ಮರಣದಂಡನೆ ವಿಧಾನವನ್ನು ಬಳಸುವ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿಯನ್ನು ನೇಮಿಸಲಾಗುತ್ತದೆ. ಈ ಕಾರ್ಯ ಆರಂಭಿಸಲಾಗಿದೆ” ಎಂದರು.
“ಸಮಸ್ಯೆಯನ್ನು ಪರಿಶೀಲಿಸಲು ಸಮಿತಿ ನೇಮಿಸುವಂತೆ ಸಲಹೆ ನೀಡಲಾಗಿದೆ. ಯಾವ ತಜ್ಞರನ್ನು ಈ ಕುರಿತು ನೇಮಿಸಬಹುದು. ಎಂದು ಚಿಂತಿಸಲಾಗುತ್ತಿದೆ” ಎಂದು ವೆಂಕಟರಮಣಿ ಅವರು ಪೀಠಕ್ಕೆ ತಿಳಿಸಿದರು.

 

ಇದನ್ನು ಓದಿ: Salman Khan- Aishwarya Rai: ಸಲ್ಲು ವಿರುದ್ಧ ಐಶ್ವರ್ಯಾ ರೈ ಹಲ್ಲೆ ಆರೋಪ ; ಸಲ್ಮಾನ್ ಖಾನ್ ಪ್ರತಿಕ್ರಿಯೆ ಏನು?