Home News Viral Video : ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಬೈಕ್ ಸವಾರ- ಹಿಂದೆ ಕುಳಿತ ಸುಂದರ...

Viral Video : ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಬೈಕ್ ಸವಾರ- ಹಿಂದೆ ಕುಳಿತ ಸುಂದರ ಮಹಿಳೆಯನ್ನು ನೋಡಿ ಫೈನ್ ಹಾಕೋದು ಮರೆತ ಪೊಲೀಸ್, ವಿಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

Viral Video: ಟ್ರಾಫಿಕ್ ಪೊಲೀಸ್ ಗಳ ಕೆಲಸ ಏನೆಂದು ಎಲ್ಲರಿಗೂ ಗೊತ್ತಿದೆ. ವಾಹನ ಸವಾರರು ತಪ್ಪು ಮಾಡಿದರೆ, ರೂಲ್ಸ್ ಬ್ರೇಕ್ ಮಾಡಿದರೆ ಅವರನ್ನು ಎಚ್ಚರಿಸಿ, ಫೈನ್ ಹಾಕಿ ಮತ್ತೊಮ್ಮೆ ಆ ರೀತಿ ತಪ್ಪು ಮಾಡದಂತೆ ತಿದ್ದುತ್ತಾರೆ. ಅಂತೆಯೇ ಇಲ್ಲೊಂದೆಡೆ ಬೈಕ್ ಸವಾರನೊಬ್ಬ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದು ಪೊಲೀಸರ ಕಣ್ಣಿಗೆ ಬಿದ್ದಿದೆ. ಇದನ್ನು ಕಂಡ ಪೊಲೀಸ್ ಆತನನ್ನು ನಿಲ್ಲಿಸಿ ಫೈನ್ ಹಾಕಲು ಮುಂದಾಗಿದ್ದಾರೆ. ಆದರೆ ಕೆಲವೇ ಕ್ಷಣದಲ್ಲಿ ಅವರು ಫೈನ್ ಹಾಕುವುದನ್ನೇ ಮರೆತುಬಿಟ್ಟಿದ್ದಾರೆ. ಕಾರಣವೇನೆಂದರೆ ಬೈಕ್ ಸವಾರನ ಹಿಂದೆ ಕುಳಿತಿದ್ದಂತಹ ಸುಂದರ ಮಹಿಳೆ!!

ಹೌದು, ಬೈಕ್ ಸವಾರನನ್ನು ತಡೆದ ಪೊಲೀಸ್ ಅಧಿಕಾರಿಯೊಬ್ಬರು ಸವಾರನ ಹಿಂದೆ ಕುಳಿತಿದ್ದ ಸುಂದರ ಮಹಿಳೆಯನ್ನು ಕಂಡು ಮಾತನಾಡುತ್ತಾ, ಮೈಮರೆತು ದಂಡ ವಿಧಿಸದೆ ಕಳುಹಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಪೊಲೀಸರ ಕ್ರಮವನ್ನು ಪ್ರಶ್ನಿಸುತ್ತಿದ್ದು, ಮಹಿಳೆ ಸುಂದರಿಯಾಗಿದ್ದರಿಂದಲೇ ದಂಡ ಹಾಕಿಲ್ಲ ಎಂದು ಆರೋಪಿಸಿದ್ದಾರೆ.

ಅಂದಹಾಗೆ Arey BC ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಎರಡು ದಿನದ ಹಿಂದೆ ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಇದರಲ್ಲಿ ಪೊಲೀಸರು ಬೈಕ್ ಸವಾರನನ್ನು ತಡೆಯುತ್ತಾರೆ. ಆಗ ಏನಪ್ಪ ಹೇಗೆ ನುಗುತ್ತಿದ್ದೀಯಾ? ಎರಡನೇ ಮದುವೆ ಆಗಬೇಕೆಂದು ಅಂದುಕೊಂಡಿದ್ದೀಯಾ? ಎದುರು ಟ್ರಕ್ ಬರುತ್ತಿದ್ರೂ ಹೀಗೆ ನುಗುತ್ತಿದ್ದೀಯಾ? ಹುಷಾರು, ನಿಧಾನವಾಗಿ ಬೈಕ್ ಚಲಾಯಿಸಬೇಕು ಎಂದು ಪೊಲೀಸರು ಹೇಳುತ್ತಾರೆ. ಇದಕ್ಕೆ ಸವಾರ ಸಹ ಇನ್ಮುಂದೆ ಹೀಗೆ ಮಾಡಲ್ಲ ಎಂದು ಹೇಳುತ್ತಾನೆ. ನಂತರ ಪೊಲೀಸರು ಯಾವುದೇ ದಂಡ ಹಾಕದೇ ಕಳುಹಿಸುತ್ತಾರೆ. ಇದೇ ವಿಡಿಯೋದಲ್ಲಿ ಮತ್ತೊಂದು ಬೈಕ್‌ನಲ್ಲಿ ಯುವಕ ಮತ್ತು ಯುವತಿ ಹೆಲ್ಮೇಟ್ ಇಲ್ಲದೇ ವೇಗವಾಗಿ ಹೋಗುತ್ತಿರೋದನ್ನು ಗಮನಿಸಬಹುದು. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಈ ಘಟನೆ ಎಲ್ಲಿಯದ್ದು ಎಂಬ ಮಾಹಿತಿ ತಿಳಿದು ಬಂದಿಲ್ಲ

ಇನ್ನು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಅದೇ ಸವಾರ ಒಬ್ಬನೇ ಬಂದಿದ್ದರೆ ಪೊಲೀಸರು ಇಷ್ಟು ಮೃದುವಾಗಿ ಮಾತನಾಡುತ್ತಿರಲಿಲ್ಲ. ಸವಾರನ ಹೆಂಡತಿ ಸುಂದರವಾಗಿದ್ದರಿಂದಲೇ ಪೊಲೀಸರು ಹೇಳಿ ಕಳುಹಿಸಿದ್ದಾರೆ. ಅದೇ ನಾವು ಆಗಿದ್ರೆ ಖಂಡಿತ ಸಾವಿರಾರರು ರೂಪಾಯಿ ದಂಡದ ಬಿಲ್ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.