Home News Brij Bhushan Singh : ಒಲಂಪಿಕ್ಸ್ ನಲ್ಲಿ ವಿನೇಶ್ ಪೋಗಟ್ ಅನರ್ಹ – ದೇವರೇ ನಿಮಗೆ...

Brij Bhushan Singh : ಒಲಂಪಿಕ್ಸ್ ನಲ್ಲಿ ವಿನೇಶ್ ಪೋಗಟ್ ಅನರ್ಹ – ದೇವರೇ ನಿಮಗೆ ಸರಿಯಾದ ಶಿಕ್ಷೆ ನೀಡಿದ್ದಾನೆ ಎಂದ ಬ್ರಿಜ್ ಭೂಷಣ್ ಸಿಂಗ್

Brij Bhushan Singh

Hindu neighbor gifts plot of land

Hindu neighbour gifts land to Muslim journalist

Brij Bhushan Singh : ಕುಸ್ತಿಪಟುಗಳಾದ ವಿನೇಶ್ ಫೋಗಟ್ (Vinesh Phogat), ಬಜರಂಗ್‌ ಪುನಿಯಾ ಕಾಂಗ್ರೆಸ್ ಸೇರಿದ್ದಾರೆ. ಈ ಬೆನ್ನಲ್ಲೇ ಲೈಂಗಿಕ ಕಿರುಕುಳ ಆರೋಪಿ, ಮಾಜಿ ಸಂಸದ ಬ್ರಿಜ್‌ಭೂಷಣ್ ಶರಣ್‌ ಸಿಂಗ್ (Brij Bhushan Sharan Singh) ವಿನೇಶ್ ಪೋಗಟ್ ವಿರುದ್ಧ ಕಿಡಿಕಾರಿದ್ದು, ಒಲಂಪಿಕ್ಸ್ ಅನರ್ಹತೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಹೌದು, ವಿನೇಶ್ ಫೋಗಟ್ (Vinesh Phogat), ಬಜರಂಗ್‌ ಪುನಿಯಾ ಕಾಂಗ್ರೆಸ್ ಸೇರಿದ್ದು, ಹರಿಯಾಣ ಚುನಾವಣೆಯಲ್ಲಿ ವಿನೇಶ್‌ಗೆ ಕಾಂಗ್ರೆಸ್‌ಗೆ ಟಿಕೆಟ್‌ ಕೂಡ ಘೋಷಣೆಯಾಗಿದೆ. ಅಲ್ಲದೆ ಪುನಿಯಾಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡಲಾಗಿದೆ. ಬ್ರಿಜ್‌ಭೂಷಣ್ ಶರಣ್‌ ಸಿಂಗ್ ಪ್ರತಿಕ್ರಿಯಿಸಿ ಕುಸ್ತಿಪಟುಗಳನ್ನು ಕಾಂಗ್ರೆಸ್‌ (Congress) ದಾಳವಾಗಿ ಬಳಸಿಕೊಂಡಿದೆ. ರೆಸ್ಲರ್‌ಗಳು ಪ್ರತಿಭಟನೆ ಆರಂಭಿಸಿದ ದಿನವೇ, ಇದರ ಹಿಂದೆ ಕಾಂಗ್ರೆಸ್ ಪಾತ್ರವಿದೆ ಎಂದು ಹೇಳಿದ್ದೆ. ಈಗ ಅದೇ ನಿಜವಾಗಿದೆ’ ಎಂದಿದ್ದಾರೆ.

ಅಲ್ಲದೆ ‘ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಂತಿಮ ಹಂತದಲ್ಲಿ ಅನರ್ಹಗೊಂಡ ವಿನೇಶ್‌ಗೆ ದೇವರೇ ಶಿಕ್ಷೆ ನೀಡಿದ್ದಾನೆ. ಒಬ್ಬ ಆಟಗಾರ ಒಂದು ದಿನದಲ್ಲಿ 2 ತೂಕದ ವಿಭಾಗಗಳಲ್ಲಿ ಟ್ರಯಲ್ಸ್ ನೀಡಬಹುದೇ ಎಂದು ನಾನು ವಿನೇಶ್ ಅವರನ್ನು ಕೇಳಲು ಬಯಸುತ್ತೇನೆ. ತೂಕದ ನಂತರ 5 ಗಂಟೆಗಳ ಕಾಲ ಪ್ರಯೋಗ ನಿಲ್ಲಿಸಬಹುದೇ? ನೀವು ಕುಸ್ತಿಯನ್ನು ಗೆಲ್ಲಲಿಲ್ಲ, ನೀವು ಮೋಸದಿಂದ ಅಲ್ಲಿಗೆ ಹೋಗಿದ್ದೀರಿ. ದೇವರು ನಿಮಗೆ ಅದೇ ಶಿಕ್ಷೆ ನೀಡಿದ್ದಾನೆ ಎಂದು ಲೇವಡಿ ಮಾಡಿದ್ದಾರೆ.

ಅಲ್ಲದೆ ‘ಕಾಂಗ್ರೆಸ್ ಸಂಚಿಗೆ ವಿನೇಶ್ ಮತ್ತು ಬಜರಂಗ್‌ ದಾಳವಾಗಿದ್ದಾರೆ. ಭಾರತೀಯ ಕುಸ್ತಿ ಫೆಡರೇಷನ್‌ ಮೇಲೆ ಹಿಡಿತ ಸಾಧಿಸಲು ಮತ್ತು ಬಿಜೆಪಿ ವಿರುದ್ಧ ದಾಳಿ ನಡೆಸಲು ಸಂಚು ರೂಪಿಸಲಾಗಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಮತ್ತು ಅವರ ಪಕ್ಷ ಇಂತಹ ಕೆಲಸಗಳನ್ನು ಮಾಡುತ್ತಲೇ ಇರುತ್ತದೆ. ಇದಕ್ಕಾಗಿ ಭೂಪಿಂದರ್‌ ಹೂಡಾ, ಕಾಂಗ್ರೆಸ್‌ ಮತ್ತು ಕಾಂಗ್ರೆಸ್‌ ಕುಟುಂಬ ಕುಸ್ತಿಪಟುಗಳನ್ನು ದಾಳವಾಗಿ ಬಳಸಿಕೊಂಡಿದೆ ಎಂದು ಕಿಡಿ ಕಾರಿದ್ದಾರೆ.