Home News By Election: ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಜಟಾಪಟಿ: ಟಿಕೆಟ್‌ ಆಕಾಂಕ್ಷಿ ಸಿ ಪಿ ಯೋಗೇಶ್ವರ್‌ ಏನಂತಾರೆ?

By Election: ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಜಟಾಪಟಿ: ಟಿಕೆಟ್‌ ಆಕಾಂಕ್ಷಿ ಸಿ ಪಿ ಯೋಗೇಶ್ವರ್‌ ಏನಂತಾರೆ?

Hindu neighbor gifts plot of land

Hindu neighbour gifts land to Muslim journalist

By Election: ಎನ್ ಡಿಎ(NDA) ನಿಂದ ಸ್ಪರ್ಧೆ ಮಾಡುವ ಅವಕಾಶ ಕ್ಷೀಣಿಸುತ್ತಿದೆ. ಜೆಡಿಎಸ್(JDS) ಜೊತೆಗೆ ಚುನಾವಣೆ ಮಾಡಬೇಕಿದೆ. ಅದು ಈಗ ಕಷ್ಟ ಆಗ್ತಿದೆ. ನನಗೆ ಬಿಜೆಪಿ(BJP)ಯಿಂದ ಸ್ಪರ್ಧೆ ಮಾಡಬೇಕು ಅಂತ ಆಸೆಯಿದೆ. ಬಿಜೆಪಿಯಲ್ಲಿ ದುಡಿದಿದ್ದೇನೆ. ನನ್ನ ಸ್ಪರ್ಧೆಗೆ ಅವಕಾಶ ಕೊಡುವ ಬಗ್ಗೆ ಕುಮಾರಸ್ವಾಮಿ(H D Kumaraswami) ಸ್ಪಷ್ಟವಾಗಿ ಎನೂ ಹೇಳಿಲ್ಲ. ನಮ್ಮ ಕಾರ್ಯಕರ್ತರು ಜೆಡಿಎಸ್ ನಿಂದ ಸ್ಪರ್ಧೆ ಬೇಡ ಅಂದಿದ್ದಾರೆ. ಪಾರ್ಟಿ ಬದಲಾವಣೆ ಬೇಡ ಅಂತಿದೆ. ಈ ಕ್ಷಣದವರೆಗೂ ಎನ್ ಡಿಎ ಅಭ್ಯರ್ಥಿ ಆಗಲು ಉತ್ಸುಕ ಆಗಿದ್ದೇನೆ ಎದು ಚೆನ್ನಪಟ್ಟಣ ಟಿಕೆಟ್‌ ಆಕಾಂಕ್ಷಿ ಸಿ ಪಿ ಯೋಗೇಶ್ವರ್‌(C P Yogeshwar) ಹೇಳಿದ್ದಾರೆ.

ವೈಯಕ್ತಿಕವಾಗಿ ಜೆಡಿಎಸ್ ಚಿಹ್ನೆ ಮೇಲೆ ಸ್ಪರ್ಧೆ ಮಾಡಲು ತೊಂದರೆಯಿಲ್ಲ. ಆದರೆ ನಮ್ಮ ಕಾರ್ಯಕರ್ತರು ಒಪ್ತಾ ಇಲ್ಲ. ಬಹಳ ವರ್ಷಗಳಿಂದ ಪರ ವಿರೋಧ ಮಾಡ್ಕೊಂಡು ಬಂದಿದ್ದೇವೆ. ಈಗ ಅದು ಸೂಕ್ತ ನಿರ್ಧಾರ ಅಲ್ಲ ಅಂತ ಅನಿಸ್ತಾ ಇದೆ. ಕಾರ್ಯಕರ್ತರ ನಿಲುವಿನ ಮೇಲೆ ನಾನು ನಿಂತಿದ್ದೇನೆ ಎಂದರು.

ನಾನು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿಲ್ಲ. ಅದರ ಅವಶ್ಯಕತೆ ಇಲ್ಲ. ಅಂತಹ ಚರ್ಚೆ ಸಹ ಆಗಿಲ್ಲ. ಕುಮಾರಸ್ವಾಮಿ ಯಾಕೆ ಈ ಆರೋಪ ಮಾಡಿದ್ರೋ ಗೊತ್ತಿಲ್ಲ. ನಾನು ಸ್ವತಂತ್ರವಾಗಿ ಇರಬೇಕು ಅಂತ ಬಯಸಿರೋನು. ಜೆಡಿಎಸ್ ನಿಂದ ಕರೆ ಬರಬಹುದು ಅಂತ ಕಾದೆ. ಜೆಡಿಎಸ್ ಅಧ್ಯಕ್ಷರು ಕರೆ ಮಾಡಿ‌ ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಾರೆ ಅಂತ ಹೇಳಿದ್ದಾರೆ. ಅವರ ಪುತ್ರರನ್ನು ಸಕ್ರಿಯವಾಗಿ ರಾಜಕೀಯಕ್ಕೆ ತರಲು ಕುಮಾರಸ್ವಾಮಿ ಪ್ರಯತ್ನ ಮಾಡಿದ್ರು. ಅದರಿಂದ ನನಗೆ ಬಹಳ ತೊಂದರೆ ಆಯ್ತು ಎಂದು ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕ ಬದುಕಿನಲ್ಲಿ ಅನ್ಯಾಯ ಆಯ್ತು. ಮುಂದೆ ಎನಾಗುತ್ತೋ ನೋಡೋಣ. ನಾನಂತೂ ಸ್ಪರ್ಧೆ ಮಾಡ್ತೇನೆ. ಬಿಜೆಪಿ ನೋ, ಎನ್ ಡಿ ಎ ನೋ ಅನ್ನೋದು ತಿರ್ಮಾನ ಆಗಿಲ್ಲ. ಸ್ಪರ್ಧೆ ಮಾಡೇ ಮಾಡ್ತೇನೆ. ಕಾಂಗ್ರೆಸ್ಸಿಂದ ಸ್ಪರ್ಧೆ ಮಾಡುವುದರ ಬಗ್ಗೆ ಗೊತ್ತಿಲ್ಲ. ಯೋಚನೆ ಮಾಡಿಲ್ಲ. ಮುಂದೇನಾಗುತ್ತೋ ಗೊತ್ತಿಲ್ಲ ಎಂದು ಸಿ ಪಿ ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.