Home News Kannada Rajyotsava: ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನಾಚರಣೆ: 150 ಜನರ ವಿರುದ್ಧ FIR

Kannada Rajyotsava: ಬೆಳಗಾವಿಯಲ್ಲಿ ಎಂಇಎಸ್ ಕರಾಳ ದಿನಾಚರಣೆ: 150 ಜನರ ವಿರುದ್ಧ FIR

Hindu neighbor gifts plot of land

Hindu neighbour gifts land to Muslim journalist

Kannada Rajyotsava: ಕನ್ನಡ ರಾಜ್ಯೋತ್ಸವ (Kannada Rajyotsava) ದಿನದಂದೇ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಕರಾಳ ದಿನಾಚರಣೆ ಮಾಡಿದ ಹಿನ್ನೆಲೆ, ಬೆಳಗಾವಿ ಮಾರ್ಕೆಟ್‌ ಪೊಲೀಸರು 150 ಜನರ ವಿರುದ್ಧ ಎಫ್‌ಐಆರ್‌ (FIR) ದಾಖಲಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮಹಾರಾಷ್ಟ್ರಕ್ಕೆ (Maharashtra) ಜೈಕಾರ ಹಾಕಿದ, ಭಾಷಾ ವಿಷಬೀಜ ಬಿತ್ತುವ ಕೆಲಸ, ದೊಂಬಿ ಎಬ್ಬಿಸುವ ಹುನ್ನಾರ ಆರೋಪಗಳ ಮೇಲೆ ಪಿಎಸ್‌ಐ ಹಾವಣ್ಣ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಂಇಎಸ್ ಮಾಜಿ ಶಾಸಕ ಮನೋಹರ ಕಿನೇಕರ್, ಶುಭಂ ಶೇಳಕೆ ಸೇರಿದಂತೆ 150 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಕೇಸ್‌ ದಾಖಲಾಗ್ತಿದ್ದಂತೆ ಆರೋಪಿಗಳು ಬೆಳಗಾವಿಯಿಂದ ಪಲಾಯನ ಮಾಡಿದ್ದಾರೆ.

ಬೆಳಗಾವಿಯಲ್ಲಿ (Belagavi) ರಾಜಕೀಯ ಅಸ್ತಿತ್ವ ಕಳೆದುಕೊಂಡಿರುವ ಎಂಇಎಸ್, ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಗಡಿಯಲ್ಲಿರುವ ಮರಾಠಿಗರನ್ನ ಕನ್ನಡಿಗರ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡ್ತಿದೆ. ಅದೇ ನಿಟ್ಟಿನಲ್ಲಿ ಬೆಳಗಾವಿ ನಗರದ ಸರ್ದಾರ ಮೈದಾನದಲ್ಲಿ ರಾಜ್ಯೋತ್ಸವದ ವಿರುದ್ಧ ಕರಾಳ ದಿನದ ರ‍್ಯಾಲಿ ನಡೆಸಿತ್ತು. ಸರ್ದಾರ್ ಮೈದಾನದಿಂದ ವಿವಿಧ ಭಾಗಗಗಳಲ್ಲಿ ಸಂಚರಿಸಿ ಕಡಗೆ ಮರಾಠ ಮಂಡಳದಲ್ಲಿ ಸಮಾವೇಶ ಮಾಡಿ ಕರಾಳ ದಿನಾಚರಣೆ ನಡೆಸಿತು.