Home News Job Offer: ಬಂಪರ್ ಉದ್ಯೋಗ ಆಫರ್‌! ಜಸ್ಟ್ ಮನೆಯಲ್ಲೇ 7 ಗಂಟೆ ನಡೆದಾಡಿದ್ರೆ ನಿಮ್ಮ ಕೈ...

Job Offer: ಬಂಪರ್ ಉದ್ಯೋಗ ಆಫರ್‌! ಜಸ್ಟ್ ಮನೆಯಲ್ಲೇ 7 ಗಂಟೆ ನಡೆದಾಡಿದ್ರೆ ನಿಮ್ಮ ಕೈ ಸೇರಲಿದೆ 28,000 ರೂ!

Hindu neighbor gifts plot of land

Hindu neighbour gifts land to Muslim journalist

Job Offer: ಯಾರಿಗುಂಟು ಯಾರಿಗಿಲ್ಲ, ಸೂಪರ್ ಉದ್ಯೋಗ ಅವಕಾಶ (Job Offer) ಒಂದು ಇಲ್ಲಿದೆ ನೋಡಿ. ಸಾಮಾನ್ಯವಾಗಿ ಒಂದು ಉದ್ಯೋಗ ಪಡೆಯಲು ನಮಗೆ ಕೆಲವೊಂದು ಅರ್ಹತೆ, ಸಾಮರ್ಥ್ಯ ಇರಬೇಕು. ಆದ್ರೆ ಈ ಉದ್ಯೋಗದಲ್ಲಿ ಜಸ್ಟ್ ನಡೆದಾಡಿದ್ರೆ ಕೈ ತುಂಬಾ ದುಡ್ಡು ಮಾಡಬಹುದು.

ಹೌದು, ಹಾಗಂತ ಖ್ಯಾತ ಕಂಪನಿ ಟೆಸ್ಲಾ ಒಂದು ವಿಶೇಷ ಕೆಲಸ ಆಫರ್ ಮಾಡಿದೆ. ಕೆಲಸ ಏನಂದ್ರೆ 7 ಗಂಟೆ ನಡೆದರೆ ಸಾಕು ಪ್ರತಿ ದಿನ 28,000 ರೂಪಾಯಿ ವೇತನ ಪಡೆಯುವ ಉದ್ಯೋಗ. ಬನ್ನಿ ಈ ಉದ್ಯೋಗದ ಬಗ್ಗೆ ತಿಳಿಯೋಣ.

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯು ವಿಶಿಷ್ಟವಾದ ಉದ್ಯೋಗವನ್ನು ಪ್ರಕಟಿಸಿದ್ದು, ಇವರು ದಿನಕ್ಕೆ ಏಳು ಗಂಟೆಗಳ ಕಾಲ ನಡೆಯಲು ₹28,000 ($340) ಸಂಬಳ ನೀಡುತ್ತಿದ್ದಾರೆ. ಅಂದರೆ ನೀವು ಗಂಟೆಗೆ ₹4,000 ಗಳಿಸುತ್ತೀರಿ.

ಮುಖ್ಯವಾಗಿ ಈ ಕೆಲಸದಲ್ಲಿ ಯಾವುದೇ ಕಚೇರಿಯಲ್ಲಿ ಕೂತಲ್ಲೇ ಕೂತು ಕಂಪ್ಯೂಟರ್ ನೋಡುವ ಪ್ರಮೇಯವಿಲ್ಲ, ಭಾರ ಎತ್ತುವ ಕೆಲಸವಿಲ್ಲ. ಕೇವಲ ಪ್ರತಿದಿನ ನಿರ್ದಿಷ್ಟ ಸಮಯ ನಡೆಯುವುದು ಇಲ್ಲಿನ ಪ್ರಮುಖ ಕರ್ತವ್ಯ. ಅಷ್ಟೇ ಅಲ್ಲ, ನಿಮಗಿಲ್ಲಿ ಆರೋಗ್ಯ ವಿಮೆ ಮತ್ತು ಪಿಂಚಣಿಯಂತಹ ಸೌಲಭ್ಯಗಳು ಸಹ ಲಭ್ಯವಿದೆ. ಆದ್ರೆ ಈ ಉದ್ಯೋಗ ಅಮೆರಿಕಾದಲ್ಲಿ ಲಭ್ಯವಿದೆ.

ಇನ್ನು ಈ ಕೆಲಸಕ್ಕೆ ಕನಿಷ್ಠ ಅರ್ಹತೆ 5 ನೇ ತರಗತಿ ಪಾಸು. ಇನ್ನು ಈ ಕೆಲಸಕ್ಕೆ ಸೇರುವ ನೌಕರರು ಮೋಷನ್ ಕ್ಯಾಪ್ಚರ್ ಸೂಟ್‌ಗಳು ಮತ್ತು ವರ್ಚುವಲ್ ರಿಯಾಲಿಟಿ ಹೆಡ್‌ಸೆಟ್‌ಗಳನ್ನು ಧರಿಸಬೇಕಾಗುತ್ತದೆ. ಮುಖ್ಯವಾಗಿ ಈ ಪಾತ್ರಕ್ಕೆ ಅರ್ಜಿ ಸಲ್ಲಿಸುವವರು ಡೇಟಾ ಸಂಗ್ರಹಣೆ ಮತ್ತು ವಿಶ್ಲೇಷಣೆಯಲ್ಲಿ ಪರಿಣತಿಯನ್ನು ಹೊಂದಿರಬೇಕು. ಜೊತೆಗೆ ಅರ್ಜಿದಾರರು ಅರ್ಹತೆ ಪಡೆಯಲು ಕೆಲವು ಷರತ್ತುಗಳನ್ನು ಪೂರೈಸಬೇಕು. ಅವರು 5’7″ ರಿಂದ 5’11” ಎತ್ತರವನ್ನು ಹೊಂದಿರಬೇಕು. ಇದಲ್ಲದೆ, ಅವರು ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದಲ್ಲಿ ಅನುಭವವನ್ನು ಹೊಂದಿರಬೇಕು.

ಇದಕ್ಕಾಗಿ ಅವರಿಗೆ ಗಂಟೆಗೆ ಸುಮಾರು ₹4,000 ($48) ಪಾವತಿಸಲಾಗುತ್ತದೆ.

“ಡೇಟಾ ಕಲೆಕ್ಷನ್ ಆಪರೇಟರ್” ಎಂದು ಕರೆಯಲ್ಪಡುವ ಈ ಕೆಲಸವು ಮೋಷನ್ ಕ್ಯಾಪ್ಚರ್ ತಂತ್ರಜ್ಞಾನವನ್ನು ಬಳಸಿಕೊಂಡು ಹ್ಯೂಮನಾಯ್ಡ್ ರೋಬೋಟ್‌ಗಳಿಗೆ ತರಬೇತಿ ನೀಡುವ ಟೆಸ್ಲಾ ಪ್ರಯತ್ನದ ಭಾಗವಾಗಿದೆ ಎನ್ನಲಾಗಿದೆ.