Home News ತಮ್ಮದೇ ಜಗತ್ತಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಹಕ್ಕಿಗಳ ಸಾಮೂಹಿಕ ಸಾವು !! | ನೂರಾರು ಹಕ್ಕಿಗಳ ಹಿಂಡೇ...

ತಮ್ಮದೇ ಜಗತ್ತಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಹಕ್ಕಿಗಳ ಸಾಮೂಹಿಕ ಸಾವು !! | ನೂರಾರು ಹಕ್ಕಿಗಳ ಹಿಂಡೇ ಕೆಳಕ್ಕೆ ಬೀಳೋ ಭಯಾನಕ ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ತಮ್ಮಷ್ಟಕ್ಕೇ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ನೂರಾರು ಹಕ್ಕಿಗಳು ಇದ್ದಕ್ಕಿದ್ದಂತೆ ಧೊಪ್ಪನೆ ಕೆಳಗೆ ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ಮೆಕ್ಸಿಕೋದ ಚಿಹೌಹುವಾದಲ್ಲಿ ನಡೆದಿದೆ.

ಹಳದಿ ತಲೆಯ ಕಪ್ಪು ಹಕ್ಕಿಗಳ ಹಿಂಡು ಏಕಾಏಕಿ ಕುಸಿದು ಆಕಾಶದಿಂದ ನೆಲಕ್ಕೆ ಕುಸಿದು ಬಿದ್ದಿದ್ದು, ಇದರ ವೀಡಿಯೋ ವೈರಲ್ ಆಗಿದೆ. ಮಾರ್ಗದಲ್ಲಿ ಹಕ್ಕಿಗಳು ಸತ್ತು ಬಿದ್ದಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹಕ್ಕಿಗಳ ಸಾಮೂಹಿಕ ಸಾವಿನ ಬಗ್ಗೆ ಫೋನ್ ಕರೆಗಳು ಬರತೊಡಗಿದವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆಕಾಶದಿಂದ ಕಪ್ಪು ಹಕ್ಕಿಗಳ ರಾಶಿ ಸುರುಳಿ ಸುತ್ತುತ್ತಾ ಮನೆಗಳು, ರಸ್ತೆಗಳ ಮೇಲೆ ಬೀಳುವ ದೃಶ್ಯ ಭಯಾನಕವಾಗಿದೆ. ಹೀಗೆ ಕೆಳಕ್ಕೆ ಬಿದ್ದ ಕೆಲವು ಹಕ್ಕಿಗಳು ಮಾತ್ರ ಚೇತರಿಸಿಕೊಂಡು ಮತ್ತೆ ಹಾರಾಡಿವೆ. ಆದರೆ ನೂರಾರು ಹಕ್ಕಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.

https://twitter.com/Reuters/status/1493059924007567360?s=20&t=pqEe5Vsu_zctV_rhuu5iAA

ಈ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಹಲವು ಕಮೆಂಟ್‌ಗಳು ಬರುತ್ತಿವೆ. ಇದರ ಸಾವಿನ ಕುರಿತು ಹಲವಾರು ಮಂದಿ ತಮ್ಮದೇ ಆದ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಹಕ್ಕಿಗಳು ಗಾಳಿಯಲ್ಲಿ ಯಾವುದೇ ವಿಷಕಾರಿ ಅನಿಲ ಇದ್ದು, ಅದನ್ನು ಸೇವಿಸಿ ಹಕ್ಕಿಗಳು ಅಸ್ವಸ್ಥಗೊಂಡಿರಬಹುದು. ಹೀಟರ್‌ನಿಂದ ಬಂದ ಅನಿಲ ಅಥವಾ ವಿದ್ಯುತ್ ಲೈನ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಉಂಟಾಗಿರಬಹುದು. 5 ಜಿ ತಂತ್ರಜ್ಞಾನದ ತರಂಗಾಂತರಗಳು ಈ ನಿಗೂಢ ಸಾವುಗಳಿಗೆ ಕಾರಣ ಇರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಪಕ್ಷಿ ತಜ್ಞ ವಿಜಾತೀಯ ಡಾ. ರಿಚರ್ಡ್ ಬ್ರೌಟನ್, ಹಕ್ಕಿ ಅಥವಾ ಗಿಡುಗದಂತಹ ಬೇಟೆಗಾರ ಪಕ್ಷಿ ಹಕ್ಕಿಗಳ ಹಿಂಡನ್ನು ಅಟ್ಟಿಸಿಕೊಂಡು ಬಂದು ಅವು ಪರಸ್ಪರ ಡಿಕ್ಕಿ ಹೊಡೆದು ಬಿದ್ದಿರಬಹುದು. ಮೇಲಿನಿಂದ ಒತ್ತಡ ಬಂದಾಗ ಅವರು ಆರಂಭದಲ್ಲಿ ಅಲೆಯಂತೆ ಕೆಳಕ್ಕೆ ಉರುಳುತ್ತವೆ ಎಂದಿದ್ದಾರೆ. ಇದರ ಬಗ್ಗೆ ಇನ್ನಷ್ಟೇ ಸತ್ಯಾಂಶ ಗೊತ್ತಾಗಬೇಕಿದೆ.