Home News BBK11: ಬಿಗ್‌ಬಾಸ್‌ ಸ್ಪರ್ಧಿ ರಜತ್‌ ಪತ್ನಿಯಿಂದ ಸೈಬರ್‌ ಠಾಣೆಗೆ ದೂರು ದಾಖಲು

BBK11: ಬಿಗ್‌ಬಾಸ್‌ ಸ್ಪರ್ಧಿ ರಜತ್‌ ಪತ್ನಿಯಿಂದ ಸೈಬರ್‌ ಠಾಣೆಗೆ ದೂರು ದಾಖಲು

Hindu neighbor gifts plot of land

Hindu neighbour gifts land to Muslim journalist

BBK11: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರ ಫಿನಾಲೆಗೆ ಇನ್ನು ಕೆಲ ದಿನಗಳಷ್ಟೇ ಇದೆ. ವೀಕ್ಷಕರು ತಮ್ಮ ತಮ್ಮ ಫೆವರೇಟ್‌ ಕಂಟೆಸ್ಟೆಂಟ್‌ಗೆ ವೋಟ್‌ ಹಾಕ್ತಾ ಇದ್ದಾರೆ. ಅಂತಿಮ ಹಣಾಹಣಿಯಲ್ಲಿರುವ ಸ್ಪರ್ಧಿಗಳಾದ ಹನುಮಂತು, ಮೋಕ್ಷಿತಾ, ತ್ರಿವಿಕ್ರಮ, ಭವ್ಯಾ, ರಜತ್‌, ಮಂಜು ಇವರ ಮಧ್ಯೆ ಯಾರು ಬಿಗ್‌ಬಾಸ್‌ ಕಪ್‌ ಗೆಲ್ಲಲಿದ್ದಾರೆ ಎನ್ನುವುದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದ್ದು, ದೊಡ್ಮನೆಯ ಆಟಕ್ಕೆ ತೆರೆ ಬೀಳಲಿದೆ.

ಹಾಗೆನೇ ಸೋಷಿಯಲ್‌ ಮೀಡಿಯಾದಲ್ಲಿ ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳ ಕುರಿತು ಪ್ರಚಾರದ ಪೋಸ್ಟ್‌ಗಳನ್ನು ಅವರ ಖಾತೆಯಿಂದ ಹಂಚಿಕೊಳ್ಳಲಾಗುತ್ತದೆ. ಅದರಲ್ಲೂ ಬಿಗ್‌ಬಾಸ್‌ ಮನೆಗೆ 50ದಿನದ ಆಟದ ನಂತರ ಬಂದ ಪ್ರಬಲ ಸ್ಪರ್ಧಿ ರಜತ್‌ ಕಿಶನ್‌ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಕೆಲ ಟ್ರೋಲ್‌ ಪೇಜ್‌ಗಳು ಇಲ್ಲಸಲ್ಲದ ವಿಚಾರದ ಕುರಿತು ಪೋಸ್ಟ್‌ ಮಾಡಿ ವೈರಲ್‌ ಮಾಡಿದ್ದಾರೆ.

ಮಾಜಿ ಗೆಳತಿಯ ಜೊತೆಗಿರುವ ಫೋಟೋಗಳನ್ನು ಕೆಲ ಟ್ರೋಲ್‌ ಪೇಜ್‌ಗಳಲ್ಲಿ ಹಾಕಲಾಗಿದೆ. ವೈಯಕ್ತಿಕ ಫೋಟೋ ಬಳಸಿ ಕೆಲ ಟ್ರೋಲ್‌ ಪೇಜ್‌ಗಳು ಮಾನ ಹಾನಿ ಮಾಡುವ ಕುರಿತು ಆರೋಪ ಮಾಡಲಾಗಿದೆ. ಇದೆಲ್ಲ ರಜತ್‌ ಪತ್ನಿ ಗಮನಕ್ಕೆ ಬಂದಿದೆ. ಹಾಗಾಗಿ ಟ್ರೋಲ್‌ ಪೇಜ್‌ಗೆ ಮೆಸೇಜ್‌ ಮಾಡಿ ಫೊಟೋ ಡಿಲೀಟ್‌ ಮಾಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಟ್ರೋಲ್‌ ಪೇಜ್‌ನವರು ಹಣಕ್ಕೆ ಬೇಡಿಕೆ ಇಟ್ಟಿದ್ದು, ರೂ.6500 ಹಣವನ್ನು ಹಾಕಿದ್ದಾರೆ. ನಂತರ ಆ ಫೋಟೋವನ್ನು ಡಿಲೀಟ್‌ ಮಾಡಲಾಗಿತ್ತು.

ಒಂದು ಖಾತೆಯಿಂದ ಡಿಲೀಟ್‌ ಆದ ಫೋಟೋ, ಬೇರೆ ಬೇರೆ ಟ್ರೋಲ್‌ ಪೇಜ್‌ಗಳಲ್ಲಿ ಹಾಕಲಾಗಿದೆ. ಇದನ್ನು ಡಿಲೀಟ್‌ ಮಾಡಿ ಎಂದು ಹೇಳಿದಾಗ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ರಜತ್‌ ಪತ್ನಿ ಅಕ್ಷತಾ ಸೈಬರ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. 10 ಕ್ಕೂ ಹೆಚ್ಚಿನ ಟ್ರೋಲ್‌ ಪೇಜ್‌ಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಇತ್ತ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಫೋಟೋಗಳು ಟ್ರೋಲ್‌ ಪೇಜ್‌ನಿಂದ ಡಿಲೀಟ್‌ ಮಾಡಲಾಗಿದೆ.