Home News Pakistan: ಡಿಜಿಟಲ್ ಕ್ಷೇತ್ರದಲ್ಲಿಯೂ ಪಾಪಿ ಪಾಕ್ ಗೆ ಏಟು – 16 ಯೂಟ್ಯೂಬ್ ಚಾನಲ್‌ಗಳಿಗೆ ಭಾರತದಲ್ಲಿ...

Pakistan: ಡಿಜಿಟಲ್ ಕ್ಷೇತ್ರದಲ್ಲಿಯೂ ಪಾಪಿ ಪಾಕ್ ಗೆ ಏಟು – 16 ಯೂಟ್ಯೂಬ್ ಚಾನಲ್‌ಗಳಿಗೆ ಭಾರತದಲ್ಲಿ ನಿರ್ಬಂಧನ!

YouTube

Hindu neighbor gifts plot of land

Hindu neighbour gifts land to Muslim journalist

Pakistan :ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್ ನಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ ಭಯೋತ್ಪಾದಕ ದಾಳಿಯ ನಂತರ, ಪಾಪಿ ಪಾಕಿಸ್ತಾನಕ್ಕೆ (Pakistan) ಭಾರತ
ಸರ್ಕಾರ ಬುದ್ಧಿ ಕಲಿಸಲು ಮುಂದಾಗಿದೆ.
ಡಾನ್, ಸಮಾ ಟಿವಿ, ಎಆರ್ವೈ ನ್ಯೂಸ್, ಜಿಯೋ ನ್ಯೂಸ್, ರಜಿ ನಾಮಾ, ಜಿಎನ್‌ಎನ್ ಮತ್ತು ಇರ್ಷಾದ್ ಭಟ್ಟಿ ಸೇರಿದಂತೆ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್ಗಳನ್ನು ಸರ್ಕಾರ ನಿಷೇಧಿಸಿದೆ .

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ‌ರ್ ಅವರಿಗೆ ಸೇರಿದ ಯೂಟ್ಯೂಬ್ ಚಾನೆಲ್ ಕೂಡಾ ನಿಷೇಧ ಮಾಡಲಾಗಿದೆ. ಭಾರತದ ವಿರುದ್ಧ ಕೋಮು ಸೂಕ್ಷ್ಮ ವಿಷಯ ಮತ್ತು ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ಅವರನ್ನು ನಿಷೇಧಿಸಲಾಗಿದೆ.

ಈ ಯೂಟ್ಯೂಬ್ ಚಾನೆಲ್ ಗಳು ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯವನ್ನು ಹರಡುತ್ತಿವೆ. ಭಾರತದ ವಿರುದ್ಧ ಸುಳ್ಳು, ತಪ್ಪು ನಿರೂಪಣೆಗಳನ್ನು ಪ್ರಚಾರ ಮಾಡುತ್ತಿವೆ ಎಂಬ ಬಲವಾದ ಆರೋಪ ಕೇಳಿಬಂದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸದ್ಯ ಈ ಚಾನೆಲ್ ಗಳನ್ನು ವೀಕ್ಷಿಸಲು ಹೋದರೆ “ಈ ಕಂಟೆಟ್ ಸದ್ಯ ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಸರ್ಕಾರದ ಆದೇಶದಿಂದಾಗಿ ಈ ದೇಶದಲ್ಲಿ ಅಲಭ್ಯವಾಗಿದೆ ಎಂಬ ನೋಟಿಫಿಕೇಶನ್ ಬರುತ್ತಿದೆ.