Home News Tejaswi Surya: ‘ಟಿಪ್ಪು ಸುಲ್ತಾನ್’ ಕಾದಂಬರಿ ಬಿಡುಗಡೆಗೊಳಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ

Tejaswi Surya: ‘ಟಿಪ್ಪು ಸುಲ್ತಾನ್’ ಕಾದಂಬರಿ ಬಿಡುಗಡೆಗೊಳಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ

Hindu neighbor gifts plot of land

Hindu neighbour gifts land to Muslim journalist

Tejaswi Surya: ಸಂಸದ ಹಾಗೂ ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಅವರು ಟಿಪ್ಪು ಸುಲ್ತಾನ್ ಕುರಿತು ಬರೆದಿರುವಂತಹ ಕಾದಂಬರಿಯನ್ನು ಬಿಡುಗಡೆಗೊಳಿಸಿದ್ದಾರೆ.

ಹೌದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಪ್ರಭಾ ಕೇತಾನ್ ಫೌಂಡೇಶನ್ ಆಯೋಜಿಸಿದ್ದ ಡಾ.ವಿಕ್ರಮ್ ಸಂಪತ್ ಅವರ ಟಿಪ್ಪು ಸುಲ್ತಾನ್ ಐತಿಹಾಸಿಕ ಕಾದಂಬರಿಯನ್ನು ಸಂಸದ ತೇಜಸ್ವಿ ಸೂರ್ಯ ಅವರು ಬಿಡುಗಡೆ ಮಾಡಿದ್ದಾರೆ.

ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು 60 ವರ್ಷದ ಇತಿಹಾಸವುಳ್ಳ ವಕ್ಫ್ ಬೋರ್ಡ್, 1000 ವರ್ಷದ ಇತಿಹಾಸವುಳ್ಳ ನಮ್ಮ ದೇವಲಾಯ, ಕಲ್ಯಾಣಿ, ಪುಷ್ಕರಣಿಗಳನ್ನು ತನ್ನ ವಶಕ್ಕೆ ಪಡೆಯಲು ಹುನ್ನಾರ ನಡೆಸಿರುವುದು ಇತಿಹಾಸದ ಘೋರ ದುರಂತಕ್ಕೆ ಸಾಕ್ಷಿ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಅಲ್ಲದೆ ದೇಶದ ಭವಿಷ್ಯಕ್ಕೆ ಇತಿಹಾಸ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಇತಿಹಾಸಕಾರರು, ಸಮಾಜ ವಿಜ್ಞಾನದ ಬರಹಗಾರರ ಕೊಡುಗೆ ಅಮೂಲ್ಯವಾಗಿದೆ. ಸಂಸ್ಕೃತಿ, ಪರಂಪರೆ, ಇತಿಹಾಸದ ಸತ್ಯವನ್ನು ಕತೆ, ಕಾದಂಬರಿಗಳ ಮೂಲಕ ಮುಂದಿನ ಪೀಳಿಗೆಗೆ ಕೊಡುವ ಕೆಲಸ ಅಗತ್ಯವಾಗಿದೆ. ಅಂತಹ ಜವಾಬ್ದಾರಿಯುತ ಕೆಲಸವನ್ನು ವಿಕ್ರಮ ಸಂಪತ್ ಕಳೆದ ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದು, ಅದರ ಭಾಗವಾಗಿ ಸುಮಾರು ಸಾವಿರ ಪುಟದ ಟಿಪ್ಪು ಸುಲ್ತಾನ್ ಕಾದಂಬರಿ ಇಂದು ಪ್ರಕಟವಾಗಿದೆ ಎಂದು ಹೇಳಿದರು.