Home News Fraud News: ದೋಷ ಪರಿಹಾರ ಮಾಡುವುದಾಗಿ ನಂಬಿಸಿದ ಬುಡುಬುಡಿಕೆ ವೇಷಧಾರಿ; ಲಕ್ಷಗಟ್ಟಲೆ ಮೌಲ್ಯದ ಚಿನ್ನಾಭರಣ ತಗೊಂಡು...

Fraud News: ದೋಷ ಪರಿಹಾರ ಮಾಡುವುದಾಗಿ ನಂಬಿಸಿದ ಬುಡುಬುಡಿಕೆ ವೇಷಧಾರಿ; ಲಕ್ಷಗಟ್ಟಲೆ ಮೌಲ್ಯದ ಚಿನ್ನಾಭರಣ ತಗೊಂಡು ಎಸ್ಕೇಪ್‌

Fraud News

Hindu neighbor gifts plot of land

Hindu neighbour gifts land to Muslim journalist

Fraud News: ಬುಡುಬುಡಿಕೆ ವೇಷಧಾರಿಗಳು ದೋಷ ಪರಿಹಾರ ಮಾಡುವುದಾಗಿ ನಂಬಿಸಿದ್ದು, ನಂತರ 2.4 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಪಡೆದು ವಂಚನೆ ಮಾಡಿರುವ ಘಟನೆಯೊಂದ ಕನಕಪುರದ ಸಾತನೂರು ಗ್ರಾಮದಲ್ಲಿ ನಡೆದಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Sullia: ಸುಳ್ಯದಲ್ಲಿ ಪತಿಯಿಂದ ಪತ್ನಿಗೆ ಚೂರಿ ಇರಿತ; ಕೇಸು ದಾಖಲು

ಕೆಂಪರಾಜಮ್ಮ ಎಂಬುವವರೇ ವಂಚನೆಗೊಳಗಾದ ಮಹಿಳೆ. ಕಳೆದ ಶುಕ್ರವಾರ ಕೆಂಪರಾಜಮ್ಮು ಅವರ ಮನೆಗೆ ಬಂದ ಇಬ್ಬರು ಬುಡಬುಡಕೆ ವೇಷಧಾರಿಗಳು ನಿಮ್ಮ ಮನೆಯಲ್ಲಿ ನಿಮ್ಮ ಗಂಡ ಮತ್ತು ಮಗಳು ಇಬ್ಬರು ಒಂದು ವಾರದಲ್ಲಿ ಸಾವನ್ನಪ್ಪುತ್ತಾರೆ ಎಂದು ಹೇಳಿ ಹೆದರಿಸಿದ್ದಾರೆ.

ನಂತರ ಅದಕ್ಕೆ ನಾವೇ ಪರಿಹಾರ ಮಾಡಿಕೊಡುತ್ತೇವೆ ಎಂದು ಹೇಳಿ ಎರಡು ಸಾವಿರ ಪಡೆದು ಪೂಜೆ ಮಾಡಿದ್ದು, ನಂತರ ಈ ಮನೆಯಲ್ಲಿ ದೋಷವಿದೆ. ಹೀಗಾಗಿ ನಿಮ್ಮ ಮಗಳಿಗೆ ವಿವಾಹವಾಗಿಲ್ಲ, ದೋಷ ಪರಿಹಾರವಾಗಬೇಕಾದರೆ ಪೂಜೆ ಮಾಡಬೇಕು. ಹಾಗಾಗಿ 28 ಸಾವಿರ ಕೊಟ್ಟರೆ ನಾವು ಅದನ್ನು ನಿವಾರಿಸುತ್ತೇವೆ ಎಂದು ನಂಬಿಸಿದ್ದಾರೆ.

ನಂತರ ಮಹಿಳೆಯ ಹಣೆಗೆ ಭಸ್ಮ ಹಚ್ಚಿದ್ದು, ನೀವು ಬಳಸುವ ಚಿನ್ನಾಭರಣ ಕೊಟ್ಟರೆ ಅದಕ್ಕೆ ನಾವು ಪೂಜೆ ಮಾಡಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಮಾಡಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಇದನ್ನು ನಂಬಿದವರು ಮಹಿಳೆ 5 ಗ್ರಾಂ ಉಂಗುರು, 17 ಗ್ರಾಂ ಚೈನ್‌, 13.5 ಗ್ರಾಂ ಕಿವಿ ಓಲೆ ಸೇರಿ ಒಟ್ಟು 2.40 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ಕೊಟ್ಟಿದ್ದು, ಒಂದು ಮಣ್ಣಿನ ಕುಡಿಕೆಯಲ್ಲಿ ಹಾಕಿ ದಾರ ಸುತ್ತಿ ಮತ್ತು ಪೂಜೆ ಮಾಡಿ ವಾಪಸ್‌ ಕೊಟ್ಟು, ನಾವು ನಾಳೆ ಬರುತ್ತೇವೆ ಇದನ್ನು ಪೂಜೆ ಸಲ್ಲಿಸಿ ತೆಗೆಯಬೇಕು ಎಂದು ಹೇಳಿ, ಇಲ್ಲದಿದ್ದರೆ ನಿಮ್ಮ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಹೇಳಿ, ಹೊರಭಾಗದಿಂದ ಮನೆ ಬಾಗಿಲನ್ನು ಹಾಕಿ ಪರಾರಿಯಾಗಿದ್ದಾರೆ.

ಅನಂತರ ಕೆಂಪರಾಜಮ್ಮ ಅವರು ವಂಚಕರು ಕೊಟ್ಟ ಮಣ್ಣಿನ ಕುಡಿಕೆಯನ್ನು ಏನಿದೆ ಎಂದು ನೋಡಿರಲಿಲ್ಲ. ಮರುದಿನ ಬುಡ ಬುಡಕೆ ವೇಷಧಾರಿಗಳು ಮನೆಗೆ ಬರಲಿಲ್ಲ. ನಂತರ ಅನುಮಾನಗೊಂಡು ಕುಡಿಕೆಗೆ ಪೂಜೆ ಸಲ್ಲಿಸಿ ತೆಗೆದು ನೋಡಿದಾಗ ಅದರಲ್ಲಿ ಒಡವೆಗಳು ಇರಲಿಲ್ಲ.

ತಾವು ಮೋಸ ಹೋದ ಕುರಿತು ತಿಳಿದು ಕೂಡಲೇ ಅವರು ಸಾತನೂರು ಠಾಣೆಗೆ ದೂರು ದಾಖಲು ಮಾಡಿದ್ದಾರೆ.

TDP: JDU ಬೆನ್ನಲ್ಲೇ ಬಾಲ ಬಿಚ್ಚಿದ TDP – ಈ ಬೇಡಿಕೆ ಈಡೇರಿಕೆಗೆ ಮೋದಿಗೆ ಆಗ್ರಹ- ಸಂಕಷ್ಟದಲ್ಲಿ ಕೇಂದ್ರ !!