Home News Parliament Election: ಅಯೋಧ್ಯೆ ಸೇರಿ ಶ್ರೀರಾಮನ ನಂಟಿರುವ 10 ಕ್ಷೇತ್ರಗಳಲ್ಲಿ ಬಿಜೆಪಿಗೆ ಹೀನಾಯ ಸೋಲು –...

Parliament Election: ಅಯೋಧ್ಯೆ ಸೇರಿ ಶ್ರೀರಾಮನ ನಂಟಿರುವ 10 ಕ್ಷೇತ್ರಗಳಲ್ಲಿ ಬಿಜೆಪಿಗೆ ಹೀನಾಯ ಸೋಲು – ತಟ್ಟಿತೇ ರಾಮನ ಶಾಪ ?!

Parliament Election

Hindu neighbor gifts plot of land

Hindu neighbour gifts land to Muslim journalist

Parliament Election ನಲ್ಲಿ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿಯೇ ಹೀನಾಯವಾಗಿ ಸೋಲಾಗಿರುವುದು ಬಿಜೆಪಿಗೆ ದೊಡ್ಡ ರೀತಿಯಲ್ಲಿ ಮುಖಭಂಗವಾಗಿದೆ. ಅಷ್ಟೇ ಅಲ್ಲ ಅಚ್ಚರಿ ಅಂದ್ರೆ ರಾಮನ ನಂಟಿರುವಂತಹ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ.

Mangaluru Fire Accident: ತರಕಾರಿ ಮಾರುಕಟ್ಟೆಯೊಂದರಲ್ಲಿ ಬೆಂಕಿ ಅನಾಹುತ ; ಆರು ಅಂಗಡಿ ಸುಟ್ಟುಕರಕಲು

ಹೌದು, ತೀಸ್ರೀ ಬಾರ್ ಮೋದಿ ಸರ್ಕಾರದ(Modi Government) ಪರ್ವ ಇದೀಗ ಶುರುವಾಗಿದೆ. ಪ್ರಧಾನಿ ಮೋದಿ ಸೇರಿ 72 ಸಚಿವರು(72 Ministers) ನಿನ್ನೆ ಪ್ರಮಾಣವಚನ ಸ್ವೀಕರಿಸುವ ಮೂಲಕ ದೇಶದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಆದರೆ ಈ ಚುನಾವಣೆ ಮಾತ್ರ ಸೊಕ್ಕಿ ಮೆರೆಯುತ್ತಿದ್ದ ದೇಶದ ಘಟಾನುಘಟಿಗಳ ಸೊಕ್ಕನ್ನು ಮುರಿದಿದೆ. ಮತದಾರ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಅದು ಕೂಡ ನಾನೇ ಎಲ್ಲದೂ ಎಂದು ಮೆರೆಯುತ್ತಿದ್ದ ಬಿಜೆಪಿಗಂತೂ ದೊಡ್ಡ ಪಾಠ ಕಲಿಸಿದೆ.

ಅಚ್ಚರಿ ಏನಂದ್ರೆ ಹಿಂದೂ, ಹಿಂದುತ್ವ ಎಂದು ಅಬ್ಬರಿಸುತ್ತಿದ್ದ ಬಿಜೆಪಿಗೆ ಹಿಂದೂಗಳೇ ಸರಿಯಾದ ಶಾಸ್ತಿ ಮಾಡಿದ್ದಾರೆ. ಚಾರ್‌ಸೋ ಪಾರ್‌ ಅಂತಿದ್ದ ಮೋದಿ (PM Narendra modi) ನೇತೃತ್ವದ ಎನ್‌ಡಿಎ ಮೈತ್ರಿಕೂಟ (NDA Alliance) ಲೋಕಸಭೆ ಫಲಿತಾಂಶದಲ್ಲಿ ಜಾರಿ ಬಿದ್ದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ 300ರ ಗಡಿ ದಾಟಿದ್ದ ಬಿಜೆಪಿ ಪಕ್ಷ ಈ ಸಲ ಸರಳ ಬಹುಮತ 272 ಸೀಟನ್ನೂ ಪಡೆಯೋಕೆ ಆಗದೆ ಅತಂತ್ರ ಸ್ಥಿತಿಗೆ ತಲುಪಿದೆ. ಅದರಲ್ಲೂ ಸ್ವತಃ ರಾಮಜನ್ಮ ಭೂಮಿಯಲ್ಲಿ ಬಿಜೆಪಿ ಸೋತಿರುವುದು ಬಿಜೆಪಿಗೆ ಗರ್ವಭಂಗ ಮಾಡಿದಂತೆ ಆಗಿದೆ. ಇದನ್ನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡುವುದಾದರೆ ರಾಮನ ನಂಟಿರುವ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯವಾಗಿ ಸೋಲುಂಡಿದೆ. ಇದನ್ನರಿತ ಅನೇಕರು ರಾಜಕೀಯವಾಗಿ ಹಿಂದೂಗಳ ಭಾವನೆಯನ್ನು, ಅವರ ಆರಾಧ್ಯ ದೈವ ಶ್ರೀರಾಮನನ್ನು ಬಳಸಿಕೊಂಡಿದ್ದಕ್ಕಾಗಿ ಶ್ರೀರಾಮ ನೀಡಿದ ಶಾಪವೆಂದೇ ಹೇಳುತ್ತಿದ್ದಾರೆ. ಹಾಗಿದ್ರೆ ಯಾವುವು ಆ ಕ್ಷೇತ್ರಗಳು ಎಂದು ನೋಡೋಣ.

ಬಿಜೆಪಿ ಸೋತಿರುವ ಶ್ರೀರಾಮನಿಗೆ ನಂಟಿರುವ ಕ್ಷೇತ್ರಗಳು ಮತ್ತು ಅವುಗಳ ವಿಶೇಷ
ಅಯೋಧ್ಯೆ(Ayodhya) – ಶ್ರೀರಾಮ ಜನ್ಮಭೂಮಿ, ಭವ್ಯ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡಲಾಗಿದೆ.
ಪ್ರಯಾಗ್‌ರಾಜ್(Prayagraj) – ಶ್ರೀರಾಮ ವನವಾಸಕ್ಕೆ ಹೋಗುವ ವೇಳೆ ಚಿತ್ರಕೂಟವನ್ನು ಪ್ರವೇಶಿಸುವ ಮುನ್ನ ಸೀತೆ, ಲಕ್ಷ್ಮಣನ ಜೊತೆಗೆ ಅಲ್ಪ ಕಾಲ ತಂಗಿದ್ದ ಸ್ಥಳವಾಗಿದೆ.
ರಾಮಟೆಕ್(Ramatek) – ವನವಾಸದ ಸಂದರ್ಭದಲ್ಲಿ ಶ್ರೀರಾಮ ವಿಶ್ರಾಂತಿ ಪಡೆದ ಸ್ಥಳಗಳಲ್ಲಿ ರಾಮಟೆಕ್ ಕೂಡ ಒಂದಾಗಿದೆ.
ನಾಸಿಕ್(Nasik) – ಶ್ರೀರಾಮನ ಸಹೋದರ ಲಕ್ಷ್ಮಣ ಶೂರ್ಪಣಖಿಯ ಮೂಗು ಕತ್ತರಿಸಿದ ಸ್ಥಳವಾಗಿದೆ.
ಕೊಪ್ಪಳ(Koppal)- ಶ್ರೀರಾಮನ ಬಂಟ ಹನುಮಂತ ಜನಿಸಿದ ಸ್ಥಳ ಅಂಜನಾದ್ರಿ ಬೆಟ್ಟವನ್ನು ಹೊಂದಿರುವ ಕ್ಷೇತ್ರದ ಕೊಪ್ಪಳ ಲೋಕಸಭಾ ಕ್ಷೇತ್ರವಾಗಿದೆ.
ರಾಮೇಶ್ವರಂ(Rameshwaram)- ಶ್ರೀರಾಮನು ಸೀತೆಯನ್ನು ಹುಡುಕಿ ಲಂಕಾಗೆ ಹೋಗುವ ಮುನ್ನ ರಾಮೇಶ್ವರಂನಲ್ಲಿ ಸ್ವತಃ ಶಿವಲಿಂಗವನ್ನು ಸ್ಥಾಪಿಸಿದ ಪವಿತ್ರ ಸ್ಥಳವಾಗಿದೆ.
ಚಿತ್ರಕೂಟ(Chitrakuta) – ಶ್ರೀರಾಮ ವನವಾಸದ ಸಂದರ್ಭದಲ್ಲಿ 11 ವರ್ಷಗಳ ಕಾಲ ನೆಲೆಸಿದ ಸ್ಥಳವಾಗಿದೆ.
ಸೀತಾಪುರ(Seetapura) – ಮಾತೆ ಜಾನಕಿ (ಸೀತಾ) ತೀರ್ಥಯಾತ್ರೆಯನ್ನು ನಡೆಸಿದ ಪವಿತ್ರ ಸ್ಥಳವಾಗಿದೆ.
ಬಸ್ತಿ(Basti)- ಶ್ರೀರಾಮನ ಗುರು ವಷಿಷ್ಠ ಮಹರ್ಷಿಗಳ ಕರ್ಮಭೂಮಿಯಾಗಿದೆ.
ಸುಲ್ತಾನ್‌ಪುರ(Sulthan Pura) – ಶ್ರೀರಾಮನ ಪುತ್ರ ಕುಶ ಜನಿಸಿದ ಸ್ಥಳವಾಗಿದೆ.

Gruhalakshmi scheme: ಮನೆ ಯಜಮಾನಿಯರಿಗೆ ಇಲ್ಲಿದೆ ಗುಡ್ ನ್ಯೂಸ್! ಈ ದಿನ ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ!