Home News Charlie to Bigg Boss house: ಈ ದಿನ ಮನೆಗೆ ಬಲಗಾಲಿಟ್ಟು ಬರ್ತಾಳೆ ‘ ಚಾರ್ಲಿ’!!!...

Charlie to Bigg Boss house: ಈ ದಿನ ಮನೆಗೆ ಬಲಗಾಲಿಟ್ಟು ಬರ್ತಾಳೆ ‘ ಚಾರ್ಲಿ’!!! ಸಂಭಾವನೆ ಕೇಳಿದ್ರೆ ಹೌಹಾರ್ತೀರಾ…

Charlie to Bigg Boss house

Hindu neighbor gifts plot of land

Hindu neighbour gifts land to Muslim journalist

Charlie to Bigg Boss house: ಕಲರ್ಸ್ ಕನ್ನಡ ವಾಹಿನಿ ಮನರಂಜನೆಯ ರಸದೌತಣ ಬಡಿಸುವ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada season 10) ಕಾರ್ಯಕ್ರಮದ ಗ್ರ್ಯಾಂಡ್ ಪ್ರೀಮಿಯರ್‌ಗೆ ಅದ್ಧೂರಿ ತೆರೆ ಬಿದ್ದಿದೆ. ಈ ಬಾರಿ ಸ್ಪರ್ಧಿಗಳ ಜೊತೆಗೆ ಮೊದಲ ಪ್ರಯತ್ನ ಎಂಬಂತೆ ರಿಯಾಲಿಟಿ ಶೋ ಒಂದರಲ್ಲಿ ವ್ಯಕ್ತಿಯನ್ನು ಹೊರತು ಪಡಿಸಿ ಪ್ರಾಣಿಯನ್ನು ಕೂಡ ಸ್ಪರ್ಧಿಗಳ ಪಟ್ಟಿಯಲ್ಲಿ ಲಿಸ್ಟ್ ಮಾಡಲಾಗಿದೆ.ಎಲ್ಲರ ಮನಗೆದ್ದ ಸಿನಿಮಾ ‘777 ಚಾರ್ಲಿ’ ಸಿನಿಮಾದ ಚಾರ್ಲಿ ಕೂಡ ದೊಡ್ಮನೆಗೆ (Charlie to Bigg Boss house)ಎಂಟ್ರಿ ಕೊಡಲಿದೆ.

ಪ್ರತಿ ಬಾರಿ ಬಿಗ್‌ಬಾಸ್ ಶೋ ಶುರುವಾಗುವ ಸಂದರ್ಭ ಯಾರೆಲ್ಲಾ ದೊಡ್ಮನೆಗೆ ಬರಲಿದ್ದಾರೆ ಎಂಬ ಕೌತುಕ ಜನರಲ್ಲಿ ಮನೆ ಮಾಡುವುದು ಸಹಜ. ಅದರಲ್ಲಿಯೂ ಈ ಬಾರಿಯಂತೂ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡುವವರ ಬಗ್ಗೆ ಸಣ್ಣ ಹಿಂಟ್ ಕೂಡ ಜನರಿಗೆ ಸಿಕ್ಕಿರಲಿಲ್ಲ. ಆ ಮಟ್ಟಿಗೆ ವಾಹಿನಿ ತನ್ನ ಗೌಪ್ಯತೆ ಕಾಯ್ದುಕೊಂಡು ಜನರಿಗೆ ಸರ್ಪ್ರೈಸ್ ನೀಡಿತ್ತು. ಎಲ್ಲರ ನೆಚ್ಚಿನ ಸಿನಿಮಾ ‘777 ಚಾರ್ಲಿ’ ಸಿನಿಮಾದಲ್ಲಿ ಹೈ ಲೈಟ್ ಆಗಿದ್ದ ಚಾರ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10ನಲ್ಲಿ ಭಾಗವಹಿಸಲಿದೆ. ಈ ಕುರಿತು ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ನಡೆದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಚಾರ್ಲಿ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುವುದನ್ನು ರೀ ವೀಲ್ ಮಾಡಲಾಗಿದೆ. ಅಷ್ಟೇ ಅಲ್ಲದೇ ವಾಹಿನಿ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಕೂಡ ಈ ಮಾಹಿತಿ ನೀಡಿತ್ತು.

ಈಗಾಗಲೇ ರಿಯಾಲಿಟಿ ಶೋ ಆರಂಭವಾದರೂ ಕೂಡ ಸಹ ಚಾರ್ಲಿ ದೊಡ್ಮನೆಗೆ ಎಂಟ್ರಿ ಕೊಡದೇ ಇರುವ ಹಿನ್ನೆಲೆ ಚಾರ್ಲಿ ಯಾವಾಗ ಮನೆಗೆ ಬರಲಿದೆ ಎಂದು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಇದೀಗ ಈ ಪ್ರಶ್ನೆಗೆ ಉತ್ತರ ಹೊರಬಿದ್ದಿದೆ. ಚಾರ್ಲಿ ಎಂಬುದು ಲ್ಯಾಬ್ರಡಾರ್ ನಾಯಿಯಾಗಿದ್ದು, ಕಲರ್ಸ್ ಕನ್ನಡ ವಾಹಿನಿಯ ಪ್ರಶಾಂತ್ ನಾಯಕ್ ಮತ್ತು ಚಾರ್ಲಿ ಹ್ಯಾಂಡ್ಲರ್ ಪ್ರಮೋದ್ ಬಿಗ್ ಬಾಸ್ ಕನ್ನಡ ಮನೆಯ ಹೊರಗಿನಿಂದ ಚಾರ್ಲಿಯ ಯೋಗಕ್ಷೇಮದ ಹೊಣೆಯನ್ನು ಪ್ರಮೋದ್ ನಿಭಾಯಿಸಲಿದ್ದಾರೆ ಎಂದು ತಿಳಿದುಬಂದಿದೆ.ಚಾರ್ಲಿ ಮನೆಯೊಳಗೆ ಬಂದ ಬಳಿಕ ದಿನಕ್ಕೆ ಎಷ್ಟು ಸಂಭಾವನೆ ಪಡೆಯಲಿದೆ ಎಂಬ ಕೌತುಕ ಕೂಡ ಹೆಚ್ಚಿನವರನ್ನು ಕಾಡುತ್ತಿದೆ. ಈ ಕುರಿತ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ. ಈ ನಡುವೆ, ಚಾರ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬರುವ ಸಾಧ್ಯತೆಯಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

 

ಇದನ್ನು ಓದಿ: ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಕೇವಲ 25 ರೂ.ಗಳ ಯುಎಸ್ ಬಿ ಲ್ಯಾಂಪ್! ದುಬಾರಿ ಲ್ಯಾಂಪ್ ಗೆ ಹೇಳಿ ಬೈ ಬೈ !