Home News Bangalore: ಐಶ್ವರ್ಯ ಗೌಡ ಚಿನ್ನ ವಂಚನೆ ಕೇಸ್‌ಗೆ ಬಿಗ್‌ಟ್ವಿಸ್ಟ್‌; ಪಟ್ಟಣಗೆರೆ ಶೆಡ್‌ನಲ್ಲಿ ಸ್ಟಾರ್‌ ನಟನ ಭೇಟಿ!...

Bangalore: ಐಶ್ವರ್ಯ ಗೌಡ ಚಿನ್ನ ವಂಚನೆ ಕೇಸ್‌ಗೆ ಬಿಗ್‌ಟ್ವಿಸ್ಟ್‌; ಪಟ್ಟಣಗೆರೆ ಶೆಡ್‌ನಲ್ಲಿ ಸ್ಟಾರ್‌ ನಟನ ಭೇಟಿ! ಸಿನಿಮಾ ಮಾಡಲು ಮುಂದಾಗಿದ್ದ ಆರೋಪಿ ಐಶ್ವರ್ಯ

Hindu neighbor gifts plot of land

Hindu neighbour gifts land to Muslim journalist

Bangalore: ಐಶ್ವರ್ಯಾ ಗೌಡ ಐಶ್ವರ್ಯದ ಹಿಂದೆ ಹೋಗಿ ಕೆಜಿ ಗಟ್ಟಲೆ ಬಂಗಾರ ವಂಚನೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಘಟನೆ ಬೆನ್ನಲ್ಲೇ ಇದೀಗ ಸ್ಟಾರ್‌ ನಟನೋರ್ವನ ಜೊತೆ ಸಿನಿಮಾ ಮಾಡಬೇಕು ಎಂದು ಓಡಾಡುತ್ತಿದ್ದ ಐಶ್ವರ್ಯ ಕೇಸಲ್ಲಿ ಪಟ್ಟಣಗೆರೆ ಶೆಡ್‌ ಹೆಸರು ಕೇಳಿ ಬಂದಿರುವ ಕುರಿತು ವರದಿಯಾಗಿದೆ.

ರಾಜಕಾರಣಿಗಳ ಜೊತೆ ಆಯ್ತು, ಇದೀಗ ಕನ್ನಡ ಸಿನಿ ತಾರೆಯರ ಜೊತೆ ಹೆಸರು ಕೇಳಿಬಂದಿದೆ. 14 ಕೆಜಿ ಗೋಲ್ಡ್‌ ಕೇಸ್‌ನಲ್ಲಿ ಜೈಲಿಗೋಗಿ ನಂತರ ಬೇಲ್‌ ಪಡೆದು ಹೊರಗೆ ಬಂದಿರುವ ಐಶ್ವರ್ಯ ದಂಪತಿ ಸಿನಿಮಾ ಹೆಸರಲ್ಲೂ ವಂಚಿಸಿರುವ ಆರೋಪ ಕೇಳಿ ಬಂದಿದೆ.

ಈಕೆ ಸಿನಿತಾರೆಯರ ಜೊತೆ ನಂಟು ಹೊಂದಿದ್ದಳು ಅನ್ನೋದು ಬಯಲಾಗಿದ್ದು, ಈ ಕೆಲಸಕ್ಕೆ ನಟ ಧರ್ಮನೇ ಸಾಥ್‌ ನೀಡಿದ್ದ ಎಂದು ವರದಿಯಾಗಿದೆ. ಸ್ಟಾರ್‌ ನಟನೋರ್ವನ ಜೊತೆ ಚಿತ್ರ ಮಾಡುತ್ತೇನೆಂದು ಆರೋಪಿ ಐಶ್ವರ್ಯ ಓಡಾಟ ಮಾಡುತ್ತಿದ್ದು, ಆ ನಟನನ್ನು ಮೊದಲ ಬಾರಿಗೆ ಪಟ್ಟಣಗೆರೆ ಶೆಡ್‌ನಲ್ಲಿ ಭೇಟಿಯಾಗಿದ್ದು, ಈ ಭೇಟಿಯನ್ನು ನಟ ಧರ್ಮ ಮಾಡಿಸಿದ್ದ. ಈಕೆ ಚಿತ್ರೀಕರಣಕ್ಕೆಂದೇ ಐದು ಐಷರಾಮಿ ಕಾರನ್ನು ಕೊಟ್ಟಿದ್ದಳು. ಕಿರುತೆರೆ ನಟಿಯರು, ಸ್ಟಾರ್‌ ನಟನಿಗೂ ಈಕೆ ದುಬಾರಿ ಗಿಫ್ಟ್‌ಗಳನ್ನೆಲ್ಲ ನೀಡಿದ್ದಾಳೆ ಎನ್ನಲಾಗಿದೆ. ಹೀಗಾಗಿ ಸ್ಟಾರ್‌ ನಟ ಮತ್ತು ಕಿರುತೆರೆ ನಟಿಯರಿಗೆ ಪೊಲೀಸರು ನೋಟಿಸ್‌ ನೀಡುವ ಎಲ್ಲಾ ಸಾಧ್ಯತೆ ಇದೆ.

ವಂಚನೆ ಮಾಡುವ ಉದ್ದೇಶದಿಂದಲೇ ಐಶ್ವರ್ಯ ದಂಪತಿ ಎಸ್‌ಎಲ್‌ವಿ ಪ್ರೊಡಕ್ಷನ್‌ ಎಂಬುದನ್ನು 2021ರಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟ್ರೇಷನ್‌ ಮಾಡಿದ್ದಾರೆ ಎನ್ನುವ ಅನುಮಾನ ಪೊಲೀಸರಿಗೆ ಮೂಡಿದೆ. ಐಶ್ವರ್ಯ ಮೇಲಿರುವುದು 14 ಕೆಜಿ ಗೂ ಅಧಿಕ ಚಿನ್ನ ಪಡೆದ ಆರೋಪ. ಆದರೆ ಪೊಲೀಸರು ರಿಕವರಿ ಮಾಡಿದ್ದು ಕೇವಲ 100 ಗ್ರಾಂ ಅಷ್ಟೇ.

14 ಕೆಜಿ 660 ಗ್ರಾಂ ಚಿನ್ನ ವನಿತಾಳಿಂದ, 430ಗ್ರಾಂ ಚಿನ್ನ,3 ಕೋಟಿ 25ಲಕ್ಷ ಶಿಲ್ಪಗೌಡಳಿಂದ ಆರೋಪಿ ಐಶ್ವರ್ಯ ಪಡೆದಿದ್ದಾಳೆ.