Home News Bengaluru: ಇನ್ಮುಂದೆ ಸರ್ಕಾರಿ ಉದ್ಯೋಗಗಳ ಪರೀಕ್ಷೆಗೆ ನೀಲಿ ಪೆನ್ನು ಕಡ್ಡಾಯ: ಕೆಪಿಎಸ್‌ಸಿ

Bengaluru: ಇನ್ಮುಂದೆ ಸರ್ಕಾರಿ ಉದ್ಯೋಗಗಳ ಪರೀಕ್ಷೆಗೆ ನೀಲಿ ಪೆನ್ನು ಕಡ್ಡಾಯ: ಕೆಪಿಎಸ್‌ಸಿ

Hindu neighbor gifts plot of land

Hindu neighbour gifts land to Muslim journalist

Bengaluru: ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ (KPSC) ಮಹತ್ವದ ಆದೇಶವನ್ನು ಹೊರಡಿಸಿದ್ದು, ಈ ಮೂಲಕ ನೀಲಿ ಪೆನ್ನು ಬಳಕೆ ಕಡ್ಡಾಯಗೊಳಿಸಿದೆ.

ಹೌದು, ಇನ್ಮುಂದೆ ಕೆಪಿಎಸ್‌ಸಿ ವ್ಯಾಪ್ತಿಯ ಎಲ್ಲಾ ಪರೀಕ್ಷೆಗಳನ್ನು ನೀಲಿ ಪೆನ್ನಿನಲ್ಲಿಯೇ ಬರೆಯಬೇಕು ಎಂದು ಸೂಚಿಸಿದೆ. ಈ ಮೊದಲು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್ನಿನಿಂದ ಪರೀಕ್ಷೆ ಬರೆಯಬಹುದು ಎಂದು ಅಭ್ಯರ್ಥಿಗಳಿಗೆ ಸೂಚಿಸಲಾಗುತ್ತಿತ್ತು. ಆದರೆ ಇದೀಗ ಸೂಚನೆಯಲ್ಲಿ ಮಾರ್ಪಾಡು ಮಾಡಿ, ಕಪ್ಪು ಬಣ್ಣದ ಪೆನ್ನನ್ನು ಬಳಸದಿರಲು ತಿಳಿಸಿದೆ.

ಫೆಬ್ರವರಿ 16 ರಿಂದ ಕೆಪಿಎಸ್‌ಸಿ ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ನೀಲಿ ಬಣ್ಣದ ಪೆನ್ನು ಮಾತ್ರ ಬಳಸಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.