Home Breaking Entertainment News Kannada Breaking News | ದರ್ಶನ್‌ ‘ಕ್ರಾಂತಿ’ ಚಿತ್ರದ ಪ್ರಮೋಷನ್ ವೇಳೆ ಅವಘಡ, ಅಭಿಮಾನಿಯ ಕಾಲಿನ ಮೇಲೆ...

Breaking News | ದರ್ಶನ್‌ ‘ಕ್ರಾಂತಿ’ ಚಿತ್ರದ ಪ್ರಮೋಷನ್ ವೇಳೆ ಅವಘಡ, ಅಭಿಮಾನಿಯ ಕಾಲಿನ ಮೇಲೆ ಹರಿದು ಹೋದ ಲಾರಿ !

Hindu neighbor gifts plot of land

Hindu neighbour gifts land to Muslim journalist

ಚಿತ್ರನಟ ದರ್ಶನ್ ತೂಗುದೀಪ ಅವರ ‘ಕ್ರಾಂತಿ’ ಸಿನಿಮಾ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ಲಾರಿ ಕಾಲ ಮೇಲೆ ಹರಿದು ಅಭಿಮಾನಿಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಭಾನುವಾರ ಸಂಜೆ ನಡೆದಿದೆ.

ಇಲ್ಲಿನ ವಾಲ್ಮೀಕಿ‌ ವೃತ್ತದಲ್ಲಿ ಚಿತ್ರದ ಪ್ರಮೋಷನ್ ನಲ್ಲಿ ಪಾಲ್ಗೊಳ್ಳಲು ದರ್ಶನ್ ನಗರಕ್ಕೆ ಬಂದಿದ್ದಾರೆ. ಕಾರ್ಯಕ್ರಮವು ನಗರದ ವಾಲ್ಮೀಕಿ ವೃತ್ತದ ಮಧ್ಯಭಾಗದಲ್ಲಿ ಆಯೋಜಿಸಲಾಗಿತ್ತು. ಅಲ್ಲಿ ಲಾರಿಯನ್ನೇ ವೇದಿಕೆಯಾಗಿ ಪರಿವರ್ತಿಸಲಾಗಿದ್ದು, ಇನ್ನಷ್ಟೇ ದರ್ಶನ್ ಬರಬೇಕಿದೆ. ಅದಕ್ಕೂ ಮುನ್ನ ಅಪಾರ ಅಭಿಮಾನಿಗಳು ಅಲ್ಲಿ ಸೇರಿದ್ದಾರೆ. ದೊಡ್ಡ ಜಂಗುಳಿ ಏರ್ಪಟ್ಟಿದೆ.

ಆಗ ಲಾರಿ ತಿರುವು ತೆಗೆದುಕೊಳ್ಳುವಾಗ ಅಕಸ್ಮಾತಾಗಿ ಲಾರಿ ಯುವಕನ ಕಾಲಿನ ಮೇಲೆ ಹರಿದಿದೆ. ಗಂಭೀರ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ರಸ್ತೆ ಮಧ್ಯಭಾಗದಲ್ಲಿಯೇ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ವಾಹನಗಳು ಸುತ್ತು ಬಳಸಿ ಸಂಚರಿಸುತ್ತಿವೆ. ದರ್ಶನ್ ಬರುವ ಮುನ್ನವೇ ಈ ಅವಘಡ ಸಂಭವಿಸಿದೆ.