

By Election : ಗುಜರಾತ್, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನ ಐದು ವಿಧಾನಸಭಾ ಸ್ಥಾನಗಳಿಗೆ ಜೂನ್ 19ರಂದು ಉಪಚುನಾವಣೆಯು ನಡೆದಿತ್ತು. ಅದರ ಫಲಿತಾಂಶ ನಿನ್ನೆ ಪ್ರಕಟಗೊಂಡಿದೆ. ಹಾಗಿದ್ರೆ ಯಾವ ಪಕ್ಷಕ್ಕೆ ಜಯಭೇರಿ, ಮುಗ್ಗರಿಸಿದ ಪಕ್ಷ ಯಾವುದು ಎಂದು ತಿಳಿಯೋಣ ಬನ್ನಿ
ಕೇರಳ
ರಾಜ್ಯದ ನಿಲಂಬೂರ್ ವಿಧಾನಸಭಾ ಕ್ಷೇತ್ರ ಉಪ ಚುಣಾವಣೆ ಅಖಾಡದಲ್ಲಿ ಕಾಂಗ್ರೆಸ್ ಪಕ್ಷದ ಆರ್ಯಾದನ ಶೌಕತ್ ಅವರು ಸಿಪಿಐಎಂ ಅಭ್ಯರ್ಥಿ ಎಂ.ಸ್ವರಾಜ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಸಿಪಿಐಎಂ ಗೆ ಸೋಲಿನ ಆಘಾತ ನೀಡಿದ್ದಾರೆ.
ಪಂಜಾಬ್
ಪಂಜಾಬ್ ರಾಜ್ಯದ ಲುಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿದ್ದು, ಹೊರಬಿದ್ದ ಫಲಿತಾಂಶದಲ್ಲಿ ಆಮ್ ಆದ್ಮಿ ಪಕ್ಷದ ಸಂಜೀವ್ ಅರೋರಾ ಅವರು ಗೆಲುವು ದಾಖಲಿಸಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ತೊಡೆ ತಟ್ಟಿದ್ದ ಭರತ್ ಭೂಷಣ ಅಶು ಅವರು ಪರಾಭವಗೊಂಡಿದ್ದಾರೆ. ಗುಜರಾತ್ ನಂತರ ಪಂಜಾಬ್‌ನಲ್ಲು ಎಎಪಿ ಪಕ್ಷ ತನ್ನ ಹೊಸ ಖಾತೆ ತೆರೆದಿದೆ.
ಪಶ್ಚಿಮ ಬಂಗಾಳ
ಈ ರಾಜ್ಯವು ಟಿಎಂಸಿ ಭದ್ರಕೋಟೆ ಎಂಬದು ಸದರಿ ಉಪಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಏಕೆಂದರೆ ಟಿಎಂಸಿ ಅಭ್ಯರ್ಥಿ ಅಲಿಫಾ ಅಹ್ಮದ್ ಅವರು ಕಲಿಂಗಜ್ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ. ಪ್ರತಿ ಸ್ಪರ್ಧಿ ಬಿಜೆಪಿ ನಾಯಕ ಆಶಿಶ್ ಘೋಷ್ ಅವರನ್ನು ಮಣಿಸುವಲ್ಲಿ ಟಿಎಂಸಿ ನಾಯಕ ಯಶಸ್ವಿಯಾಗಿದ್ದಾರೆ.
ಗುಜರಾತ್
ಗುಜರಾತ್‌ನ ಕಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ರಾಜೇಂದ್ರಕುಮಾರ್ ದಾನೇಶ್ವರ ಚಾವಡಾ ಅವರು ಹಾಗೂ ಅವರ ವಿರುದ್ಧ ಕಾಂಗ್ರೆಸ್‌ನಿಂದ ರಮೇಶ್ವಭಾಯಿ ಚಾವ್ಡಾ ಅವರು ಕಣಕ್ಕಿಳಿದಿದ್ದರು. ಈ ಇಬ್ಬರು ಮಧ್ಯೆ ತೀವ್ರ ಪೈಪೋಟಿ ಉಂಟಾಗಿತ್ತು, ಕೊನೆಗೆ ಬಿಜೆಪಿಯ ಅಭ್ಯರ್ಥಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: Dollar-Rupee: ಇರಾನ್ ಮೇಲೆ ಅಮೇರಿಕ ದಾಳಿ: ಅಮೆರಿಕ ಡಾಲರ್ ಎದುರು ಸೋಮವಾರ ದುರ್ಬಲಗೊಂಡ ರೂಪಾಯಿ













