Home News Bharat Bandh: ಆಗಸ್ಟ್ 21ಕ್ಕೆ ಭಾರತ್ ಬಂದ್‌ಗೆ ಕರೆ; ಈ ಎಲ್ಲಾ ಸೇವೆ ಅಲಭ್ಯ!

Bharat Bandh: ಆಗಸ್ಟ್ 21ಕ್ಕೆ ಭಾರತ್ ಬಂದ್‌ಗೆ ಕರೆ; ಈ ಎಲ್ಲಾ ಸೇವೆ ಅಲಭ್ಯ!

Hindu neighbor gifts plot of land

Hindu neighbour gifts land to Muslim journalist

Bharat Bandh: ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಮೀಸಲಾತಿ ಕುರಿತು ತೀರ್ಪಿನ ವಿರುದ್ಧ, ರಿಸರ್ವೇಶನ್ ಬಚಾವೋ ಸಂಘರ್ಷ ಸಮಿತಿ ಆಗಸ್ಟ್ 21ಕ್ಕೆ ಭಾರತ್ ಬಂದ್  (Bharat Bandh) ಕರೆ ನೀಡಿದೆ. ಸುಪ್ರೀಂ ಕೋರ್ಟ್ ಈಗಾಗಲೇ ನೀಡಿದ ಮೀಸಲಾತಿ  ಆದೇಶ ಹಿಂಪಡೆದು, ತಮ್ಮ ಬೇಡಿಕೆ ಈಡೇರಿಸುವಂತೆ ನಡೆಸುತ್ತಿರುವ ಪ್ರತಿಭಟನೆಯಾಗಿದೆ.

ಆಗಸ್ಟ್ 1 ರಂದು ಸುಪ್ರೀ ಕೋರ್ಟ್, ಪರಿಶಿಷ್ಠ ಜಾತಿ ಹಾಗೂ ಬುಡುಕಟ್ಟು ಸಮುದಾಯದಲ್ಲಿ ಸಬ್ ಕೆಟರಿ ರಚಿಸಿ ನಿಜಕ್ಕೂ ಅಗತ್ಯವಿರುವ ಪಂಗಡಗಳಿಗೆ ಮೀಸಲಾತಿ ನೀಡಬಹುದು ಎಂದು ತೀರ್ಪು ನೀಡಿದೆ. ಆದರೆ ಇದು ಪರಿಶಿಷ್ಠ ಜಾತಿ ಹಾಗೂ ಬುಡಕಟ್ಟು ಸಮುದಾಯದ ಮೀಸಲಾತಿಯನ್ನು ಕಸಿದುಕೊಂಡಿದೆ ಎಂದು ಹೋರಾಟ ಆರಂಭಗೊಂಡಿದೆ.

ಮುಖ್ಯವಾಗಿ ಬಹುಜನ್ ಸಂಘಟನೆ ಕೂಡ ಭಾರತ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಇನ್ನು ಪ್ರತಿಭಟನೆ ತೀವ್ರಗೊಳ್ಳುವ ರಾಜ್ಯಗಳಲ್ಲಿ  ಆಂಬ್ಯುಲೆನ್ಸ್ಗಳಂತಹ ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತವೆ. ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೇವೆಗಳು ಸಹ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಆದಾಗ್ಯೂ, ಸಾರ್ವಜನಿಕ ಸಾರಿಗೆಯನ್ನು ಸಾಮಾನ್ಯವಾಗಿ ಮುಚ್ಚಲಾಗುತ್ತದೆ ಮತ್ತು ಖಾಸಗಿ ಕಚೇರಿಗಳು ಬಾಗಿಲು ಮುಚ್ಚುತ್ತವೆ. ಅಂಗಡಿ ಮುಂಗಟ್ಟುಗಳು ಬಂದ್ ಆಗುವ ಸಾಧ್ಯತೆ ಇದೆ.

ಈಗಾಗಲೇ ಭಾರತ್ ಬಂದ್ ಬಗ್ಗೆ ಸಾಮಾಜಿಕ ಮಾಧ್ಯಮ  x ನಲ್ಲಿ ಚರ್ಚೆ ಆಗುತ್ತಿದೆ. ‘#21_August_Bharat_Bandh’ ಹ್ಯಾಶ್ ಟ್ಯಾಗ್ ಪ್ರಸ್ತುತ ಟ್ರೆಂಡಿಂಗ್ ನಲ್ಲಿದೆ. ಈ ಹ್ಯಾಶ್ ಟ್ಯಾಗ್ ನೊಂದಿಗೆ ಎಕ್ಸ್ ನಲ್ಲಿ 15.4 ಸಾವಿರ ಪೋಸ್ಟ್ ಗಳನ್ನು ಪೋಸ್ಟ್ ಮಾಡಲಾಗಿದೆ. ಆದರೆ ಸದ್ಯ ಕೇವಲ 2 ಸಂಘಟನೆಗಳು ಮಾತ್ರ ಬಂದ್ ಕುರಿತು ಹೋರಾಟ ಶುರುಮಾಡಿದೆ. ಹೀಗಾಗಿ ಉತ್ತರ ಪ್ರದೇಶ ಹಾಗೂ ಸುತ್ತಮುತ್ತಲಿನ ಕೆಲ ರಾಜ್ಯಗಳಲ್ಲಿ ಈ ಬಂದ್ ತೀವ್ರಗೊಳ್ಳುವ ಸಾಧ್ಯತೆ ಇದೆ. ಇನ್ನುಳಿದ ರಾಜ್ಯಗಳಲ್ಲಿ ಬಂದ್ ಬಿಸಿ ತಟ್ಟುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.