Home News C M Siddaramaiah: ನಾನು ಇನ್ಮುಂದೆ ಮೊದಲಿನ ಸಿದ್ದರಾಮಯ್ಯ ಅಲ್ಲ: ಎಲ್ಲಾ ವಿಪಕ್ಷ ನಾಯಕರ...

C M Siddaramaiah: ನಾನು ಇನ್ಮುಂದೆ ಮೊದಲಿನ ಸಿದ್ದರಾಮಯ್ಯ ಅಲ್ಲ: ಎಲ್ಲಾ ವಿಪಕ್ಷ ನಾಯಕರ ಹಳೇ ಕಥೆ ಬಿಚ್ಚಿಡ್ತೇನೆ

C M Siddaramaiah

Hindu neighbor gifts plot of land

Hindu neighbour gifts land to Muslim journalist

C M Siddaramaiah : ಸಿಎಂ ಸಿದ್ದರಾಮಯ್ಯ ಮೇಲೆ ಒಂದಾದ ಮೇಲೊಂದರಂತೆ ಅರೋಪಗಳು ಕೇಳಿ ಬರುತ್ತಿವೆ. ಮೂಡಾ ಹಗರಣ ಜೋರಾಗಿ ಸದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌-ಬಿಜೆಪಿ ದೋಸ್ತಿಗಳು ಸೇರಿಕೊಂಡು ಸಿದ್ದರಾಮಯ್ಯ ವಿರುದ್ಧ ಮೈಸೂರುವರೆಗೆ ಪಾದಯಾತ್ರೆಯನ್ನು ಮಾಡಿ ರೋಪಗಳ ಸುರಿಮಳೆ ಗೈದಿದ್ದರು. ಸಂಸದ ಹೆಚ್.‌ ಡಿ ಕುಮಾರಸ್ವಾಮಿ, ಬಿ ಎಸ್‌ ಯಡಿಯೂಪ್ಪ ಸೇರಿದಂತೆ ಅನೇಕ ನಾಯಕರು ಸಿಎಂ ರಾಜಿನಾಮೆ ನೀಡುವವರೆಗೆ ಈ ಹೋರಾಟ ನಿಲ್ಲಲ್ಲ ಎಂದು ಗುಡುಗಿದ್ದಾರೆ. ಇದರಿಂದ ಬೇಸತ್ತ ಸಿದ್ದರಾಮಯ್ಯ ವಿಪಕ್ಷ ನಾಯಕರ ಮೇಲೆ ಕೆಂಡಾಮಂಡಲರಾಗಿದ್ದಾರೆ.

ಮುಂದಿನ ದಿನಗಳಲ್ಲಿ ವಿಪಕ್ಷಗಳ ನಾಯಕರ ಮೇಲೆ ಯಾವುದೇ ಕಾರಣಕ್ಕೂ ಕರುಣೆ ತೋರಿಸುವುದಿಲ್ಲ ಎಂದೂ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ನಾನೀಗ ಈ ಹಿಂದೆ ಇದ್ದ ಸಿದ್ದರಾಮಯ್ಯ ಅಲ್ಲ. ನಾನು ಇನ್ನುಂದೆ ಬದಲಾಗುತ್ತೇನೆ ಎಂದು ಮೈಸೂರಿನಲ್ಲಿ ಹೇಳಿದ್ದಾರೆ. ನಾನು ಅಯ್ಯೋ ಪಾಪ ಹೋಗ್ಲಿ ಬಿಡು, ಇರ್ಲಿ ಬಿಡು ಅಂತ ಕರುಣೆ ತೋರಿಸ್ತಿದ್ದೆ. ಈಗ ನೋಡಿದರೆ ಅದೇ ನನಗೆ ಮುಳುವಾಗಿದೆ. ಯಾರನ್ನೂ ಬಿಡಲ್ಲ.. ಎಲ್ಲಾ ವಿರೋಧ ಪಕ್ಷದ ನಾಯಕರ ಚರಿತ್ರೆಯನ್ನು ಬಯಲಿಗೆಳೆಯುತ್ತೇನೆ. ಸಿದ್ದರಾಮಯ್ಯ ದ್ವೇಷ ರಾಜಕಾರಣ ಮಾಡುತ್ತಿದ್ದಾನೆ ಎಂದರು ಪರವಾಗಿಲ್ಲ. ನಾನು ಯಾರಿಗೂ ಹೆದರಲ್ಲ ಎಂದು ಕೆಲ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ.

ನಾನು ಯಾವ ತಪ್ಪು ಮಾಡಿಲ್ಲ. ಹಾಗಿದ್ದೂ ಬೀದಿಯುದ್ದಕ್ಕೂ ಸುಳ್ಳು ಸುದ್ದಿ ಹರಡಿ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದೆ ನಾನು ಸುಮ್ಮನೆ ಕೂರಲ್ಲ. ಯಾರೇ ಬಂದು ಅಂಗಲಾಚಿದರು, ಬೇಡಿಕೊಂಡರೂ ವಿಪಕ್ಷಗಳ ವಿಷಯದಲ್ಲಿ ಮೃದು ಸ್ವಭಾವ ತೋರುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿಪಕ್ಷ ನಾಯಕರ ವಿರುದ್ಧ ಘರ್ಜಿಸಿದ್ದಾರೆ