Home News Raj Kundra: ಸೆಲೆಬ್ರಿಟಿಗಳ ಫೆವರೇಟ್ ಗುರು, ಪ್ರೇಮಾನಂದ ಮಹಾರಾಜರಿಗೆ ಎರಡು ಕಿಡ್ನಿ ಫೇಲ್ – ತಮ್ಮ...

Raj Kundra: ಸೆಲೆಬ್ರಿಟಿಗಳ ಫೆವರೇಟ್ ಗುರು, ಪ್ರೇಮಾನಂದ ಮಹಾರಾಜರಿಗೆ ಎರಡು ಕಿಡ್ನಿ ಫೇಲ್ – ತಮ್ಮ ಕಿಡ್ನಿ ಕೊಡಲು ಮುಂದಾದ ಶಿಲ್ಪ ಶೆಟ್ಟಿ ಪತಿ ರಾಜ್ ಕುಂದ್ರಾ!!

Hindu neighbor gifts plot of land

Hindu neighbour gifts land to Muslim journalist

Raj Kundra: ರಾಜ್ ಕುಂದ್ರಾ ಮತ್ತು ಅವರ ಪತ್ನಿ ಶಿಲ್ಪಾ ಶೆಟ್ಟಿ ಇತ್ತೀಚೆಗೆ ವೃಂದಾವನದಲ್ಲಿ ಪೂಜ್ಯ ಆಧ್ಯಾತ್ಮಿಕ ನಾಯಕ ಪ್ರೇಮಾನಂದ ಮಹಾರಾಜ್ ಅವರನ್ನು ಭೇಟಿಯಾಗಲು ಬಂದಿದ್ದರು. ಈ ವೇಳೆ ಶಿಲ್ಪ ಶೆಟ್ಟಿ ಪತ್ನಿ ರಾಜಕುಂದ್ರ ಅವರು ಪ್ರೇಮಾನಂದ ಮಹಾರಾಜರಿಗೆ ತಮ್ಮ ಮೂತ್ರಪಿಂಡ ಕೊಡುವುದಾಗಿ ಹೇಳಿದ್ದಾರೆ

ಹೌದು, ಪ್ರೇಮಾನಂದ ಮಹಾರಾಜ್ ಅವರ ಎರಡೂ ಮೂತ್ರಪಿಂಡಗಳು ವಿಫಲವಾಗಿವೆ. ಕಳೆದ ಹತ್ತು ವರ್ಷಗಳಿಂದ ಅವರು ಡಯಾಲಿಸಿಸ್‌ನಲ್ಲಿದ್ದಾರೆ. ಈಗ, ತಾವು ಸಾವಿಗೆ ಹೆದರುವುದಿಲ್ಲ ಎಂದು ಹೇಳಿದರು. ಇದನ್ನು ಕೇಳಿದ ರಾಜ್, ಕೈಮುಗಿದು ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ‘ನೀವು ತುಂಬಾ ಜನಪ್ರಿಯರು. ನೀವು ಎಲ್ಲರಿಗೂ ಸ್ಫೂರ್ತಿ. ನೀವು ತುಂಬಾ ಜನರಿಗೆ ಸಹಾಯ ಮಾಡುತ್ತೀರಿ. ನಿಮ್ಮ ಸಮಸ್ಯೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ನಾನು ನಿಮ್ಮ ಸೇವೆಗೆ ಬಂದರೆ, ನಿಮ್ಮ ಹೆಸರಿನಲ್ಲಿ ನನ್ನ ಒಂದು ಮೂತ್ರಪಿಂಡವನ್ನು ದಾನ ಮಾಡುತ್ತೇನೆ’ ಎಂದು ಹೇಳಿದರು.

ಅಂದಹಾಗೆ ನನ್ನ ಎರಡು ಕಿಡ್ನಿಗಳು ವಿಫಲಗೊಂಡಿದೆ. ಕಳೆದ 10 ವರ್ಷಗಳಿಂದ ಈ ಸ್ಥಿತಿಯೊಂದಿಗೆ ಬದುಕುತ್ತಿದ್ದೇನೆ ಎಂದು ಪ್ರೇಮಾನಂದ ಮಹಾರಾಜ್ ಹೇಳಿದಾರೆ. ದೇವರ ಕರೆ ಯಾವುದೇ ಕ್ಷಣದಲ್ಲಿ ಬರಬಹುದು, ಆದರೆ ಅದಕ್ಕೆ ನಾನು ಭಯಪಡುವುದಿಲ್ಲ ಎಂದಿದ್ದಾರೆ. ಪ್ರೇಮಾನಂದವರ ಮಾತು ಕೇಳಿದ ರಾಜ್ ಕುಂದ್ರಾ ” ನಾನು ನಿಮ್ಮನ್ನು ಕಳೆದ 2 ವರ್ಷಗಳಿಂದ ಅನುಸರಿಸುತ್ತಿದ್ದೇನೆ. ನಾನು ಸಹಾಯ ಮಾಡಲು ಸಾಧ್ಯವಾದರೆ ನನ್ನ ಒಂದು ಕಿಡ್ನಿಯನ್ನು ನಿಮಗೆ ನೀಡುತ್ತೇನೆ ಎಂದು ಅವರು ಭಾವುಕರಾಗಿ ಹೇಳಿದ್ದಾರಂತೆ. ಈ ಅನಿರೀಕ್ಷಿತ ಹೇಳಿಕೆ ಶಿಲ್ಪಾ ಶೆಟ್ಟಿಯವರನ್ನು ಅಚ್ಚರಿಗೊಳಿಸಿದೆ ಎಂದು ವರದಿಯಾಗಿದೆ, ಆದರೆ ಪ್ರೇಮಾನಂದ ಮಹಾರಾಜ್ ಕೃತಜ್ಞತೆಯಿಂದ ಪ್ರತಿಕ್ರಿಯಿಸಿದರು., “ನೀವು ಸಂತೋಷವಾಗಿರುವುದು ನನಗೆ ಸಾಕು. ಕರೆ ಬರುವವರೆಗೂ, ನಾವು ಕಿಡ್ನಿ ಕಾರಣದಿಂದಾಗಿ ಈ ಜಗತ್ತನ್ನು ಬಿಡುವುದಿಲ್ಲ. ಎಂದು ಹೇಳಿದ್ದಾರೆ.

ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಒಬ್ಬ ದೊಡ್ಡ ಉದ್ಯಮಿ ಮತ್ತು ಕೋಟಿಗಟ್ಟಲೆ ಆಸ್ತಿ ಹೊಂದಿದ್ದಾರೆ. ಆದರೆ ಅವರು ಅಶ್ಲೀಲ ಪ್ರಕರಣದಲ್ಲಿ ಜೈಲಿನಲ್ಲಿ ಸಾಕಷ್ಟು ಸಮಯ ಕಳೆಯಬೇಕಾಯಿತು. ಪ್ರಸ್ತುತ, ಉದ್ಯಮಿಯೊಬ್ಬರು ಶಿಲ್ಪಾ ಮತ್ತು ರಾಜ್ ತಮಗೆ 60 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬೆನ್ನಲ್ಲೇ ಅವರು ಇಲ್ಲಿಗೆ ಆಗಮಿಸಿದ್ದಾರೆ.

Udupi: ಇಂಟರ್ನ್ಶಿಪ್ ಗೆ ಭಾರತಕ್ಕೆ ಬಂದು ಉಡುಪಿ ಶಾಲಾ ವಿದ್ಯಾರ್ಥಿಗಳಿಗೆ ಶೌಚಾಲ ಕಟ್ಟಿಕೊಟ್ಟ ವಿದೇಶ ವಿದ್ಯಾರ್ಥಿಗಳು!!