Home News Kasaragod: ಉಯ್ಯಾಲೆ ಆಡುತ್ತಿದ್ದ ಬಾಲಕ ಸೀರೆ ಬಿಗಿದು ಮೃತ್ಯು!

Kasaragod: ಉಯ್ಯಾಲೆ ಆಡುತ್ತಿದ್ದ ಬಾಲಕ ಸೀರೆ ಬಿಗಿದು ಮೃತ್ಯು!

Kasaragod
Image source: India Today

Hindu neighbor gifts plot of land

Hindu neighbour gifts land to Muslim journalist

Kasaragod: ಬೇಸಿಗೆ ರಜೆಯಲ್ಲಿ ಮಕ್ಕಳು ಏನಾದರು ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾರೆ. ಆದ್ದರಿಂದ ಮಕ್ಕಳನ್ನು ನೋಡಿಕೊಳ್ಳುವಲ್ಲಿ ಯಾರೇ ಆಗಲಿ ಸ್ವಲ್ಪ ಎಚ್ಚರ ತಪ್ಪಿದರು ಅನಾಹುತ ತಪ್ಪಿದ್ದಲ್ಲ.

ಇಲ್ಲೊಬ್ಬ ಬಾಲಕ ಸೀರೆ ಕಟ್ಟಿ ಉಯ್ಯಾಲೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಕುತ್ತಿಗೆಗೆ ಸೀರೆ ಬಿಗಿದು ಸೀರೆ ಗಂಟನ್ನು ಬಿಡಿಸಿಕೊಳ್ಳಲಾಗದೆ ಮೃತಪಟ್ಟ ಘಟನೆ ಚಿಟ್ಟಾರಿಕ್ಕಲ್‌ನಲ್ಲಿ ನಡೆದಿದೆ.

ಪೋಷಕರು ಬಾಲಕನನ್ನು ಊಟಕ್ಕೆ ಕರೆದಾಗ ಪ್ರತಿಕ್ರಿಯೆ ಬರದಾಗ, ಆಟವಾಡುತ್ತಿದ್ದ ಸ್ಥಳದಲ್ಲಿ ನೋಡಿದಾಗ ಪ್ರಜ್ಞಾ ಹೀನವಾಗಿ ಕಂಡ ಬಾಲಕನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೋಯ್ದಿದ್ದಾರೆ. ಆದರೆ ಅದಾಗಲೇ ಬಾಲಕ ಉಸಿರು ಕಟ್ಟಿ ಮೃತ ಪಟ್ಟಿರುವುದನ್ನು ವೈದ್ಯರು ತಿಳಿಸಿದ್ದಾರೆ.

ಕಾಸರಗೋಡಿನ (Kasaragod) ಚಿಟ್ಟಾರಿಕ್ಕಲ್ ಕಂಬಲ್ಲೂರು ತಾಮರಸ್ಕರಿಯ ಸುಧೀಶ್ ಎಂಬುವವರ ಮಗ 9 ವರ್ಷದ ಸೌರಂಗ್ ಮೃತಪಟ್ಟ ಬಾಲಕ ಎಂಬುದು ತಿಳಿದು ಬಂದಿದೆ .

ಘಟನೆ ಸಂಬಂಧ ಚಿಟ್ಟಾರಿಕ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಹಿನ್ನೆಲೆಯಲ್ಲಿ ಮಕ್ಕಳ ಪೋಷಕರಿಗೆ ಈ ಮೂಲಕ ಎಚ್ಚರ ನೀಡಲಾಗಿದೆ.

 

ಇದನ್ನು ಓದಿ: Siddaramaiah: ಬಿಜೆಪಿ ಗೆಲ್ಲಲು ಹಣ ಬಲದ ಸಹಾಯ- ಸಿದ್ದರಾಮಯ್ಯ ಆರೋಪ