Home News Forest Dept: ‘ಕಾಡುಗಳಲ್ಲಿ ಜಾನುವಾರು ಮೇಯಿಸುವಂತಿಲ್ಲ’ ಆದೇಶ- ಸ್ಥಳೀಯರಿಗೆ ಬೇಡ ಆತಂಕ, ಹೊರ ರಾಜ್ಯದ ದನಕರುಗಳಿಗೆ...

Forest Dept: ‘ಕಾಡುಗಳಲ್ಲಿ ಜಾನುವಾರು ಮೇಯಿಸುವಂತಿಲ್ಲ’ ಆದೇಶ- ಸ್ಥಳೀಯರಿಗೆ ಬೇಡ ಆತಂಕ, ಹೊರ ರಾಜ್ಯದ ದನಕರುಗಳಿಗೆ ಮಾತ್ರ ನಿಷೇಧ ಎಂದ ಸಚಿವ ಈಶ್ವರ್ ಖಂಡ್ರೆ!!

Hindu neighbor gifts plot of land

Hindu neighbour gifts land to Muslim journalist

Forest Dept: ರಾಜ್ಯದಲ್ಲಿರುವ ಎಲ್ಲ ಅರಣ್ಯ ಪ್ರದೇಶದೊಳಗೆ ದನಕರು, ಮೇಕೆ, ಕುರಿ ಮೇಯಿಸುವುದನ್ನು ನಿಷೇಧಿಸಲು ನಿಯಮಾನುಸಾರ ಕ್ರಮ ವಹಿಸುವಂತೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದರು. ಈ ಬೆನ್ನಲೇ ರಾಜ್ಯಾದ್ಯಂತ ಕೆಲವು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಇದೀಗ ಈ ಆದೇಶದ ಕುರಿತು ಸಚಿವ ಈಶ್ವರ ಬಿ ಖಂಡ್ರೆ ಸ್ಪಸ್ಟೀಕರಣ ನೀಡಿದ್ದಾರೆ.

ಹೌದು, ಅರಣ್ಯ ಹಕ್ಕು ಕಾಯಿದೆ -2006 ಅಡಿಯಲ್ಲಿ ಅರಣ್ಯವಾಸಿಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಕಾಡಿನಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸಲು ಅವಕಾಶವಿದೆ. ಆದರೆ ನೆರೆರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ದನಕರು ತಂದು ಮೇಯಿಸುವುದಕ್ಕೆ ಮಾತ್ರ ಕಡಿವಾಣ ಹಾಕಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ನಮ್ಮ ವನ್ಯಜೀವಿಧಾಮ, ರಕ್ಷಿತಾರಣ್ಯಗಳಿಗೆ ತಮಿಳುನಾಡಿನ ಸಾವಿರಾರು ಜಾನುವಾರುಗಳನ್ನು ಮೇವಿಗಾಗಿ ಬಿಡುತ್ತಿದ್ದು ಇದಕ್ಕೆ ಕಾನೂನು ಪ್ರಕಾರ ನಿರ್ಬಂಧ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಇದನ್ನೂ ಓದಿ: Manson Session: ಸಂಸತ್ತಿನಲ್ಲಿ ಒಂದು ದಿನದ ಕಲಾಪಕ್ಕೆ ಎಷ್ಟು ಖರ್ಚಾಗುತ್ತದೆ? ಲೆಕ್ಕಾಚಾರ ನೋಡಿದ್ರೆ ನೀವು ದಂಗಾಗ್ತೀರಿ!