Home News BIGG NEWS : ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ‌ನೀಡಿದ ರಾಜ್ಯ ಸರಕಾರ!

BIGG NEWS : ರಾಜ್ಯದ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ‌ನೀಡಿದ ರಾಜ್ಯ ಸರಕಾರ!

Hindu neighbor gifts plot of land

Hindu neighbour gifts land to Muslim journalist

ಮಗು ಒಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಕೇಳಿರುತ್ತೇವೆ. ಹಾಗೆಯೇ ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷಣ ಪೂರೈಸಿದರೆ ಮುಂದೆ ಭವ್ಯ ಭಾರತದ ಅಭಿವೃದ್ಧಿಗೆ ಕಾರಣರಾಗಬಲ್ಲರು. ಅಲ್ಲದೆ ಶಿಕ್ಷಣ ಎಂಬುದು ಮಕ್ಕಳಿಗೆ ಹೊರೆ ಆಗಿರಬಾರದು. ಮಕ್ಕಳ ಮನಸ್ಸು ಮತ್ತು ಆರೋಗ್ಯ ಬಹಳ ಸೂಕ್ಷ್ಮ ಆಗಿರುತ್ತದೆ. ಆ ಕುರಿತಾಗಿ ಮಕ್ಕಳ ಬಗೆಗಿನ ಹೆಚ್ಚಿನ ಗಮನ ಹರಿಸಲು ಸರ್ಕಾರ ನಿರ್ಧರಿಸಿದೆ.

ಮಕ್ಕಳೂ ಸಾಮಾನ್ಯವಾಗಿ ಶಾಲೆಗೆ ವಾಟರ್ ಬಾಟಲ್ ತೆಗೆದುಕೊಂಡು ಹೋಗುತ್ತಾರೆ. ಆದರೆ, ಸಮರ್ಪಕವಾಗಿ ನೀರು ಕುಡಿಯುತ್ತಾರೆಯೇ..? ಈ ಪ್ರಶ್ನೆಗೆ ಬಹುತೇಕ ಪೋಷಕರಲ್ಲಿ ತೃಪ್ತಿಕರ ಪ್ರತಿಕ್ರಿಯೆ ಇಲ್ಲ. ಶಾಲೆಗಳಲ್ಲಿ ಮಕ್ಕಳು ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುತ್ತಿಲ್ಲ ಎಂಬುದನ್ನು ಮನಗಂಡ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ರಾಜ್ಯದ ಎಲ್ಲ ಶಾಲೆಗಳಲ್ಲಿಯೂ ಕೇರಳ ಮಾದರಿಯಲ್ಲಿ ವಾಟರ್ ಬೆಲ್ ಯೋಜನೆ ಮರು ಜಾರಿಗೊಳಿಸುವ ಕುರಿತು ಚಿಂತನೆ ನಡೆಸಿದ್ದಾರೆ.

ಹೌದು ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ದಿನಕ್ಕೆ ಮೂರು ಬಾರಿ 10 ನಿಮಿಷ ವಿರಾಮ ನೀಡುವ ‘ವಾಟರ್ ಬೆಲ್’ ಯೋಜನೆ ಮರು ಜಾರಿಗೆ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಸರ್ಕಾರ ಶೀಘ್ರದಲ್ಲೇ ವಾಟರ್ ಬೆಲ್ ಯೋಜನೆಯ ಅಧಿಸೂಚನೆ ಹೊರಡಿಸಲಿದೆ. ಬೆಲ್ ಹೊಡೆದ ವೇಳೆ ಮಕ್ಕಳಿಗೆ ನೀರು ಕುಡಿಯಲು ಸೂಚಿಸಿಬೇಕೆಂಬುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಶಾಲಾ ಅವಧಿಯಲ್ಲಿ ಶುದ್ದವಾದ ಕುಡಿಯುವ ನೀರನ್ನು ಮಕ್ಕಳಿಗೆ ನೀಡಬೇಕು, ಮಕ್ಕಳ ಆರೋಗ್ಯ ಕಾಪಾಡಬೇಕು ಎಂದು ಕುಡಿಯುವ ನೀರಿನ ಬೆಲ್ ಗೆ ವಿಶೇಷ ಸಮಯ ನಿಗದಿ ಮಾಡುವಂತೆ ಸೂಚನೆ ನೀಡಲಾಗಿದೆ.

ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಪ್ರಕಾರ ಬೆಳಗ್ಗೆ 10;35 ಕ್ಕೆ ಹಾಗೂ ಮಧ್ಯಾಹ್ನ 12 ಗಂಟೆ, ಹಾಗೂ 2 ಗಂಟೆಗೆ ವಾಟರ್ ಬೆಲ್ ಮಾಡಲು ಚಿಂತನೆ ನಡೆಸಿದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ನೀರು ಬಹಳ ಮುಖ್ಯವಾಗಿದ್ದು, ಆದ್ದರಿಂದ ಮಕ್ಕಳಿಗೆ ನೀರು ಕುಡಿಯಲು ದಿನಕ್ಕೆ ಮೂರು ಬಾರಿ 10 ನಿಮಿಷ ಬ್ರೇಕ್ ನೀಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಅದಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆ 2022ನೇ ಸಾಲಿನಲ್ಲಿ ಮಕ್ಕಳ ಅಭಿವೃದ್ಧಿಯ ಅಂಶಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ “ ಮಕ್ಕಳ ಸ್ನೇಹಿ ಮತ್ತು ಮಕ್ಕಳ ಸುರಕ್ಷಿತ” ಪಂಚಾಯಿತಿಗಳನ್ನಾಗಿಸಲು ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನವನ್ನು ಹಾಗೂ 01 ದಿನ ಮಕ್ಕಳ ಗ್ರಾಮ ಸಭೆಯನ್ನು ನಡೆಸಲು ಸುತ್ತೋಲೆಯನ್ನು ಹೊರಡಿಸಲಾಗಿದೆ.

ಸುತ್ತೋಲೆಯಲ್ಲಿ ತಿಳಿಸಿರುವಂತೆ “ಸ್ಥಳೀಯ ಸಮುದಾಯ, ಗ್ರಾಮಸ್ಥರು ಮತ್ತು ಅಧಿಕಾರೇತರರ ಸಹಕಾರದೊಂದಿಗೆ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಹಾಗೂ ಈ ಅಧೀನ ಕಛೇರಿ ವ್ಯಾಪ್ತಿಗೆ ಬರುವ ಎಲ್ಲಾ ಅಧಿಕಾರಿಗಳು, ಮುಖ್ಯಶಿಕ್ಷಕರುಗಳು ಕೋವಿಡ್ ಸುರಕ್ಷತಾ ಕ್ರಮವನ್ನು.. ಅನುಸರಿಸಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ದಿನಾಂಕ:14.11.2022ರಿಂದ ದಿನಾಂಕ:24.01.2023ರ ವರಗೆ ನಡೆಯಲಿರುವ “ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ”ದಲ್ಲಿ ಭಾಗವಹಿಸಿ, ಇದರೊಂದಿಗೆ ನೀಡಲಾಗಿರುವ ಕಾರ್ಯ ಚಟುವಟಿಕೆಗಳ ವೇಳಾ ಪಟ್ಟಿಯಂತ ಕಾರ್ಯಕ್ರಮವನ್ನುಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ನೆರವು ಸಹಕಾರವನ್ನು ನೀಡಲು ಸೂಚಿಸಿದ್ದಾರೆ.

ಮುಖ್ಯವಾಗಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ವಾಟರ್ ಬೆಲೆ ಯೋಜನೆಯನ್ನು ಹೊರಡಿಸಿದ್ದು ಇದರಿಂದಾಗಿ ಮಕ್ಕಳ ಆರೋಗ್ಯ ಸ್ವಲ್ಪ ಮಟ್ಟಿಗೆ ಸುಧಾರಣೆಗೊಳ್ಳಬಹುದು ಎಂಬುದಾಗಿ ಸರ್ಕಾರದ ನಿಲುವು ಆಗಿದೆ. ಮತ್ತು ಈ ಮೇಲಿನ ಯೋಜನೆಯ ಜೊತೆಗೆ 2022ನೇ ಸಾಲಿನಲ್ಲಿ ಮಕ್ಕಳ ಅಭಿವೃದ್ಧಿಯ ಅಂಶಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಕ್ಕಳ ವಿಶೇಷ ಗ್ರಾಮ ಸಭೆ ನಡೆಸಲು ಸೂಚಿಸಿ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿರುವುದಾಗಿದೆ.