Home News Mangaluru : ಸ್ನೇಹಮಯಿ ಕೃಷ್ಣ ಫೋಟೋಗೆ ರಕ್ತಾಭಿಷೇಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಬಲಿ ಚೀಟಿಯಲ್ಲಿ...

Mangaluru : ಸ್ನೇಹಮಯಿ ಕೃಷ್ಣ ಫೋಟೋಗೆ ರಕ್ತಾಭಿಷೇಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಬಲಿ ಚೀಟಿಯಲ್ಲಿ ಮಹಿಳಾ PSI ಹೆಸರು ಪತ್ತೆ!!

Hindu neighbor gifts plot of land

Hindu neighbour gifts land to Muslim journalist

Mangaluru: ವಾರದ ಹಿಂದಷ್ಟೇ ಮಂಗಳೂರಿನ ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿದ ಕೇಸ್ ನಲ್ಲಿ ಬಂಧಿಸಲ್ಪಟ್ಟಿದ್ದ ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಮೊಬೈಲ್ ನಲ್ಲಿ ಸ್ನೇಹಮಯಿ ಕೃಷ್ಣ (Snehamayi Krishna) ಹಾಗೂ ಗಂಗರಾಜು ಅವರ ಫೋಟೋಗಳಿಗೆ ರಕ್ತಾಭಿಷೇಕ ಮಾಡಿದ ಫೋಟೋಗಳು ಪತ್ತೆಯಾಗಿದ್ದವು. ಇದೀಗ ಈ ಪ್ರಕರಣಕ್ಕೆ ರೋಚಕ ಅಟ್ಲಿಸ್ಟ್ ಸಿಕ್ಕಿದೆ.

ಹೌದು, ಮುಡಾ ಸೈಟ್ ಹಂಚಿಕೆ ಪ್ರಕರಣ (MUDA SCAM) ಹೊರಗೆಳೆದು, ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ಹಾಗೂ ಸಿಎಂ ಸಿದ್ದರಾಮಯ್ಯ (CM Siddaramaiah) ಸೇರಿದಂತೆ ಹಲವು ರಾಜಕಾರಣಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಆರ್‌ಟಿಐ ಕಾರ್ಯಕರ್ತ (RTI activist) ಸ್ನೇಹಮಯಿ ಕೃಷ್ಣ (Snehamayi Krishna) ಹಾಗೂ ಗಂಗರಾಜು ಅವರ ಫೋಟೋಗಳಿಗೆ ರಕ್ತಾಭಿಷೇಕ ಮಾಡಿದ್ದು, ಅವರಿಬ್ಬರಿಗೆ ಬಲ ತುಂಬಲು 5 ಕುರಿಗಳನ್ನು ದೇವಿಗೆ ಬಲಿ ಕೊಟ್ಟಿರೋ ವಿಡಿಯೋ ಮತ್ತು ಫೋಟೋ ಬೆಳಕಿಗೆ ಬಂದಿದೆ. ಆದ್ರೆ ಈಗ ಅದೇ ಬಲಿ ಚೀಟಿಯಲ್ಲಿ ಸ್ವತಃ ಪ್ರಸಾದ್ ಅತ್ತಾವರ ಪತ್ನಿ, ಉಡುಪಿ ಮಹಿಳಾ ಠಾಣೆಯ ಪಿಎಸ್‌ಐ ಸುಮಾ ಆಚಾರ್ಯ ಹೆಸರು ಇರುವುದು ಬೆಳಕಿಗೆ ಬಂದಿದ್ದು, ಈ ಬೆಳವಣಿಗೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ವಿಚಾರವಾಗಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಪ್ರತಿಕ್ರಿಯಿಸಿದ್ದು, ಒಂದು ವಾರದ ಹಿಂದೆ ಪ್ರಸಾದ್ ಅತ್ತಾವರ ಬಂಧನ ಮಾಡಲಾಗಿತ್ತು. ಬಂಧಿತ ಪ್ರಸಾದ್ ಅತ್ತಾವರ ಮೊಬೈಲ್‌ಫೋನ್ ಪರಿಶೀಲನೆ ಮಾಡಿದ್ದೆವು. ಮೊಬೈಲ್ ವಿಡಿಯೋದಲ್ಲಿ ದೇವಸ್ಥಾನದಲ್ಲಿ ಬಲಿ‌ಕೊಡುವ ದೃಶ್ಯ ಇತ್ತು. ಸ್ನೇಹಮಯಿ ಕೃಷ್ಣ, ಗಂಗರಾಜು ಬಲ ತುಂಬುವುದಕ್ಕೆ ಈ ರೀತಿ ಮಾಡುತ್ತಿದ್ದರು‌. 5 ಕುರಿಗಳನ್ನು ಬಲಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ ಎಲ್ಲಿ ಆಗಿದ್ದೆಂದು ಸ್ಪಷ್ಟತೆ ಇಲ್ಲ, ಅನಂತ್ ಭಟ್ ಯಾರೆಂದು ತನಿಖೆ ಮಾಡ್ತಿದ್ದೇವೆ. ಪ್ರಸಾದ್ ಅತ್ತಾವರ ಮೊಬೈಲ್‌ ವಾಟ್ಸಾಪ್‌ನಲ್ಲಿ ಈ ವಿಡಿಯೋ ಇತ್ತು. ಪ್ರಾರಂಭಿಕ ಮಾಹಿತಿ ಪ್ರಕಾರ ಸ್ನೇಹಮಯಿ, ಗಂಗರಾಜುಗಾಗಿ ಮಾಡಲಾಗಿದೆ. ನಿನ್ನೆ ರಾತ್ರಿ ಸ್ವಯಂಪ್ರೇರಿತ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ.