Home News Budget 2024: ಚಿನ್ನ, ಬೆಳ್ಳಿ, ಮೊಬೈಲ್ ಬೆಲೆ ಕಡಿಮೆ; ಯಾವುದು ಅಗ್ಗ ಮತ್ತು ದುಬಾರಿ ಸಂಪೂರ್ಣ...

Budget 2024: ಚಿನ್ನ, ಬೆಳ್ಳಿ, ಮೊಬೈಲ್ ಬೆಲೆ ಕಡಿಮೆ; ಯಾವುದು ಅಗ್ಗ ಮತ್ತು ದುಬಾರಿ ಸಂಪೂರ್ಣ ಪಟ್ಟಿ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

Budget 2024: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದಿನ ಬಜೆಟ್‌ನಲ್ಲಿ, ಸಾಮಾನ್ಯ ಜನರಿಗೆ ಉಪಯುಕ್ತವಾದ ವಸ್ತುಗಳ ಬಗ್ಗೆ ಹಣಕಾಸು ಸಚಿವರು ದೊಡ್ಡ ಪರಿಹಾರ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್‌ನಲ್ಲಿ ಮೊಬೈಲ್ ಫೋನ್‌ಗಳು ಮತ್ತು ಚಾರ್ಜರ್‌ಗಳ ಬೆಲೆ ಅಗ್ಗ ಮಾಡಲಾಗಿದೆ ಎಂದು ಘೋಷಿಸಿದ್ದಾರೆ.

ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 6 ಕ್ಕೆ ಇಳಿಸಲಾಗಿದೆ. ಪ್ಲಾಟಿನಂ ಮೇಲಿನ ಕಸ್ಟಮ್ ಸುಂಕವನ್ನು ಸಹ ಕಡಿಮೆ ಮಾಡಲಾಗಿದೆ. ಪ್ಲಾಟಿನಂ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 6.4 ಕ್ಕೆ ಇಳಿಸುವ ಬಗ್ಗೆಯೂ ಅವರು ಮಾಹಿತಿ ನೀಡಿದರು. ಸರ್ಕಾರದ ಈ ನಿರ್ಧಾರ ಜಾರಿಯಾದ ನಂತರ ಚಿನ್ನ, ಬೆಳ್ಳಿ, ಪ್ಲಾಟಿನಂ ಬೆಲೆಯಲ್ಲಿ ಇಳಿಕೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊಬೈಲ್ ಫೋನ್ ಮತ್ತು ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಶೇಕಡಾ 15 ರಷ್ಟು ಕಡಿಮೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇನ್ನು ಮೊಬೈಲ್ ಫೋನ್‌ಗಳ ಬೆಲೆಯಲ್ಲಿ ಇಳಿಕೆಯನ್ನು ನಾವು ಕಾಣಬಹುದು.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೌರ ಫಲಕಗಳು ಮತ್ತು ಲಿಥಿಯಂ ಬ್ಯಾಟರಿಗಳು ಅಗ್ಗವಾಗುತ್ತಿರುವ ಬಗ್ಗೆ ಮಾತನಾಡಿದ್ದಾರೆ, ಇದು ಫೋನ್ ಮತ್ತು ವಾಹನ ಬ್ಯಾಟರಿಗಳ ಬೆಲೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಇ-ಕಾಮರ್ಸ್ ಕಂಪನಿಗಳಿಗೆ ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾಗಿದೆ ಅಂದರೆ ಟಿಡಿಎಸ್ ದರವನ್ನು ಶೇಕಡಾ 1 ರಿಂದ ಶೇಕಡಾ 0.1 ಕ್ಕೆ ಇಳಿಸಲಾಗಿದೆ. ಇದನ್ನು ಬಹುತೇಕ ಶೂನ್ಯಕ್ಕೆ ಇಳಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗಾಗಿ ಮೂರು ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದರು.

ಅಮೋನಿಯಂ ನೈಟ್ರೇಟ್ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 10 ರಿಂದ 25 ಕ್ಕೆ ಹೆಚ್ಚಳ, ನಿಗದಿತ ಟೆಲಿಕಾಂ ಉಪಕರಣಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು 10 ಪ್ರತಿಶತದಿಂದ 15 ಪ್ರತಿಶತಕ್ಕೆ ಹೆಚ್ಚಿಸಲಾಗಿದೆ.

Union Budget 2024: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ದೊಡ್ಡ ಘೋಷಣೆ; ಹೊಸ ತೆರಿಗೆ ಪದ್ಧತಿಯಲ್ಲಿ ಬಂತು ಈ ಬದಲಾವಣೆ