Home News Bihar: ಹಾವು ತನಗೆ ಕಚ್ಚಿತೆಂದು ಹಾವಿಗೆ ಎರಡು ಬಾರಿ ಕಚ್ಚಿದ ವ್ಯಕ್ತಿ; ಮುಂದೆ ನಡೆದದ್ದು ಪವಾಡ

Bihar: ಹಾವು ತನಗೆ ಕಚ್ಚಿತೆಂದು ಹಾವಿಗೆ ಎರಡು ಬಾರಿ ಕಚ್ಚಿದ ವ್ಯಕ್ತಿ; ಮುಂದೆ ನಡೆದದ್ದು ಪವಾಡ

Bihar

Hindu neighbor gifts plot of land

Hindu neighbour gifts land to Muslim journalist

Bihar: ಹಾವು ತನಗೆ ಕಚ್ಚಿತೆಂದು ಸಿಟ್ಟಿಗೊಂಡ ವ್ಯಕ್ತಿ ಹಾವನ್ನೇ ಹಿಡಿದು ಅದಕ್ಕೆ ಎರಡು ಬಾರಿ ಕಚ್ಚಿದ ವಿಚಿತ್ರ ಘಟನೆಯೊಂದು ನಡೆದಿದೆ. ರೈಲ್ವೇ ಉದ್ಯೋಗಿಯಾಗಿರುವ ಸಂತೋಷ್‌ ಲೋಹರ್‌ ಎಂಬ ವ್ಯಕ್ತಿಯೇ ಹಾವಿನಿಂದ ಕಚ್ಚಿಸಿಕೊಂಡವರು. ಈ ವಿಚಿತ್ರ ಘಟನೆ ಮಂಗಳವಾರದಂದು ನಡೆದಿದ್ದು ಬಿಹಾರದ ನವಾಡ ಪ್ರದೇಶದಲ್ಲಿ.

ಸಂತೋಷ್‌ ಲೋಹರ್‌ ಚಿಕಿತ್ಸೆ ಪಡೆದು ಬದುಕುಳಿದಿದ್ದಾರೆ. ಆದರೆ ಈತನಿಂದ ಕಚ್ಚಿಸಿಕೊಂಡ ಹಾವು ಮಾತ್ರ ಪ್ರಾಣವನ್ನೇ ಕಳೆದುಕೊಂಡಿದೆ.

ನವಾಡ ಅರಣ್ಯ ಪ್ರದೇಶದಲ್ಲಿ ರೈಲ್ವೆ ಕಾಮಗಾರಿ ನಡೆಯುತ್ತಿದ್ದ ವೇಳೆ ಅಲ್ಲೇ ರಾತ್ರಿ ಈತ ಇತರ ಕಾರ್ಮಿಕರ ಜೊತೆ ಉಳಿದುಕೊಂಡಿದ್ದ. ಕಳೆದ ಮಂಗಳವಾರ ಕೂಡಾ ರಾತ್ರಿ ಅಲ್ಲೇ ಇದ್ದಿದ್ದು, ಊಟ ಮಾಡಿ ಮಲಗಿದ ಸಂತೋಷ್‌ಗೆ ಹಾವು ಕಚ್ಚಿದೆ. ಇದರಿಂದ ಗಾಬರಿಗೊಂಡ ಸಂತೋಷ್‌ ಗೆ ಆತನ ಗೆಳೆಯರು ಕಚ್ಚಿದ ಹಾವಿಗೆ ತಿರುಗಿ ಕಚ್ಚಿದರೆ ಮೈಯಲ್ಲಿದ್ದ ವಿಷ ವಾಪಸ್ಸು ಹಾವಿಗೆ ಹೋಗುತ್ತದೆ ಎಂದು ಅಲ್ಲಿನ ಜನರ ನಂಬಿಕೆ ಎಂದು ಹೇಳಿದ್ದು, ಅದರಂತೆ ಸಂತೋಷ್‌ ತನಗೆ ಕಚ್ಚಿದ ಹಾವಿಗೆ ಹಿಡಿದು ಎರಡು ಬಾರಿ ಕಚ್ಚಿದ್ದಾನೆ. ನಂತರ ಆತನನ್ನು ಆಸ್ಪತ್ರಗೆ ದಾಖಲು ಮಾಡಲಾಗಿದೆ.

ಆಸ್ಪತ್ರೆಗೆ ದಾಖಲಾದ ಸಂತೋಷ್‌ ಲೋಹಾರ್‌ ವೈದ್ಯರ ಚಿಕಿತ್ಸೆಯಿಂದ ಬದುಕುಳಿದಿದ್ದು, ಆಸ್ಪತ್ರೆಯಿಂದ ಮನೆಗೆ ವಾಪಾಸ್ಸಾಗಿದ್ದಾನೆ.

ಯಾರೂ ಇಂತಹ ಹುಚ್ಚು ಸಾಹಸಕ್ಕೆ ಕೈ ಹಾಕಬೇಡಿ.

Belthangady: ತಮ್ಮ ವಿರುದ್ಧದ ಎರಡು ಪ್ರಕರಣ ರದ್ದು ಕೋರಿ ಹೈಕೋರ್ಟ್‌ಗೆ ಹರೀಶ್‌ ಪೂಂಜಾ ಅರ್ಜಿ; ರದ್ದು ಕೋರಿ ಸಲ್ಲಿಸಿದ ಎರಡು ಪ್ರಕರಣ ಅರ್ಜಿ ವಜಾ