Home News Mangaluru: ಅಂಕೋಲಾ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ ಕಾರಿನಲ್ಲಿ ಕೋಟಿ ಹಣ ಪತ್ತೆ ಪ್ರಕರಣ; ಮಂಗಳೂರಿನ ತಲ್ಲತ್‌...

Mangaluru: ಅಂಕೋಲಾ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ ಕಾರಿನಲ್ಲಿ ಕೋಟಿ ಹಣ ಪತ್ತೆ ಪ್ರಕರಣ; ಮಂಗಳೂರಿನ ತಲ್ಲತ್‌ ಗ್ಯಾಂಗ್‌ 2 ಸದಸ್ಯರು ವಶಕ್ಕೆ

Hindu neighbor gifts plot of land

Hindu neighbour gifts land to Muslim journalist

Mangaluru: ಅಂಕೋಲಾ ಬಳಿಯ ರಾಮನಗುಳಿ ಎಂಬಲ್ಲಿ ಮಂಗಳೂರಿಗೆ ಬರುತ್ತಿದ್ದ ಕಾರನ್ನು ಅಡ್ಡಗಟ್ಟಿ ಒಂದೂವರೆ ಕೋಟಿ ರೂಪಾಯಿ ದೋಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರವಾರ ಪೊಲೀಸರು ಮಂಗಳೂರಿನ ತಲ್ಲತ್‌ ಗ್ಯಾಂಗಿನ ಇಬ್ಬರು ಸದಸ್ಯರನ್ನು ಬಂಧನ ಮಾಡಿದ್ದಾರೆ ಎಂದು ವರದಿಯಾಗಿದೆ.

ಮಂಗಳೂರಿನ ಜ್ಯುವೆಲ್ಲರಿ ಮಾಲೀಕ ರಾಜೇಶ ಪವಾರ್‌ ಎಂಬುವವರಿಗೆ ಸೇರಿದ್ದ ಕಾರು ಜ.28 ರಂದು ಅಂಕೋಲ ರಾಮನಗುಳಿ ಹೆದ್ದಾರಿ ಬದಿ ದೊರಕಿದ್ದು, ಅದರಲ್ಲಿ 1.14 ಕೋಟಿ ನಗದು ಪತ್ತೆಯಾಗಿತ್ತು. ರಾಜೇಶ್‌ ಪವಾರ್‌ ಮತ್ತು ಕಾರಿನ ಚಾಲಕರು ಘಟನೆ ನಡೆದ ಕೆಲವು ದಿನಗಳ ಬಳಿಕ ಅಂಕೋಲಾ ಠಾಣೆಗೆ ತೆರಳಿ ದರೋಡಿ ಕುರಿತು ಪ್ರಕರಣ ದಾಖಲಿಸಿದ್ದರು.

ದರೋಡೆ ಕುರಿತು ತನಿಖೆ ಕೈಗೆತ್ತಿಕೊಂಡ ಪೊಲೀಸರು ಚಾಲಕರಿಬ್ಬರನ್ನು ಬಂಧನ ಮಾಡಿ ತನಿಖೆ ಮಾಡಿದಾಗ ಕೆಲವೊಂದು ಮಹತ್ವದ ಮಾಹಿತಿ ಹೊರಬಂದಿದೆ. ಮಂಗಳೂರು ಹೊರವಲಯದ ಅಡ್ಯಾರ್‌, ಬಜಾಲ್‌ನಲ್ಲಿ ಸಕ್ರಿಯವಾಗಿರುವ ತಲ್ಲತ್‌ ಗ್ಯಾಂಗ್‌ನ ಸದಸ್ಯರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.